ಉಮಾಶ್ರೀ ಮನೆಗೆ ಕನ್ನ ಹಾಕಿದ ಕಳ್ಳರ
ರಬಕವಿಯಲ್ಲಿರುವ ಮಾಜಿ ಸಚಿವೆ ಉಮಾಶ್ರೀ ಅವರ ಮನೆ ಕಳ್ಳತನವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ಮಾಜಿ ಸಚಿವೆ, ತೇರದಾಳದ ಮಾಜಿ ಶಾಸಕಿ ಉಮಾಶ್ರೀ ಅವರ ರಬಕವಿಯಲ್ಲಿನ ಮನೆಗೆ ಕಳ್ಳರು ಕನ್ನ ಹಾಕಿರುವ ಘಟನೆ ನಡೆದಿದೆ.
ಮನೆಯ ಬಾಗಿಲು ಮುರುದಿರುವ ಕಳ್ಳರ ಅಪಾರ ಪ್ರಮಾಣದ ಹಣ ಮತ್ತು ವಸ್ತುಗಳನ್ನು ದೋಚಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಸಿಪಿಐ ಕರುಣೇಸಿಗೌಡ ಮತ್ತು ಪಿಎಸ್ಐ ವಿಜಯಕುಮಾರ ಕಾಂಬಳೆ ಪರಿಶೀಲನೆ ನಡೆಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.