ಅಭಿವೃದ್ಧಿ ಕಾರ್ಯಗಳಿಂದ ಕಾರ್ಯಕರ್ತರಲ್ಲಿ ಹೆಚ್ಚಿದ ಆತ್ಮಬಲ: ಶಾಸಕ ಚರಂತಿಮಠ
ಬಾಗಲಕೋಟೆ : ಬಾಗಲಕೋಟೆ ಮತಕ್ಷೇತ್ರದಲ್ಲಾಗಿರುವ ಅನೇಕ ಅಭಿವೃದ್ಧಿ ಕೆಲಸಗಳು ಬಿಜೆಪಿ ಕಾರ್ಯಕರ್ತರ ಆತ್ಮಬಲವನ್ನು ಹೆಚ್ಚಿಸಿದೆ.ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಭಾಗದ ಜನ ಅಭಿವೃದ್ಧಿ ಪರ ಇದ್ದಾರೆ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಬಿಜೆಪಿ ನಗರ ಮಂಡಲ ವತಿಯಿಂದ ಹಮ್ಮಿಕೊಂಡ 1ನೇ ವಾರ್ಡಿನಲ್ಲಿರುವ 138 ಬೂತ್ ನಲ್ಲಿ ಬೂತ ಸಶಕ್ತೀಕರಣದ ಪೇಜ್ ಪ್ರಮುಖರಾಗಿ 30 ಮತದಾರರ ಮನೆಮನೆ ಸಂಪರ್ಕ ಮಾಡಿ ಮಾಹಿತಿ ಕಲೆಹಾಕಿ ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಧಾನಸಭಾ ಮತಕ್ಷೇತ್ರಗಳಲ್ಲಿನ ಪ್ರತಿ ಬೂತಗಳನ್ನು ಸಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ಮಹಾಸಂಪರ್ಕ ಅಭಿಯಾನವನ್ನು ಹಮ್ಮಿಕೊಂಡಿದ್ದು ಪೇಜ್ ಪ್ರಮುಖರಿಗೆ ಪಕ್ಷದ ಪದಾಧಿಕಾರಿಗಳಿಗೆ ಬೂತಿನ ಪ್ರತಿ ಮನೆ ಮನೆ ಸಂಪರ್ಕ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಶಾಸಕರು ಸೂಚಿಸಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ,ಬೂಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ,ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರಸಭೆ ಸದಸ್ಯರಾದ ಸರಸ್ವತಿ ಕುರಬರು, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ,ವಾರ್ಡ ಅದ್ಯಕ್ಷ ಜಯಪ್ರಕಾಶ ಬನ್ನಿ,ವಾರ್ಡಿನ ಮಹಿಳಾ ಸಮೀತಿ ಅದ್ಯಕ್ಷೆ ಗಿರಿಜಾ ಬಾದಾಮಿ,ಬೂತ್ ಅಧ್ಯಕ್ಷ ಶಶಿಕಿರಣ ಕೋರಿ,ಮುತ್ತಪ್ಪ ಕುರಬರ,ವಾರ್ಡಿನ ಹಿರಿಯರಾದ ರಾಜು ವಾಘ್,ದಿನೇಶ ಬಾರ್ಶಿ,ವಿವೇಕ ಅಂಬನ್ನವರ,ಸುರೇಶ ಗೌಡರ,ಮಲ್ಲಿಕಾರ್ಜುನ ಕಾಂಬಳೆ,ಸುಬಾಶ್ ಕೋಠಾರಿ, ಬಸವರಾಜ ಹುನಗುಂದ,
ಸೇರಿದಂತೆ ಅನೇಕರು ಭಾಗವಹಿಸಿದ್ದರು.