ಬಾಗಲಕೋಟೆ ಡಿಸಿಯಾಗಿ ಪಿ.ಸುನೀಲಕುಮಾರ 

ಬಾಗಲಕೋಟೆ ಡಿಸಿಯಾಗಿ ಪಿ.ಸುನೀಲಕುಮಾರ 


ಬಾಗಲಕೋಟೆ ಮೇ ೨೦: 
ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಪೊಮ್ಮಲು ಸುನೀಲ್‌ಕುಮಾರ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ ಪಿ.ಸುನೀಲ ಕುಮಾರ ಅವರು ೨೦೧೧ ಬ್ಯಾಚಿನ ಐಎಎಸ್ ಅಧಿಕಾರಿ. ವಿಜಯಪುರಕ್ಕೆ ವಿಜಯಮಹಾಂತೇಶ ದಾನಮ್ಮನವರ ಅವರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ನಂತರ ಪಿ.ಸುನೀಲಕುಮಾರ ಅವರಿಗೆ ಯಾವುದೇ ಹುದ್ದೆಯನ್ನು ನೀಡರಲಿಲ್ಲ. ಮೇ ೨೦ರಂದು ಆದೇಶ ಹೊರಡಿಸಿರುವ ಸರ್ಕಾರ ಬಾಗಲಕೋಟೆ ಡಿಸಿಯಾಗಿ ಸುನೀಲಕುಮಾರ ಅವರನ್ನು ವರ್ಗಾವಣೆಗೊಳಿಸಿದೆ. ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ವರ್ಗಾವಣೆ ನಂತರ ಜಿಪಂ ಸಿಇಒ ಟಿ.ಭೂಬಾಲನ್ ಅವರಿಗೆ ಬಾಗಲಕೋಟೆ ಡಿಸಿಯ ಹುದ್ದೆಯನ್ನು ನೀಡಲಾಗಿತ್ತು. ಈಗ ಪೂರ್ಣಪ್ರಮಾಣದಲ್ಲಿ ಡಿಸಿಯಾಗಿ ಸುನೀಲಕುಮಾರ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ.