ಬಾಗಲಕೋಟೆಯಲ್ಲೇ ಏಮ್ಸ್ ಆರಂಭಕ್ಕೆ ಶುರುವಾಯಿತು ಟ್ವಿಟ್ಟರ್ ಅಭಿಯಾನ
ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಏಮ್ಸ್ ನ್ನು ಬಾಗಲಕೋಟೆಯಲ್ಲಿ ಸ್ಥಾಪಿಸುವಂತೆ ಟ್ವಟ್ಟರ್ ಅಭಿಯಾನ ಶುರುವಾಗಿದೆ ಅದಕ್ಕೆ ಧ್ವನಿಗೂಡಿಸಿರುವ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.
ಬಾಗಲಕೋಟೆ:
ರಾಜ್ಯದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಏಮ್ಸ್ ಅನ್ನು ಬಾಗಲಕೋಟೆಯಲ್ಲೇ ಆರಂಭಿಸಬೇಕೆಂದು ಟ್ವಿಟರ್ ಅಭಿಯಾನ ಶುರುವಾಗಿದೆ.
ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಬಾಗಲಕೋಟೆ ಅಥವಾ ಗದಗ ಬೌಗೋಳಿಕವಾಗಿ ಎಲ್ಲ ಉತ್ತರ ಕರ್ನಾಟಕದ ಮಧ್ಯಭಾಗದಲ್ಲಿ ಬರುವುದರಿಂದ ಈ ಎರಡು ನಗರಗಳನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಎಂಬ ಸಲಹೆಯನ್ನಿಟ್ಟು ಟ್ವಿಟ್ಟರ್ ಅಭಿಯಾನ ಶುರು ಮಾಡಲಾಗಿದೆ.
ಹೈದರಾಬಾದ್ ಮತ್ತು ವಿಜಯವಾಡ ಏಮ್ಸ್ ಗಳು ರಾಯಚೂರಿನಿಂದ ೩೫೦ ಕಿ.ಮೀ.ವ್ಯಾಪ್ತಿಯಲ್ಲಿದ್ದು, ಬೀದರ್ ಮತ್ತು ಕಲಬುರ್ಗಿ ನಗರಗಳ ೨೦೦ ಕಿ.ಮೀ.ವ್ಯಾಪ್ತಿಗೆ ಹೈದ್ರಾಬಾದ್ ಏಮ್ಸ್ ಒಳಪಡುತ್ತದೆ ಹೀಗಾಗಿ ಗದಗ, ಬಾಗಲಕೋಟೆಗೆ ಅವಕಾಶ ಮಾಡಿಕೊಡಬೇಕೆಂದು ಬೆಳಕು ಚೆಲ್ಲಲಾಗಿದೆ.
ಬಾಗಲಕೋಟೆ ಅಥವಾ ಗದಗ ಜಿಲ್ಲೆಗೆ ಮಾಡಿದರೆ ೨೦೦ ರಿಂದ ೩೦೦ ಕಿ.ಮೀ ವ್ಯಾಪ್ತಿಯ ಏಳೆಂಟು ಜಿಲ್ಲೆಗಳು ಬರಲಿದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೂ ಹತ್ತಿರವಾಗಲಿವೆ ಹೀಗಾಗಿ ಪರಿಶೀಲಿಸಬೇಕೆಂದು ಟ್ವಿಟ್ಟರ್ ಮೂಲಕ ಗಮನಸೆಳೆಲಾಗುತ್ತಿದೆ.