ಮನೆಗೆ ಕನ್ನ ಹಾಕಿದ ಕಳ್ಳರು..
ಬಾಗಲಕೋಟೆ: ನವನಗರದ ಮೂರನೇ ಸೆಕ್ಟರ್‌ನಲ್ಲಿ ಹಾಡಹಗಲೇ ಮನೆಯೊಂದಕ್ಕೆ ಕಳ್ಳರು ಕನ್ನ ಹಾಕಿರುವ ಘಟನೆ ಮಂಗಳವಾರ ನಡೆದಿದೆ.
ಬಸವರಾಜ ಎಂಬುವವರ ಮನೆಕಳ್ಳತನ ಮಾಡಿರುವ ಕಳ್ಳರು ೧೦ ತೊಲ ಚಿನ್ನಾಭರಣ ದೋಚಿದ್ದಾರೆ ಎಂದು ಹೇಳಿಲಾಗಿದೆ. ನಗರ ಹೊರವಲಯದ ಮುರನಾಳ ಗ್ರಾಮದಲ್ಲಿ ಕಳ್ಳರು ಕೈಚೆಳಕ ತೋರಿ ಪೊಲೀಸರು ಅಲರ್ಟ್ ಆಗಿರುವುದರ ಮಧ್ಯೆಯೆ ಅದಕ್ಕೆ ಹತ್ತಿರವಾಗಿರುವ ನವನಗರದಲ್ಲೂ ಅದೇ ಮಾದರಿಯ ಕಳ್ಳತನ ನಡೆದಿದೆ.
ಒಂದೇ ಗುಂಪಿನ ಹೊರರಾಜ್ಯದ ಕಳ್ಳರು ಈ ರೀತಿ ಕೈಚೆಳಕ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಕಳ್ಳತನ ಪ್ರಕರಣಗಳು ಇತ್ತೀಚೆಗೆ ನಗರದಲ್ಲಿ ಹೆಚ್ಚಳಗೊಂಡು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಬೇಕೆಂದು ಒತ್ತಾಯ ಕೇಳಿ ಬಂದಿದೆ.