ಎಪಿಎಂಸಿ : ವಾರದ ರಜೆ ರದ್ದು
ಬಾಗಲಕೋಟೆ: ರೈತರು ಬೆಳೆದ ತರಕಾರಿ ಉತ್ಪನ್ನಗಳು ಬೇಗ ನಶಿಸಿ ಹೋಗುವುದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ಪ್ರತಿ ಶುಕ್ರವಾರದ ದಿವಸ ಕಾಯಿಪಲ್ಲೆ ಹಾಗೂ ಹಣ್ಣು ಹಂಪಲಗಳ ವಹಿವಾಟಿಗೆ ವಾರದ ರಜೆ ಘೋಷಿಸಿರುವುದನ್ನು ರದ್ದುಪಡಿಸಿ, ಈ ಹಿಂದಿನAತೆ ವಾರದ ೭ ದಿವಸಗಳ ತರಕಾರಿ ಹಾಗೂ ಹಣ್ಣು ಹಂಪಲ ವಹಿವಾಟವನ್ನು ಪ್ರಾರಂಭಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಎಪಿಎಂಸಿ ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ ಅಮರೇಶ ಪಮ್ಮಾರ ಮತ್ತು ಎಪಿಎಂಸಿ ಸಮಿತಿಯ ಕಾರ್ಯದರ್ಶಿ ವಿ.ಡಿ.ಪಾಟೀಲ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.