ಬರಿದಾದ ಬನಶಂಕರಿ ಪುಷ್ಕರಣಿ: ಭಕ್ತರಿಗೆ ನಿರಾಸೆ

ಬರಿದಾದ ಬನಶಂಕರಿ ಪುಷ್ಕರಣಿ: ಭಕ್ತರಿಗೆ ನಿರಾಸೆ
ಬಾಗಲಕೋಟೆ: ಸುಕ್ಷೇತ್ರ ಬಾದಾಮಿ ಬನಶಂಕರಿದೇವಿ ವೈಭವಯುತ ಜಾತ್ರೆ  ಆರಂಭಗೊAಡರೂ ದೇಗುಲ ಮುಂಭಾಗದ ಕಲ್ಯಾಣಿಯನ್ನು ಭರ್ತಿ ಮಾಡದಿರುವುದಕ್ಕೆ ತಾಲೂಕಾಡಳಿತದ ವಿರುದ್ಧ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ದೇಗಲ ಮುಂಭಾಗದ ಪುಷ್ಕರಣಿ ಸ್ನಾನ ಅಥವಾ ಜಲಸ್ಪರ್ಶ ಮಾಡಿದರೆ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆ ತಲೆತಲಾಂತರಗಳಿAದ ಬಂದಿದೆ. ಹೀಗಾಗಿ ಕಲ್ಯಾಣಿಯಲ್ಲಿನ ನೀರು ಕಡಿಮೆ ಆದರೂ ಜಾತ್ರೆ ಸಂದರ್ಭದಲ್ಲಿ ಮುಂಚಿತವಾಗಿಯೇ ಅದನ್ನು ಭರ್ತಿ ಮಾಡಲಾಗಿರುತ್ತದೆ.

ಈ ಬಾರಿ ಹಲವು ನಾಯಕರು ಕಲ್ಯಾಣಿ ಭರ್ತಿ ಮಾಡುವಂತೆ ತಾಲೂಕಾಡಳಿತವನ್ನು ಕೋರಿದರೂ ಕಲ್ಯಾಣಿ ಭರ್ತಿ ಆಗಿಲ್ಲ. ಮಳೆ ಕೊರತೆಯಿಂದಾಗಿ ತೀವ್ರ ಬರ ಕಾಡುತ್ತಿರುವುದು ಸಹ ಇದಕ್ಕೆ ಕಾರಣವಾಗಿದೆ. ಆದರೆ ಉತ್ತರ ಕರ್ನಾಟಕದಲ್ಲೇ ದೊಡ್ಡ ಜಾತ್ರೆ ಆಗುವುದರಿಂದ ಪರ್ಯಾಯ ವ್ಯವಸ್ಥೆ ಬಗ್ಗೆಯಾದರೂ ಚಿಂತಿಸಬಹುದಿತ್ತು ಎಂಬ ಅಭಿಪ್ರಾಯ ಭಕ್ತರಿಂದ ಕೇಳಿ ಬಂದಿದೆ. 
ಕಲ್ಯಾಣಿ ಮಧ್ಯಭಾಗದಲ್ಲಿ ಅಲ್ಪಪ್ರಮಾಣದಲ್ಲಿ ನೀರು ನಿಂತಿದ್ದು, ಅದು ಕಸಕಡ್ಡಿಗಳಿಂದ ಸಂಪೂರ್ಣ ಕೊಚ್ಚೆಯಾಗಿದೆ. ಅದರಲ್ಲೇ ಭಕ್ತರು ಮಕ್ಕಳು, ಮರಿಗಳಿಗೆ ನಂಬಿಕೆಯAತೆ ಸ್ನಾನ ಮಾಡಿಸುತ್ತಿದ್ದಾರೆ. ಕನಿಷ್ಠ ಅಲ್ಪಪ್ರಮಾಣದಲ್ಲಿರುವ ನೀರಿನಲ್ಲಿ ಸಂಗ್ರಹಗೊAಡಿರುವ ಕಸವನ್ನಾದರೂ ಸಂಗ್ರಹಿಸುವ ಕೆಲಸವಾಬೇಕಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿದೆ.