ಸಿದ್ದು ಸರ್ಕಾರಕ್ಕೆ ಕಪ್ಪು ಚುಕ್ಕೆಯಾದ ಕನ್ನಡ ಬಾರದ ಶಿಕ್ಷಣ ಸಚಿವ
ಬಾಗಲಕೋಟೆ: ರಾಜ್ಯದಲ್ಲಿ ಕನ್ನಡ ಓದಲು ಬಾರದ ಶಿಕ್ಷಣ ಸಚಿವರು ಇರುವುದು ಸಿದ್ದರಾಮಯ್ಯ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದೆ. ಕೂಡಲೇ ಅವರ ರಾಜಿನಾಮೆಯನ್ನು ಪಡೆಯಬೇಕೆಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಆಗ್ರಹಿಸಿದ್ದಾರೆ.
ನವನಗರದ ಅಂಬೇಡ್ಕರ್ ಭವನದ ದಿ. ರಾಮ ಮನಗೂಳಿ ಪ್ರಧಾನ ವೇದಿಕೆಯಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುರೋಪ್‌ನಲ್ಲಿ ೩೨ ರಾಷ್ಟಗಳಿದ್ದರೂ ಎಲ್ಲಿಯೂ ಇಂಗ್ಲಿಷ್ ಬಳಕೆಯಲ್ಲಿ ಇಲ್ಲ. ಇಂಗ್ಲಿಷ್ ಬಳಕೆ ಆಗುವುದು ಲಂಡನ್‌ನಲ್ಲಿ ಮಾತ್ರ ಆದರೆ ನಮ್ಮ ದೇಶದಲ್ಲಿ ಇಂಗ್ಲಿಷ್ ಇಲ್ಲದೆ ಜ್ಞಾನವಿಲ್ಲ ಎಂಬ0ತೆ ಶಿಕ್ಷಣದಲ್ಲಿ ಬಿಂಬಿಸಲಾಗುತ್ತಿದೆ. ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆದರೆ ಶಾಲೆಗಳನ್ನೇ ಮುಚ್ಚು ಕೆಟ್ಟ ಆಡಳಿತಗಳನ್ನು ನೋಡಿದ್ದೇವೆ. ಈಗ ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಮಂತ್ರಿ ಆದವರಿಗೆ ಕನ್ನಡ ಓದಲು ಬರುವುದಿಲ್ಲ. ಇಂಗ್ಲಿಷ್ ಮಾನಸಿಕತೆಯನ್ನು ಹೊಂದಿರುವ ಅವರು ಉದ್ದು ಕೂದಲು ಬಿಟ್ಟಿದ್ದೀರಲಾ ಎಂದರೆ, ಮೋದಿ ಗಡ್ಡ ಬಿಟ್ಟಿಲ್ಲವೇ ಎನ್ನುತ್ತಾರೆ. ಸಾಮಾನ್ಯ ಪ್ರಜ್ಞೆಯೂ ಇಲ್ಲದಂತೆ ವರ್ತಿಸುವ ಅವರನ್ನು ಆ ಖಾತೆಯಿಂದ ಕೆಳಗಿಳಿಸುವಂತೆ ನೀವಾದರೂ ಒತ್ತಾಯಿಸಿ ಎಂದು ವೇದಿಕೆಯಲ್ಲಿದ್ದ ಶಾಸಕ ಎಚ್.ವೈ.ಮೇಟಿ ಅವರಿಗೆ ಕೋರಿದರು.