ಒಂದೇ ದಿನ ಜಿಲ್ಲೆಯಲ್ಲಿ ೯ ಸೆಂ.ಮೀ.ಮಳೆ: ಸಂಭವನೀಯ ಪ್ರವಾಹ ಎದುರಿಸಲು ಜಿಲ್ಲಾಡಳಿತಕ್ಕೆ ಸೂಚನೆ
ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ ೯ ಸೆಂ.ಮೀ.ಮಳೆ ಬಿದ್ದಿದ್ದು ಸಂಭವನೀಯ ಪ್ರವಾಹ ಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಡಳಿತಕ್ಕೆ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ
ನಾಡನುಡಿ ನ್ಯೂಸ್
ಬಾಗಲಕೋಟೆ:
ಜಿಲ್ಲೆಯಲ್ಲಿ ಮೇ ೧೯ರ ಗುರುವಾರ 9 ಸೆಂ.ಮೀ.ಮಳೆಯಾಗಿದ್ದು, ಸಾರ್ವಜನಿಕರಿಗೆ ದಿನದ ೨೪ಗಂಟೆ ಸ್ಪಂದಿಸುವ ರೀತಿಯಲ್ಲಿ ಸನ್ನದರಾಗಿರುವಂತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವ ಅವರು ಕಳೆದ ಎರಡ್ಮೂರು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಮುಂದಿನ ಮೂರ್ನಾಲ್ಕು ದಿನ ಸಾಧಾರಣದಿಂದ ಭಾರೀ ಮಳೆಬೀಳುವ ಮುನ್ಸೂಚನೆ ಇದೆ. ಆಡಳಿತ ಯಂತ್ರವನ್ನು ಸಂಪೂರ್ಣ ಸನ್ನದ್ಧವಾಗಿರಿಸುವಂತೆ ಸೂಚಿಸಿದ್ದಾರೆ.
ಮಳೆ ಮತ್ತು ಸಂಭವನೀಯ ಪ್ರವಾಹ ಸ್ಥಿತಿಯನ್ನು ಎದುರಿಸಲು ಚುರುಕಾಗಿ ಕರಲಸ ಮಾಡಬೇಕು. ಕಳೆದ ಎರಡ್ಮೂರು ದಿನಗಳ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕೆಲಸ ಮಾಡಬೇಕೆಂದು ಹೇಳಿದರು.