ಕೊರೊನಾ ಮಂಗಮಾಯ, ಕರುಣೆ ತೋರದ ಗಂಗಮ್ಮ, ಕರಿ ಟೊಪಗಿ ಉದ್ದನ‌ ಬಡಗಿ: ಇಲ್ಲಿದೆ ಹೆಬ್ಬಳ್ಳಿ ಅಜ್ಜನ ಭವಿಷ್ಯವಾಣಿ

ಬಾದಾಮಿ ತಾಲೂಕಿನ ಹೆಬ್ಬಳ್ಳಿ ಅಜ್ಜ ಅವರು ಮೋಹರಂ ಸಂದರ್ಭದಲ್ಲಿ ನುಡಿದಿರುವ ಭವಿಷ್ಯವಾಣಿಯ ವಿಶ್ಲೇಷಣೆ ಇಲ್ಲಿದೆ.

ಕೊರೊನಾ ಮಂಗಮಾಯ, ಕರುಣೆ ತೋರದ ಗಂಗಮ್ಮ, ಕರಿ ಟೊಪಗಿ ಉದ್ದನ‌ ಬಡಗಿ: ಇಲ್ಲಿದೆ ಹೆಬ್ಬಳ್ಳಿ ಅಜ್ಜನ ಭವಿಷ್ಯವಾಣಿ

ನಾಡನುಡಿ ನ್ಯೂಸ್

ಬಾಗಲಕೋಟೆ:

ಜಗತ್ತು‌ ಹೆದರುತ್ತಿರುವ ರೋಗವೊಂದು ತಿಂಗಳು ಒಪ್ಪತ್ತಿನಲ್ಲಿ ಹೇಳ‌ ಹೆಸರಿಲ್ಲದೇ ಮಾಯವಾಗಲಿದೆ ಎಂದು ಬಾದಾಮಿ ತಾಲೂಕಿನ‌‌ ಹೆಬ್ಬಳ್ಳಿ ಅಜ್ಜ ಎಂದೇ ಖ್ಯಾತರಾಗಿರುವ ಶ್ರೀಗುರುದತ್ತ ಲಾಲಸಾಬ್ ಅಲಿ ಹೆಬ್ಬಳ್ಳಿ ಅಜ್ಜ ಭವಿಷ್ಯ ನುಡಿಯುವುದರ‌ ಮೂಲಕ ಕೊರೊನಾ ಕಣ್ಮರೆಯಾಗುವ ಸೂಚನೆ ಕೊಟ್ಟಿದ್ದಾರೆ.

ಮೋಹರಂ ಸಂದರ್ಭದಲ್ಲಿ ಭವಿಷ್ಯವಾಣಿ ನುಡಿದಿರುವ ಅವರುಜನ ಹೆದರುತ್ತಿರುವ ರೋಗ ಸದ್ಯದಲ್ಲೇ ನಾಪತ್ತೆಯಾಗಲಿದೆ ಎಂದು ಜನರಿಗೆ ಅಭಯ ನೀಡಿದ್ದಾರೆ.

 "ಇನ್ನೂ ಮೂರು ವರ್ಷಕ್ಕೆ ಹಂಸಾಕತ್ತೈತಿ ಕರಿ ಟೊಪ್ಪಗಿ-ಉದ್ದನ‌ ಬಡಗಿ ಬರತೈತಿ " ಎಂದೂ ಹೇಳಿದ್ದು, ಅವರ ಈ ಹೇಳಿಕೆಯನ್ನು ಇನ್ನಷ್ಟೇ ವಿಶ್ಲೇಷಿಸಬೇಕಿದೆ.
ಇದರ ಜತೆಗೆ ಕಲಿಸಿದವರೇ ಕೊಲ್ಲಲು ಹೇಳುತ್ತಾರೆ, ಮಳಿಯಪ್ಪ-ಹೊಳಿಯಪ್ಪನಿಂದ ಆತಂಕ ಇದ್ದು ಜನ ಎಚ್ಚರದಿಂದ ಇರಲು ಸೂಚಿಸಿದ್ದಾರೆ.
 ಬಿಳಿಜೋಳ ಹಾಗೂ ಕರಿಜೋಳ ಎರಡರ ಬೆಳೆಯೂ ಉತ್ತಮವಾಗಿ ಬರಲಿದ್ದು, ಗಂಗಮ್ಮ ಮತ್ತೊಮ್ಮೆ ಕಾಡಲಿದ್ದಾಳೆ. ಈ ಬಗ್ಗೆ ರೈತರು ಹೆಚ್ಚು ಜಾಗರೂಕರಾಗಿರಬೇಕೆಂದು ಮಳೆ ಹೆಚ್ಚಾಗುವ ಮುನ್ಸೂಚನೆ ನೀಡಿದ್ದಾರೆ.೭ ಮಂಡಲಕ್ಕೆ ಹೆಚ್ಚಿನ ಮಳೆ ಬೀಳಲಿದೆ ಎಂದು ಅವರು ಹೇಳಿದ್ದಾರೆ..
 "ಮ್ಯಾಲೆ ಒಂದು ಕೆಳಗೆ ಮೂರು" ಎಂದಿರುವ ಅವರು ರಾಜಕೀಯ ಮುನ್ಸೂಚನೆ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರ ಹಿಡಿಯಲಿದ್ದು, ಕೆಳಗೆ ಸಮ್ಮಿಶ್ರ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯುವ ಸೂಚನೆಯನ್ನು ಅವರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಮ್ಮನ್ನು ನಂಬಿ ಬಂದಿರುವ ಭಕ್ತರಿಗೆ ಏನೂ ಆಗದಂತೆ ನೋಡಿಕೊಳ್ಳುವುದಾಗಿಯೂ ಅವರು ಆಶೀರ್ವದಿಸಿದ್ದಾರೆ.