ಎಪಿಎಂಸಿ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಆಗ್ರಹ
ಬಾಗಲಕೋಟೆ ಫೆ.೩:
ನವನಗರದ ಎಪಿಎಂಸಿ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವಂತೆ ಶ್ರೀಮಾಧವ ಸೇವಾ ಕೇಂದ್ರ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಬುಧವಾರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ ಕೇಂದ್ರದ ಪದಾಧಿಕಾರಿಗಳು ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದು, ಅವರ ಐಕ್ಯ ಭೂಮಿಯೂ ಸಹ ಇದೇ ಆಗಿದೆ. ಈ ಹಿನ್ನೆಲೆಯಲ್ಲಿ ಅವರ ತತ್ವ, ವಿಚಾರಗಳನ್ನು ಸಾರಲು ಎಪಿಎಂಸಿ ವೃತ್ತದಲ್ಲಿ ಬಸವೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದರು.
ಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಬಸವಣ್ಣನವರು ಸಮಾಜದಲ್ಲಿ ಮೌಢ್ಯವನ್ನು ತೊಡೆದುಹಾಕುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ ಅವರ ತತ್ವ, ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ ಹೀಗಾಗಿ ಅವರ ಪ್ರತಿಮೆಯನ್ನು ಜಿಲ್ಲಾಡಳಿತ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದರು.
ಕಾರ್ಯದರ್ಶಿ ಅರವಿಂದ ನಾವಲಗಿ, ನಗರಸಭೆ ಸದಸ್ಯ ಚೆನ್ನವೀರ ಅಂಗಡಿ, ಮಲ್ಲು ಅವರಾದಿ, ವಿಜಯ ಮುಳ್ಳುರ, ಶಿವಾನಂದ ಮಲ್ಲಾಪುರ, ಅಜಿತ ಕುಲಕರ್ಣಿ, ಭರತ ಲೋಖಂಡೆ, ಜಯರಾಜ ಹಾಡಿಕರ್, ಮರಿಯಪ್ಪ ಅಂಬಿಗೇರ, ಲಂಕೇಶ ಚಿನಿವಾಲರ, ಸಾಗರ ಹಿಪ್ಪರಗಿ, ಕೇಶವ ಕುಲಕರ್ಣಿ, ಸಂದೀಪ ಬೆಳಗಲ್ಲ, ಶ್ರೀನಿವಾಸ ಗುಮಾಸ್ತೆ ಉಪಸ್ಥಿತರಿದ್ದರು.