ಬೆಟ್ಟದಷ್ಟು ತಪ್ಪುಗಳಿಗೆ... ಹುಲ್ಲಿಗಿಂತಲೂ ಕಡಿಮೆ ಶಿಕ್ಷೆ

ಡಿಸಿಸಿ ಬ್ಯಾಂಕ್‌ನಲ್ಲಿ ಅಕ್ರಮದ ವಾಸನೆ   

ಬೆಟ್ಟದಷ್ಟು  ತಪ್ಪುಗಳಿಗೆ... ಹುಲ್ಲಿಗಿಂತಲೂ ಕಡಿಮೆ ಶಿಕ್ಷೆ

ನಾಡನುಡಿ ನ್ಯೂಸ್ 
ಬಾಗಲಕೋಟೆ ಫೆ ೧೯:

ಗಂಭೀರ ಆರೋಪ,ವಿಶ್ವಾಸ ದ್ರೋಹದ ಪದ ಬಳಕೆಯ ಗಂಭೀರ ಪದ ಪ್ರಯೋಗ. ಆದರೆ ಶಿಕ್ಷೆ ಮಾತ್ರ ಮೂರು ದಿನಗಳ ವೇತನ ಕಡಿತ,ಎರಡು ಸಾವಿರ ರೂಪಾಯಿ ದಂಡ! 
   ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ ಸ್ವಜನ ಪಕ್ಷಪಾತದ ಆರೋಪ ಕೇಳಿ ಬರುತ್ತಿರುವಾಗಲೆ ಮುಖ್ಯ ಕಾರ್ಯನಿರ್ವಾಹಕರ ನಡೆ ಆರೋಪಕ್ಕೆ ಪುಷ್ಠಿ ಕೊಡುವಂತಿದೆ.
       ಡಿ.ಸಿ.ಸಿ ಬ್ಯಾಂಕ ಕೆರೂರ ಶಾಖೆಯ ಹಿರಿಯ ವ್ಯವಸ್ಥಾಪಕರ ವಿರುದ್ದ ಕೇಳಿ ಬಂದಿರುವ ಆರೋಪ ಅದಕ್ಕೆ ಸ್ವತಃ ಸಿ.ಇ.ಓ ನೀಡಿರುವ ಪ್ರತಿಕ್ರಿಯೆ ಗಾಬರಿಯಾಗುವಂತಹದ್ದು, ಆದರೆ ಅದನ್ನು ಕ್ಷಮಿಸುವ ರೀತಿಯಲ್ಲಿ ವಿಧಿಸಿರುವ. ದಂಡ ಪ್ರಕ್ರಿಯೆ ಅಚ್ಚರಿ ಮೂಡಿಸುವಂತಹದ್ದು.
         ಕೆರೂರಿನ  ಶಾಖಾ ವ್ಯವಸ್ಥಾಪಕರಿಗೆ ತಲುಪಿರುವ  ಪತ್ರವೆ ಎಲ್ಲ ಆರೋಪಗಳನ್ನು ಪುಷ್ಠಿಕರಿಸುತ್ತದೆ, ಶಾಖಾ ಲಾಕ್‌ರಿನಲ್ಲಿ ಬಂಗಾರದ ಆಭರಣಗಳ ಚೀಲದಲ್ಲಿ ೧೪ ಚೀಲಗಳು ವ್ಯತ್ಯಾಸ ಕಂಡು ಬಂದಿದೆ ಅವು ಲೆಕ್ಕಕ್ಕೆ ಸಿಗುತ್ತಿಲ್ಲ, ೮೨೭ ಬ್ಯಾಗಗಳಿರಬೇಕಾಗಿತ್ತು ಆದರೆ ಅಲ್ಲಿರುವ ೧೪  ಬ್ಯಾಗ್‌ಗಳು ಸ್ಟಾಕ್‌ನಲ್ಲಿ ಇಲ್ಲ!! ಇದಕ್ಕೆ ಉತ್ತರವೂ ಇಲ್ಲ.
    ಮುದ್ದತ ಠೇವು,ವಿಜಯಲಕ್ಷ್ಮಿ ಠೇವುಗಳ ಮೇಲೆ ನೀಡಿರುವ ಸಾಲದ ಖಾತೆಯಲ್ಲಿ ಠೇವಿನ ಅವಧಿ ಮುಕ್ತಾಯಗೊಂಡಿದ್ದರೂ ಸಾಲದ ಖಾತೆಗೆ ಜಮೆ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ,ಅನಾಮತ್ ಖಾತೆಯ ಪರಿಶೀಲನೆಯಲ್ಲಿ ವಿಮೆ ಹಣ ಸಂಬAಧಿಸಿದವರ ಖಾತೆಗೆ ಜಮೆ ಮಾಡದಿರುವ ಗಂಭೀರ ಆರೋಪ ಕೇಳಿ ಬಂದಿದೆ.
     ಇಷ್ಟು ಮಾತ್ರವಲ್ಲದೆ ಬಯೋಮೆಟ್ರಿಕ್ ಹಾಜರಾತಿಯಲ್ಲಿ ಬೇರೆ ಸಿಬ್ಬಂದಿಯಿAದ ಹಾಜರಾತಿ ಹಾಕಿಸಿರುವ ಗಂಭೀರ ಪ್ರಮಾಣದ ಆರೋಪ ಎಂದಿರುವ ಬ್ಯಾಂಕ ಸಿಇಓ ಇದನ್ನು ವಿಶ್ವಾಸ ದ್ರೋಹ ಎಂದು ಆಕ್ಷೇಪಿಸಿದ್ದಾರೆ ಆದರೆ ಈ ಅಪರಾಧಕ್ಕೆ ಮೂರು ದಿನ ವೇತನ ರಹಿತ ರಜೆ,ಶಿಸ್ತು ಕ್ರಮ ಎಂದು ಎರಡು ಸಾವಿರ ರೂಪಾಯಿ ದಂಡ ಮಾತ್ರ ವಿಧಿಸಿರುವುದು ಅಚ್ಚರಿಗೆ ಕಾರಣವಾಗಿದೆ. ತಪ್ಪಿತಸ್ಥರು ಎಂದು ಕಂಡ ತಕ್ಷಣವೂ ಸಣ್ಣಪ್ರಮಾಣದ ತೋರಕಿಯ ಶಿಕ್ಷೆ ನೀಡಿರುವುದು ಚರ್ಚೆಯನ್ನು ಹುಟ್ಟುಹಾಕಿದೆ. 
    ಇಷ್ಟೆಲ್ಲ ಹಗರಣ ನಡೆದಿದ್ದರೂ ಅಮಾನತ್ತಿನ ಶಿಕ್ಷೆ ಇಲ್ಲ ,ಇನ್ನೊಮ್ಮೆ ಇಂತಹ ಘಟನೆ ನಡೆದರೆ ನೌಕರಿಯಿಂದ ತೆಗೆದು ಹಾಕುವ ಎಚ್ಚರಿಕೆ ನೀಡಿ ಪ್ರಕರಣ ಮುಕ್ತಾಯಗೊಳಿಸಲಾಗಿದೆ,ಆರ್ಥಿಕ ಶಿಸ್ತು ಕಾಪಾಡಬೇಕಾದ ಬ್ಯಾಂಕ ನೀಡಿರುವ ಸಂದೇಶವಾದರೂ ಏನು? ಎಂಬುದೆ ಸಾರ್ವಜನಿಕ ಪ್ರಶ್ನೆ