ಬಾಗಲಕೋಟೆ ಪುಣ್ಯಕ್ಷೇತ್ರಗಳ ಸುತ್ತಮುತ್ತ
ತ್ರಿವೇಣಿ ಸಂಗಮ, ಸಮೃದ್ಧ ಕೃಷಿ ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಪುಣ್ಯಕ್ಷೇತ್ರಗಳು ಕಡಿಮೆ ಏನಿಲ್ಲ. ಒಂದು ಕಡೆ ಕೃಷ್ಣೆ ದಡದಲ್ಲಿ ಜಿಲ್ಲಾ ಗಡಿಗೆ ಹೊಂದಿಕೊಂಡಂತೆ ಏಳೂರು ಒಡೆಯ ಶ್ರೀ ಯಲಗೂರೇಶನಿದ್ದರೆ, ಬಾದಾಮಿ ಬಳಿ ನೆಲೆ ನಿಂತ್ತಿರುವ ಬನಶಂಕರಿ ದೇವಿ ಇಲ್ಲಿನ ಜನ ಆರಾಧ್ಯ ದೇವತೆ.
ನಾಡನುಡಿ ವಿಶೇಷ
ಬಾಗಲಕೋಟೆ :
ತ್ರಿವೇಣಿ ಸಂಗಮ, ಸಮೃದ್ಧ ಕೃಷಿ ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಪುಣ್ಯಕ್ಷೇತ್ರಗಳು ಕಡಿಮೆ ಏನಿಲ್ಲ.
ಒಂದು ಕಡೆ ಕೃಷ್ಣೆ ದಡದಲ್ಲಿ ಜಿಲ್ಲಾ ಗಡಿಗೆ ಹೊಂದಿಕೊಂಡಂತೆ ಏಳೂರು ಒಡೆಯ ಶ್ರೀ ಯಲಗೂರೇಶನಿದ್ದರೆ, ಬಾದಾಮಿ ಬಳಿ ನೆಲೆ ನಿಂತ್ತಿರುವ ಬನಶಂಕರಿ ದೇವಿ ಇಲ್ಲಿನ ಜನ ಆರಾಧ್ಯ ದೇವತೆ.ಜಿಲ್ಲೆ ಹಲವು ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿಯನ್ನು ಒದಗಿಸುವ ಲೇಖನ ಇಲ್ಲಿದೆ ಓದಿ.
ಏಳೂರ ಒಡೆಯ ಯಲಗೂರದಪ್ಪ
ಬಾಗಲಕೋಟೆಯಿಂದ 47 ಕಿ.ಮೀ.ದೂರದಲ್ಲಿರುವ ಸುಕ್ಷೇತ್ರ ಯಲಗೂರದ ಪ್ರಾಣದೇವರು ಏಳೂರು ಒಡೆಯನೆಂದೇ ಪ್ರಸಿದ್ಧಿ ಪಡೆದಿದ್ದಾನೆ. ಅತ್ಯಂತ ಜಾಗೃತ ಹನುಮನಾಗಿರುವ ಯಲಗೂರದಪ್ಪ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂಬ
ನಂಬಿಕೆ ಇದೆ. ಕ್ಷೇತ್ರದಲ್ಲಿ ನೆಲೆಸಲು ಅರ್ಚಕರ ಮನೆಗಳಿದ್ದ, ೫ ಕಿಮೀ ಸಮೀಪದಲ್ಲಿ ಆಲಮಟ್ಟಿ ಇದೆ. ಲಾಲ ಬಹದೂರ ಶಾಸ್ತ್ರಿ ಜಲಾಶುವಿದ್ದು, ಮೈಸೂರು ಬೃಂದಾವನ ರೀತಿಯ ಉದ್ಯಾನವೂ ಇದೆ. ಹೀಗಾಗಿ ಸುತ್ತಮುತ್ತಲಿನ ಪ್ರವಾಸಿ ತಾಣಗಳ ವೀಕ್ಷಣೆಗೂ ನೀವು ಪ್ಲಾನ್ ಮಾಡಬಹುದು.
ಆರಾಧ್ಯ ದೇವತೆ ಬನಂಶಕರಿದೇವಿ
ಚಾಲುಕ್ಯರ ಕುಲದೇವತೆ ಬನಂಕರಿದೇವಿ ನೆಲೆಸಿದ್ದು ಬಾದಾಮಿಯಿಂದ ೫ ಕಿ.ಮೀ.ದೂರದಲ್ಲಿ . ಬನಶಂಕರಿ ದೇವಿ ದರ್ಶನಕ್ಕೆ ನೀವು ಅಗಮಿಸಿದರೆ ಬಾದಾಮಿ, ಪಟ್ಟದಕಲ್ಲು, ಐಹೊಳೆ,ಮಹಾಕೋಟದಂಥ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಬಹುದು.
ಹಾನಗಲ್ ಶ್ರೀಕುಮಾರೇಶ್ವರರಿಂದ ಸ್ಥಾಪಿತವಾದ ಶಿವಯೋಗ ಮಂದಿರವೂ ಅಲ್ಲಿಯೇ ಇದ್ದು, ಶುದ್ಧ ವಿಭೂತಿ ತಯಾರಿಕೆಯ ಏಕೈಕ ಸ್ಥಳವಾಗಿದೆ.
