ಸರ್ಕಾರಿ ಕಚೇರಿಗಳಿಗೂ ವ್ಯಾಪಿಸುತ್ತಿರುವ ಕೋವಿಡ್
ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳಿಗೂ ಇದೀಗ ಕೋವಿಡ್ ವ್ಯಾಪಿಸಲು ಆರಂಭಿಸಿದೆ. ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನಕ್ಕೆ ಸೋಂಕಿತರು ಆಗಾಗ್ಗೆ ಭೇಟಿ ನೀಡುತ್ತಿರುವ ಮಾತುಗಳು ಕೇಳಿ ಬಂದಿರುವ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಿಬ್ಬಂದಿಗೆ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಮತ್ತೊಂದು ಕಡೆ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಗಳು ಸೀಲ್‌ಡೌನ್‌ಗೊಂಡಿದ್ದು, ಲೋಕಾಯುಕ್ತ ಕಚೇರಿ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿರುವುದು ಆತಂಕವನ್ನು ಹೆಚ್ಚಿಸಿದೆ.
ನಾಡನುಡಿ ವಿಶೇಷ
ಬಾಗಲಕೋಟೆ:
ಕೊರೊನಾ ನಿಯಂತ್ರಣದಲ್ಲಿ ರಾಜ್ಯದಲ್ಲೇ ಗಮನಸೆಳೆದಿದ್ದ ಬಾಗಲಕೋಟೆಯಲ್ಲಿಗೆ ಆತಂಕ ಮನೆಮಾಡಿದೆ. ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನದಿಂದ ಹಿಡಿದು ಹಲವು ಕಚೇರಿಗಳಿಗೆ ಸೋಂಕಿತರು ಭೇಟಿ ನೀಡಿದ್ದು, ಕೊರೊನಾ ವಾರಿರ‍್ಸ್ ಎಂದು ಕರೆಯಲ್ಪಡುವ ಪೊಲೀಸ್ ಪೇದೆಗಳಿಗೂ ಸಂಕು ತಗುಲಿದೆ ಇದು ಜಿಲ್ಲೆಯ ನೆಮ್ಮದಿಯನ್ನು ಕೆಡಿಸಿದೆ.
ಜಿಲ್ಲಾಡಳಿತ ಭವನಕ್ಕೆ ಸೋಂಕಿತರು, ಸೋಂಕಿತರೊAದಿಗೆ ನೇರ ಸಂಪರ್ಕ ಹೊಂದಿದ ಶಂಕಿತರು ಭೇಟಿ ನೀಡುತ್ತಲೇ ಇದ್ದು, ಇದು ಸ್ವತಾ ಸರ್ಕಾರಿ ಅಧಿಕಾರಿಗಳನ್ನು ಆತಂಕಕ್ಕೆದೂಡಿದೆ.
ಜಿಲ್ಲಾಡಳಿತ ಭವನಕ್ಕೆ ದಿನದಿಂದ ದಿನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ. ಪ್ರತಿಭಟನೆ, ಮನವಿ ಸಲ್ಲಿಕೆಯನ್ನೂ ನಿರ್ಬಂಧಿಸಲಾಗಿದೆ. ಇಷ್ಟಾಗಿಯೂ ಆತಂಕದ ಛಾಯೆ ಸರ್ಕಾರಿ ಇಲಾಖೆಗಳ ಮೇಲೆ ಬೀರುತ್ತಲೇ ಇದೆ.
ಜಿಪಂ ಉಪಾಧ್ಯಕ್ಷರೇ ಸೋಂಕಿತರು
ಜಿಲ್ಲಾಡಳಿತ ಭವನಕ್ಕೆ ಸೋಂಕಿತರೊAದಿಗೆ ಸಂಪರ್ಕ ಹೊಂದಿದ ಶಂಕಿತರು ಭೇಟಿ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆ ನಗರಸಭೆ ಸದಸ್ಯರ ಪುತ್ರನೋರ್ವ ಸೋಂಕಿತನೊAದಿಗೆ ಸುತ್ತಾಡಿ ಮರುದಿನ ಜಿಲ್ಲಾಡಳಿತ ಭವನಕ್ಕೆ ತೆರಳಿ ತಾನು ಪಿಎಂ ಕೇರ್ ಫಂಡ್‌ಗಾಗಿ ಸಂಗ್ರಹಿಸಿದ ಮೊತ್ತವನ್ನು ಜಿಲ್ಲಾಧಿಕಾರಿಗಳಿಗೆ ಚೆಕ್ ಮುಖಾಂತರ ಸಲ್ಲಿಸಿದ್ದ. ಇದು ಆತಂಕಕ್ಕೆ ಕಾರಣವಾಗಿ ನಂತರ ಆತನಲ್ಲಿ ಸೋಂಕು ಇಲ್ಲ ಎಂಬುದು ಖಚಿತಪಟ್ಟಿತ್ತು.
