ಶ್ರೀಶೈಲದಲ್ಲಿ ನೀರಿನ ಬಾಟಲ್ ಗಾಗಿ ಗಲಾಟೆ: ಜಿಲ್ಲೆಯ ಭಕ್ತನ ಮೇಲೆ ಮಾರಣಾಂತಿಕ‌ ಹಲ್ಲೆ

ನೀರಿನ ವಿಚಾರಕ್ಕಾಗಿ ಕರ್ನಾಟಕದ ಭಕ್ತರು- ಶ್ರೀಶೈಲಂನ ವ್ಯಾಪಾರಿಗಳ ಮಧ್ಯೆ ಗಲಾಟೆ ತಾರಕಕ್ಕೇರಿದ್ದು, ಸ್ಥಳೀಯರು ಜಿಲ್ಲೆಯ ಭಕ್ತರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಶ್ರೀಶೈಲದಲ್ಲಿ ನೀರಿನ ಬಾಟಲ್ ಗಾಗಿ ಗಲಾಟೆ: ಜಿಲ್ಲೆಯ ಭಕ್ತನ ಮೇಲೆ ಮಾರಣಾಂತಿಕ‌ ಹಲ್ಲೆ

ನಾಡನುಡಿ ನ್ಯೂಸ್ 
ಬಾಗಲಕೋಟೆ:
ಸುಕ್ಷೇತ್ರ ಶ್ರೀಶೈಲದಲ್ಲಿ ಬಾಗಲಕೋಟೆ ಜಿಲ್ಲೆಯ ಭಕ್ತರು- ಸ್ಥಳೀಯ ವ್ಯಾಪಾರಸ್ಥರ ಮಧ್ಯೆ ಗಲಾಟೆಯಾಗಿರುವ ವರದಿಯಾಗಿದೆ.

ನೀರು ತರಲು ಹೋಗಿದ್ದ ಬೀಳಗಿ ತಾಲೂಕಿನ‌ ಭಕ್ತರು  ಹಾಗೂ ವ್ಯಾಪಾರಸ್ಥರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದ್ದು, ಬೀಳಗಿ ತಾಲೂಕು ಜಾನಮಟ್ಟಿ ಗ್ರಾಮದ ಶ್ರೀಶೈಲ ವಾರಿಮಠ(೨೮) ಅವರ ಮೇಲೆ ಮಾರಣಾಂತಿಕ ಹಲ್ಲೆ ಆಗಿರುವ ಬಗ್ಗೆ ವರದಿಯಾಗಿದೆ. ನೀರಿನ ಬಾಟಲ್ ಗೆ ಹೆಚ್ಚಿನ ಹಣ ಪಡೆದಿದ್ದಕ್ಕೆ ಗಲಾಟೆ ಶುರುವಾಗಿದೆ. ಪಾತಾಳಗಂಗೆ ಮಾರ್ಗದಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ.

ಶ್ರೀಶೈಲ ಭಕ್ತರ ವಾಹನಗಳನ್ನು ಸ್ಥಳೀಯ ವ್ಯಾಪಾರಸ್ಥರು ಜಖಂಗೊಳಿಸಿರುವ ಮಾಹಿತಿಯಿದ್ದು, ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಬುದ್ಧಿವಾದ ಹೇಳಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.