ನಿವೇಶನಕ್ಕೆ ಖೊಟ್ಟಿ ದಾಖಲೆ: ೧೫ ಜನರ ವಿರುದ್ಧ ದೂರು ದಾಖಲು
ಬಾಗಲಕೋಟೆ: ನವನಗರದಲ್ಲಿ ಸಂತ್ರಸ್ತರಿಗೆ ಮೀಸಲಿಟ್ಟಿರುವ ನಿವೇಶನ ಪಡೆಯಲು ಖೊಟ್ಟಿ ದಾಖಲೆ ನೀಡಿ ವಂಚಿಸಲು ಯತ್ನಿಸಿದ ೧೫ ಜನರ ವಿರುದ್ಧ ಬಿಟಿಡಿಎ ಪುನರ್ವಸತಿ ಅಧಿಕಾರಿಯಾಗಿದ್ದ ಪ್ರಶಾಂತ ಬಾರಿಗಿಡದ ಅವರು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಾದ ಯಂಕಪ್ಪ ಗಿರಿಯಪ್ಪ ಮೆಟ್ಟಿನ, ಗಂಗವ್ವ ಗಿರಿಯಪ್ಪ ಮೆಟ್ಟಿನ, ಲಕ್ಷö್ಮಣ ಹಣಮಂತಪ್ಪ ಬಿಲ್ಲನ್ನವರ, ಗೀತಾ ವೆಂಕಪ್ಪ ಗುಳೇದ, ಗಿರಿಜಾ ವೆಂಕಪ್ಪ ಗುಳೇದ, ಜಗದೀಶ ತ್ಯಾಪಿ ಅವರುಗಳು ಬಿಟಿಡಿಎಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುವ ಕಾಲಕ್ಕೆ ನಕಲಿ ಮತದಾರರ ಪಟ್ಟಿಯನ್ನು ಸೃಷ್ಟಿ ಮಾಡಿ ಸಲ್ಲಿಸಿದ್ದು, ಅವರಿಗೆ ನೆರವಾಗಿ ಮೆಹಬೂಬ ಬೇಪಾರಿ, ಅರುಣ ಅಂಬೋರೆ, ಮೆಹಬೂಬ ಜಮಖಂಡಿ, ತೌಸಿಪ್ ಬಾಗಲವಾಡಿ, ಅಬ್ದುಲ್‌ಮಜೀದ ಬಂಕೂರ, ಸಂತೋಷ ಕಪಾಟೆ, ಸತೀಶ ಗಾಯಕವಾಡ, ಮುರಿಗೆಪ್ಪ ಸೋರಗಾವಿ, ಸಲೀಂ ಶೇಖ್ ಅವರುಗಳು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಪ್ರಶಾಂತ ಬಾರಿಗಿಡದ ಅವರು ದೂರಿದ್ದಾರೆ.
ಬಿಟಿಡಿಎಯಲ್ಲಿ ಇಂಥದೊAದು ದಂಧೆ ನಡೆಯುತ್ತಿರುವ ಆರೋಪಗಳು ಸಾರ್ವಜನಿಕವಾಗಿ ಚರ್ಚೆಯಲ್ಲಿದ್ದವು. ಆದರೆ ಮೊದಲ ಬಾರಿಗೆ ಅಧಿಕಾರಿ ಪ್ರಶಾಂತ ಬಾರಿಗಿಡಿದ ಅವರು ಕೆಲ ಏಜೆಂಟರೂ ಸೇರಿದಂತೆ ಅರ್ಜಿದಾರರ ವಿರುದ್ಧ ದೂರು ಸಲ್ಲಿಸಿದ್ದು, ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.