ಇದಾದ ನಂತರ ಜಿಲ್ಲಾಡಳಿತಭವನದಲ್ಲೇ ಇರುವ ಜಿಲ್ಲಾ ಪಂಚಾಯಿತಿಯ ಇಂಜನಿಯರಿAಗ್ ವಿಭಾಗಕ್ಕೆ ಸೋಂಕಿತ ಗುತ್ತಿಗೆದಾರನೋರ್ವ ಭೇಟಿ ನೀಡಿದ್ದ. ಆತ ಬಹುತೇಕ ಕಡೆಗಳಲ್ಲಿ ಓಡಾಡಿದ್ದರಿಂದ ಸಿಬ್ಬಂದಿ ಭೀತಿಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಮಹಡಿಯಲ್ಲಿರುವ ಇಂಜನಿಯರಿAಗ್ ವಿಭಾಗ ಕಚೇರಿಯನ್ನು ಸೀಲ್‌ಡೌನ್‌ಗೊಳಿಸಲಾಗಿದೆ. ಇದಲ್ಲೇ ಜಿಪಂ ಸಿಬ್ಬಂದಿಯೊಬ್ಬರ ಪುತ್ರನಿಗೂ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆ ಕಚೇರಿಗೂ ಬೀಗ ಜಡೆಯಲಾಗಿದೆ.
ಮತ್ತೊಂದು ಕಡೆ ಜಿಪಂ ಉಪಾಧ್ಯಕ್ಷರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಜು.೬ರಂದು ನಡೆದ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಉಪಾಧ್ಯಕ್ಷರು ಕಬ್ಬುಬೆಳೆಗಾರರ ವಿಚಾರವಾಗಿ ಮನವಿಯನ್ನೂ ಸಲ್ಲಿಸಿದರು. ಅವರಲ್ಲಿ ಸೋಂಕು ದೃಢಪಡುತ್ತಿದ್ದಂತೆ ಪ್ರತಿಭಟನೆ, ಮನವಿ ಸಲ್ಲಿಕೆಯನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.
ನಾಲ್ಕು ಪೊಲೀಸ್ ಠಾಣೆಗಳು ಸೀಲ್‌ಡೌನ್
ಬಾಗಲಕೋಟೆ ಶಹರ, ಬನಹಟ್ಟಿ, ತೇರದಾಳ, ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಗಳ ತಲಾ ಓರ್ವ ಪೊಲೀಸ್ ಪೇದೆಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳನ್ನು ಎರಡು ದಿನಗಳ ಮಟ್ಟಿಗೆ ಸೀಲ್‌ಡೌನ್‌ಗೊಳಿಸಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಇದಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿನ ಇಬ್ಬರು ಸಿಬ್ಬಂದಿಗೂ ಸೋಂಕು ಕಾಣಿಸಿಕೊಂಡಿದೆ. ಆದರೆ ಸೋಂಕಿತ ಸಿಬ್ಬಂದಿ ಕಳೆದ ಹತ್ತು ದಿನಗಳಿಂದ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಆತಂಕವಿಲ್ಲವಾದರೂ ಮುಂಜಾಗೃತಕ್ರಮವಾಗಿ ಕಚೇರಿಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಓರ್ವ ಡಿಎಆರ್ ಪೇದೆ ಸೇರಿ ಒಟ್ಟು ಏಳು ಪೇದೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದಲ್ಲದೇ ಲೋಕಾಯುಕ್ತ ಕಚೇರಿ ಸಿಬ್ಬಂದಿಯಲ್ಲೂ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ದಿನದಿಂz ದಿನಕ್ಕೆ ಸೋಂಕಿತರು, ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಲಾಕ್‌ಡೌನ್ ಬಗ್ಗೆ ಯಾವುದೇ ಚಿಂತನೆಯಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಯಾರು ಸೋಂಕಿತರು ಎಂಬುದು ತಿಳಿಯದ ಸ್ಥಿತಿಯಲ್ಲಿ ಜಿಲ್ಲೆಯಲ್ಲಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಹೊರಟಿದೆ. ಸಾರ್ವಜನಿಕರು ಸ್ವಯಂ ನಿರ್ಬಂಧಗಳನ್ನು ಹಾಕಿಕೊಂಡು ಎಚ್ಚರವಹಿಸಬೇಕಿದೆ.