ವಿಕ್ರಮಕ್ಕೆ ಪತ್ರಕರ್ತ ರಮೇಶ ದೊಡ್ಡಪುರ ಸಾರಥಿ

ವಿಕ್ರಮಕ್ಕೆ ಪತ್ರಕರ್ತ ರಮೇಶ ದೊಡ್ಡಪುರ ಸಾರಥಿ

ಬಾಗಲಕೋಟೆ:
ರಾಷ್ಟ್ರೀಯತೆಯ ವಿಚಾರ ಸಾರುವ ವಿಕ್ರಮ ವಾರಪತ್ರಿಕೆ ಸಂಪಾದಕರಾಗಿ ಪತ್ರಕರ್ತ ರಮೇಶ ದೊಡ್ಡಪುರ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

 ಕನ್ನಡದ ನಂ.೧ದಿನಪತ್ರಿಕೆ ವಿಜಯವಾಣಿಯಲ್ಲಿ ವರದಿಗಾರರಾಗಿ, ಉಪಮುಖ್ಯವರದಿಗಾರರಾಗಿ ಕಾರ್ಯನಿರ್ಹಿಸಿದ್ದಾರೆ.

ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ನೇತೃತ್ವದ ವಿಸ್ತಾರ ವಾಹಿನಿಯ ಡಿಜಿಟಲ್ ವಿಭಾಗದಲ್ಲೂ ಕೆಲಸ ಮಾಡಿರುವ ಅವರು ರಾಜಕೀಯ ವರದಿಗಾರಿಕೆ ಅನುಭವ ಹೊಂದಿದ್ದಾರೆ.

ಕುವೆಂಪು ಭಾಷಾಭಾರತಿ ಹೊರ ತಂದಿರುವ ಪಂ.ದೀನದಯಾಳ ಉಪಾಧ್ಯಾಯ ಕುರಿತಾದ ಗ್ರಂಥ ರಚನಾ ಕಾರ್ಯದಲ್ಲೂ ಕೆಲಸ ಮಾಡಿರುವ ರಮೇಶ ೨೦೧೯ರ ಲೋಕಸಭೆ ಚುನಾವಣೆ ಕುರಿತಾದ ೨೫+೧ ಬಿಜೆಪಿಗೆದ್ದ ಕತೆ ಕುರಿತು ಪುಸ್ತಕ ಬರೆದು ಗಮನಸೆಳದಿದ್ದಾರೆ.

ಅಧ್ಯಯನಶೀಲ ಪತ್ರಿಕೋದ್ಯಮದಲ್ಲಿ ಆಸಕ್ತರಾಗಿರುವ ಅವರು ವಿಜಯವಾಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕನ್ನಡ ಸಂಸ್ಕೃತಿ ಇಲಾಖೆಯ ಹಲವು ಗಮನಸೆಳೆಯುವ ವರದಿಗಳನ್ನು ಮಾಡಿದ್ದಾರೆ.