ಸಮಾವೇಶಕ್ಕೆ ಮೈದಾನವಾದ ಸೆಕ್ಟರ್: ಮಾಜಿ ಶಾಸಕ ವೀರಣ್ಣ ಚರಂತಿಮಠ ತೀವ್ರ ಕಳವಳ
ಬಾಗಲಕೋಟೆ: ಸಂತ್ರಸ್ತರ ಪುನರ್ವಸತಿಗಾಗಿ ನಿರ್ಮಾಣಗೊಂಡಿರುವ ನವನಗರದ ಸೆಕ್ಟರ್‌ವೊಂದನ್ನು ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ನವನಗರದ ೧೧೨ನೇ ಸೆಕ್ಟರ್‌ನ್ನು ಮೈದಾನವಾಗಿಸಿ ಸಮಾವೇಶವೊಂದಕ್ಕೆ ನೀಡಲು ಹೊರಟಿರುವುದಕ್ಕೆ ತೀವ್ರ ಆಕ್ಷೇಪಿಸಿರುವ ಅವರು ಸಮ್ಮೇಳನಕ್ಕೆ ನಮ್ಮ ವಿರೋಧವಿಲ್ಲ. ಅಂಥ ಸಮಾವೇಶಗಳಿಗೆ ಅವರದೇ ಸಂಸ್ಥೆಗಳು ಇರುವಾಗ ಸಂತ್ರಸ್ತರಿಗೆ ಮೀಸಲಿಟ್ಟ ಜಾಗೆಯನ್ನು ನೀಡಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ಬಾಗಲಕೋಟೆಯನ್ನು ಕೋಮು ಸೂಕ್ಷö್ಮ ಪ್ರದೇಶ ಎಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆಯೇ ಹಲವು ಬಾರಿ ಹೇಳಿಕೊಳ್ಳುತ್ತ ಬಂದು ಈಗ ಭಾರೀ ಸಂಖ್ಯೆಯಲ್ಲಿ ಜನ ಜಮಾವಣೆಗೊಳ್ಳುವ ಮತೀಯ ಸಮಾವೇಶಕ್ಕೆ ಅನುಮತಿ ನೀಡುತ್ತಿರುವುದು ಏಕೆ. ಬಾಗಲಕೋಟೆಯನ್ನು ರಾಜಕೀಯಕ್ಕಾಗಿ ಏನು ಮಾಡಲು ಹೊರಟಿದ್ದಾರೆ ಎಂಬುದಕ್ಕೆ ಅಧಿಕಾರಿಗಳು ಉತ್ತರಿಸಬೇಕು ಹಾಗೂ ಸಮಾವೇಶದ ಆಗು ಹೋಗುಗಳಿಗೆ ಇವರುಗಳೇ ಹೊಣೆ ಹೊರಬೇಕೆಂದು ಆಗ್ರಹಿಸಿದ್ದಾರೆ.
ಮುಳುಗಡೆಯಿಂದಾಗಿ ಬಾಗಲಕೋಟೆಯಲ್ಲಿ ವ್ಯಾಪಾರ ವಹಿವಾಟಿಲ್ಲ. ಆಗಾಗ್ಗೆ ನಗರದಲ್ಲಿ ಕೆಲವು ಗುಂಪುಗಳು ಭಯ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ. ಇಂಥ ಸನ್ನಿವೇಶದಲ್ಲಿ ಸಂತ್ರಸ್ತರ ಜಾಗೆಯನ್ನು ಕಾನೂನು ಬಾಹಿರವಾಗಿ ನೀಡಿರುವುದಲ್ಲದೇ ಇಡೀ ಸೆಕ್ಟರ್‌ನ್ನು ಮೈದಾನವನ್ನಾಗಿ ಪರಿವರ್ತಿಸಲಾಗಿದೆ. ನಾನು ಶಾಸಕ ಹಾಗೂ ಬಿಟಿಡಿಎ ಕಾರ್ಯಾಧ್ಯಕ್ಷನಾಗಿದ್ದ ಅವಧಿಯಲ್ಲಿ ಇಂಥದಕ್ಕೆ ಅವಕಾಶ ನೀಡಿದಿಲ್ಲ. ಈಗಲೂ ಅವಕಾಶ ನೀಡಬಾರದು. ಈ ಹಿಂದೆಯೂ ಕಾಂಗ್ರೆಸ್ ಅವಧಿಯಲ್ಲಿ ನವನಗರದಲ್ಲಿ ಸಂತ್ರಸ್ತರ ನಿವೇಶನ ಹಂಚಿಕೆ ನಿಲ್ಲಿಸಲಾಗಿತ್ತು ಆದರೆ ಸೆಕ್ಟರ್‌ಗೊಂದು ಮಸೀದಿ ಎಂಬAತ ಆದೇಶ ಹೊರಡಿಸಿದ್ದು, ಒಟ್ಟಾರೆ ಶಾಂತವಾಗಿರುವ ಬಾಗಲಕೋಟೆಯಲ್ಲಿ ಎರಡು ಕೋಮುಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆಯೇ ಎಂಬ ಪ್ರಶ್ನೆ ಈ ಎಲ್ಲ ಬೆಳವಣಿಗೆಗಳನ್ನು ನೋಡಿದ ಮೇಲೆ ಎಂಥವರಿಗಾದರೂ ಅನಿಸುತ್ತದೆ. ಇಂಥ ವಿಚಾರಗಳನ್ನು ಬಿಟ್ಟು ನಗರದಲ್ಲಿ ಶಾಂತಿ ನೆಲೆ ಊರಿನ ಅಭಿವೃದ್ಧಿ, ವ್ಯಾಪಾರ ವೃದ್ಧಿಗೆ ಆದ್ಯತೆ ದೊರೆಯಬೇಕಿದೆ ಎಂದು ಚರಂತಿಮಠ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.