ಮನುಷ್ಯನ ಮುಖ, ಎಂಟು ಕಾಲುಗಳು: ಕೊನೆಗೂ ಬದುಕುಳಿಲಿಲ್ಲ ಕರು..!

*ಬಾಗಲಕೋಟೆಯಲ್ಲೊಂದು ಅಚ್ಚರಿ ಘಟನೆ * ಹಸುವಿನ ಗರ್ಭದಲ್ಲೇ ಕೊನೆಯುಸಿರೆಳೆದ ಕರು

ಮನುಷ್ಯನ ಮುಖ, ಎಂಟು ಕಾಲುಗಳು: ಕೊನೆಗೂ ಬದುಕುಳಿಲಿಲ್ಲ ಕರು..!

ನಾಡನುಡಿ ನ್ಯೂಸ್

ಬಾಗಲಕೋಟೆ:

ನೋಡಲು ಥೇಟ್ ಮನುಷ್ಯನ ಮುಖ, ಇದಿದ್ದು ಎಂಟು ಕಾಲುಗಳು... ಆದರೆ  ಎರಡು ಗಂಟೆಗಳ ನಿರಂತರ ಪ್ರಯತ್ನ ನಂತರವೂ ಬದುಕುಳಿಯದ ಕರು..!

ಬಾಗಲಕೋಟೆಯ ಜಿಲ್ಲಾ ಪಶು ಆಸ್ಪತ್ರೆಯಲ್ಲಿ ಸೋಮವಾರ ನಡೆದ ಘಟನೆಯಿದು.  ಬಸವರಾಜ ಚೊಂಗೆ ಎಂಬುವವರ ಹಸು   ಗರ್ಭ ಧರಿಸಿತ್ತು. ಆದರೆ ಹೊಟ್ಟೆಯಲ್ಲೇ ಕರು ಅಸುನೀಗಿತ್ತು. ತಾಯಿ ಹಸು ವಿನ ಜೀವಕ್ಕೂ ಅಪಾಯ ಎಂದರಿತ ಪಶು ವೈದ್ಯರು ಎರಡು ಗಂಟೆಗಳ ನಿರಂತರ ಶಸ್ತ್ರಚಿಕಿತ್ಸೆ ನಡೆಸಿ ಗರ್ಭದಲ್ಲಿ‌ ಕರುವನ್ನು ಹೊರತೆಗೆದಿದ್ದಾರೆ.

ಕರು ಹೊರ ತಗೆದು ನೋಡಿದಾಗ ವೈದ್ಯರಿಗೂ ಅಚ್ಚರಿ ಆಗಿದೆ. ಮೃತ ಕರು ಮನುಷ್ಯನ ಹೋಲುವ ಮುಖ ಹೊಂದಿತಲ್ಲದೇ ಎಂಟು ಕಾಲುಗಳನ್ನು ಹೊಂದಿತ್ತು. ಇದನ್ನು ನೋಡಲು ಜನಸಾಗರವೇ ನೆರೆದಿತ್ತು.

ಮುಖ್ಯ ಪಶು ವೈದ್ಯಾಧಿಕಾರಿ ಡಾ.ರಮೇಶ ಜಗಾಪೂರ ಹಾಗೂ ಕೊಪ್ಪದ ಅವರು ಎರಡೂ ಗಂಟೆ ಕಷ್ಟಪಟ್ಟು ಚಿಕಿತ್ಸೆ ನಡೆಸಿದ್ದು, ಗೋಮಾತೆ ಜೀವಕ್ಕೆ ಅಪಾಯವಿಲ್ಲ ಎಂದು ತಿಳಿದು ಬಂದಿದೆ