ತ್ರಿವೇಣಿ ಸಂಗಮ ಕೂಡಲಸಂಗಮ
ಕೂಡಲ ಸಂಗಮನಾಥನ ಸಾನಿಧ್ಯ ಜತೆಗೆ ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪವೂ ಇಲ್ಲಿದೆ. ಮೂರು ನದಿಗಳು ಸೇರಿವ ಈ ತ್ರಿವೇಣಿ ಸಂಗಮ ಬಸವಾದಿ ಶರಣರ ಪುಣ್ಯಭೂಮಿ ಆಗಿದೆ. ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಈ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಆಗಮಿಸುವ ಭಕ್ತರಿಗೆ ಯಾತ್ರಿನಿವಾಸ ಸೇರಿ ವಸತಿಗೆ ಸಾಕಷ್ಟು ವ್ಯವಸ್ಥೆಗಳು ಲಭ್ಯವಿವೆ.
ಭಕ್ತರ ಕಾಯುವ ತುಳಸಿಗಿರಿ ಹನುಮ
ಜಿಲ್ಲಾ ಕೇಂದ್ರ ಬಾಗಲಕೋಟೆಯಿಂದ ೧೫ ಕಿ.ಮೀ ದೂರದಲ್ಲಿರುವ ತುಳಸಿಗೇರಿ ಕ್ಷೇತ್ರಕ್ಕೆ ನೀವೊಮ್ಮೆ ಭೇಟಿ ಕೊಡಲೇಬೇಕು. ಅನೇಕರಿಗೆ ಕುಲದೇವರಾಗಿರುವ ಈ ಹನುಮನ ದೇಗುಲ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರತಿ ಶನಿವಾರ ಇಲ್ಲಿ ಜನಜಾತ್ರೆಯೇ ನೆರೆದಿರುತ್ತದೆ. ಗೋಪಾಲ ಕಟ್ಟೆ, ಗೋವಿಂದ ಗೋವಿಂದ ಎಂದು ಸಾಗುವ ಭಕ್ತರ ದಂಡು ನೋಡುವುದೇ ಚೆಂದ.
ಚಿಕ್ಕಸಂಗಮದ ಸೊಬಗು ಬಲು ಚೆಂದ
ಬೀಳಗಿಯಿಂದ ಮುಂದೇ ಆಗಿ ಬಾಡಗಂಡಿ ಬಳಿ ಬಲ ತಿರುವು ಪಡೆದು ೧೫ ಕಿ.ಮೀ ಸಾಗಿದರೆ ನಿಸರ್ಗರಮಣೀಯ ಸ್ಥಳದಲ್ಲಿ ನೆಲೆ ನಿಂತ್ತಿರುವ ಚಿಕ್ಕಸಂಗಮನಾಥನ ದೇಗುಲ ಸಿಗುತ್ತದೆ.ಶಾಂತ ಪರಿಸರದಲ್ಲಿ ತಿಳಿಯಾಗಿ ಹರಿಯುವ ಕೃಷ್ಣೆ ಅಂದ ನೋಡುವುದೇ ಅಲ್ಲಿ ಬಲಚೆಂದದ ಕೆಲಸ. ಕುಟುಂಬಸ್ಥರ ಜತಗೆ ಭರ್ಜರಿ ರೊಟ್ಟಿ ಊಟ ಕಟ್ಕೊಂಡು ನೀವು ಹೋದರೆ ದಿನವಿಡೀ ಅಲ್ಲಿ ಮಜಾ ಮಾಡಬಹುದು.
ಗಲಗಲಿ, ಶೂರ್ಪಾಲಿಯಲ್ಲಿ ನೆಲೆನಿಂತ ನರಸಿಂಹ
ಬೀಳಗಿ ಬಳಿಯ ಗಲಗಲಿ ಹಾಗೂ ಜಮಖಂಡಿ ಬಳಿಯ ಶೂರ್ಪಾಲಿ ಕ್ಷೇತ್ರಗಳಲ್ಲಿ ನರಸಿಂಹ ದೇವರು ನೆಲೆ ನಿಂತ್ತಿದ್ದಾರೆ. ಎರಡೂ ಕ್ಷೇತ್ರಗಳಿಗೆ ಸಾವಿರಾರು ಸಂಖ್ಯೆ ಭಕ್ತರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಈ ಎಲ್ಲ ಕ್ಷೇತಗಳ ಸವಿವರ ಮಾಹಿತಿಯನ್ನು ನಾವು ಮುಂದಿನ ಕಂತಿನಲ್ಲಿ ನೀಡುತ್ತೇವೆ.
ನಿಮ್ಮ ನಾಡನುಡಿ ಜಿಲ್ಲೆಯ ಸಂಸ್ಕೃತಿ, ಆಧ್ಯಾತ್ಮ ವನ್ನು ನಿರಂತರವಾಗಿ ಪರಿಚಯಿಸುವ ಕಾರ್ಯವನ್ನು ಮಾಡಲಿದ್ದು, ನಿಮ್ಮೂರಿನ ಪುಣ್ಯಕ್ಷೇತ್ರ, ಸಂಸ್ಕೃತಿಯನ್ನು ಪರಿಚಯಿಸಲು ನಮ್ಮ ವಾಟ್ಸಪ್ ಸಂಖ್ಯೆ: 74011 23567ಗೆ ಕಳುಹಿಸಿ.