ಇಳಕಲ್ ಅಗ್ನಿ ಅವಘಡ: ೨೦ ಕೋಟಿ ಹಾನಿ ಅಂದಾಜು..!

೯.೩೦ಕ್ಕೆ ಕಾಣಿಸಿದ ಬೆಂಕಿ.‌ನಂದಿಸಲು ಜನ ಪ್ರಯತ್ನಿಸಿದರೂ ಹಾರ್ಡವೇರ್ ಮಳಿಗೆ ಬೀಗ ಹಾಕಿದ್ದರಿಂದ ನಂದಿಸಲು ಸಾಧ್ಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇಳಕಲ್ ಅಗ್ನಿ ಅವಘಡ: ೨೦ ಕೋಟಿ ಹಾನಿ ಅಂದಾಜು..!

ನಾಡನುಡಿ ನ್ಯೂಸ್ 
ಬಾಗಲಕೋಟೆ

ನೋಡನೋಡುತ್ತಲೇ ಹೊತ್ತಿ‌ ಉರಿದ ಇಳಕಲ್ ಸಜ್ಜನ್ ಮಾಲ್ ದಹನದಿಂದಾಗಿ‌ ೨೦ ಕೋಟಿ ರೂ.ಗಳ ಹಾನಿ ಅಂದಾಜಿಸಲಾಗಿದೆ.

(ಬೆಂಕಿಗಾಹುತಿ ಆಗುವ ಮುನ್ನ ಹೀಗಿತ್ತು ಕಟ್ಟಡ)

ಭಾನುವಾರ ರಾತ್ರಿ ೯.೩೦ರ ಹೊತ್ತಿಗೆ ಅದೇ ಕಟ್ಟಡದಲ್ಲಿರುವ ಹಾರ್ಡವೇರ್ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳದಲ್ಲಿ ಥಿನ್ನರ್ ಇದ್ದಿದ್ದರಿಂದ ಬೆಂಕಿ‌ ವೇಗದಲ್ಲಿ ಹಬ್ಬಿದೆ. ಇದನ್ನು ಗಮನಿಸಿ ಸ್ಥಳದಲ್ಲಿದ್ದವರು ಬೆಂಕಿ‌ ನಂದಿಸಲು ಯತ್ನಿಸಿದರಾದರೂ ಮಳಿಗೆಗೆ ಬೀಗ ಜಡೆದಿದ್ದರಿಂದಾಗಿ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ನಂತರ ಆರು ಅಗ್ನಿಶಾಮಕದಳದ ವಾಹನಗಳ ಮೂಲಕ ಬೆಂಕಿ‌ ನಂದಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ನಾಡನುಡಿಗೆ ತಿಳಿಸಿದ್ದಾರೆ.

(ಹೊತ್ತಿ ಉರಿದ‌ ಕಟ್ಟಡದ ಚಿತ್ರ)

ಬೃಹತ್ ವಾಣಿಜ್ಯ ಸಂಕೀರ್ಣ ೫ ಅಂತಸ್ತಿನದಾಗಿದ್ದು, ಅದರಲ್ಲಿ ಮೋರ್ ಸೂಪರ್ ಮಾರ್ಕೆಟ್, ಹಾರ್ಡವೇರ್ ಮಳಿಗೆ, ಬೇಕರಿ, ಇಳಕಲ್ ಸೀರೆ ಅಂಗಡಿ, ಬಟ್ಟೆ ಶೋರೂಂ ಸೇರಿ ಆರು ಮಳಿಗೆಗಳಿದ್ದವು, ಒಟ್ಟು ೧೭ರಲ್ಲಿ ಆರು ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿತ್ತು.

ಅದೃಷ್ಟವಶಾತ್ ಆರಂಭಗೊಳ್ಳದ ಲಾಡ್ಜ್:
ಅಗ್ನಿ ಶಾಮಕ ದಳ ಸಿಬ್ಬಂದಿಗೆ ಕಟ್ಟಡ ಮಾಲೀಕರು ಹೇಳಿಕೊಂಡಿರುವಂತೆ ಸದ್ಯದಲ್ಲೇ ಕಟ್ಟಡದಲ್ಲಿ ಲಾಡ್ಜ್ ನ್ನು ಸಹ ಆರಂಭಿಸಲಾಗುತ್ತಿತ್ತು. ಆಗ ಪೂರ್ಣಾವಧಿಗೆ ಸುರಕ್ಷತಾ ಸಿಬ್ಬಂದಿಯನ್ನು‌ ನೇಮಕ‌ ಮಾಡಿಕೊಳ್ಳಬೇಕೆಂದಿದ್ದೆ ಅಷ್ಟರಲ್ಲಿ ಘಟನೆಗೆ ಆಗಿದೆ ಎಂದಿದ್ದಾರೆ.