ಜನಿವಾರ ತೆಗೆಸಿದ ಪ್ರಕರಣ: ನಾಳೆ ಬೃಹತ್ ಪ್ರತಿಭಟನೆ

* ಹಿಂದೂ ಸಂಸ್ಕೃತಿ ಸುರಕ್ಷಾ ಸಮಿತಿ ನೇತೃತ್ವ * ಜಿಲ್ಲಾಡಳಿತ ಭವನದೆದುರು ಪ್ರತಿಭಟನೆ 

ಜನಿವಾರ ತೆಗೆಸಿದ ಪ್ರಕರಣ: ನಾಳೆ ಬೃಹತ್ ಪ್ರತಿಭಟನೆ
ಬಾಗಲಕೋಟೆಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಜನಿವಾರ ತಗಿಸಿರುವ ಪ್ರಕರಣವನ್ನು ಖಂಡಿಸಿ ಏ.೨೧ರ ಸೋಮವಾರ ಬೆಳಗ್ಗೆ ೧೦.೩೦ಕ್ಕೆ ನವನಗರದ ಜಿಲ್ಲಾಡಳಿತ ಭವನ ಮುಂಭಾಗ ಹಿಂದೂ ಸಂಸ್ಕೃತಿ ಸುರಕ್ಷಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. 
ಶನಿವಾರ ಸಂಜೆ ಕಿಲ್ಲಾ ಓಣಿಯ ಶ್ರೀಕೊತ್ತಲೇಶ ದೇವಸ್ಥಾನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ೨೨ ಯಜ್ಞೋಪವಿತಧಾರಿ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಕಲ ಸಮಾಜಗಳಿಂದ ಅನ್ಯಾಯಕ್ಕೆ ಒಳಗಾಗಿರುವ ಬೀದರ್‌ನ ಸುಚಿವೃತ್ ಕುಲಕರ್ಣಿಗೆ ಸರ್ಕಾರಿ ಕೋಟಾದಲ್ಲಿ ಉಚಿತ ಸೀಟ್ ನೀಡಲು ಒತ್ತಾಯಿಸಲಾಗುವುದು ಎಂದು ಹೋರಾಟದ ನೇತೃತ್ವ ವಹಿಸಲಿರುವ ಡಾ.ಗಿರೀಶ ಮಸೂರಕರ ತಿಳಿಸಿದರು. 
ಸಭೆಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣರು ಸೇರಿದಂತೆ ಜನಿವಾರ ಧರಿಸುವ ಪ್ರತಿಭಾವಂತ, ಶ್ರಮಿಕ ಸಮುದಾಯಗಳನ್ನು ವ್ಯವಸ್ಥಿತವಾಗಿ ಹಣಿಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತ ಬಂದಿದೆ. ಜನಿವಾರಕ್ಕೆ ಅದರದೆಯಾದ ಮಹತ್ವವಿದೆ. ಸಿಇಟಿ ಬರೆಯಲು ಜನಿವಾರ ತೆಗೆಸಿರುವುದು ಅಕ್ಷಮ್ಯ. ಜನಿವಾರ ತೆಗೆಯುವಂತೆ ಒತ್ತಡ ಬಂದಾಗ ಪರೀಕ್ಷೆಯಿಂದಲೇ ದೂರ ಉಳಿದು ಧರ್ಮ ನಿಷ್ಠೆ ತೋರಿದ ವಿದ್ಯಾರ್ಥಿಯೊಂದಿಗೆ ಸಕಲ ಹಿಂದೂ ಸಮಾಜವಿದೆ. ಹಿಂದೂಗಳ ಮೇಲೆ ನಡೆಯುವ ಈ ರೀತಿಯ ಅನ್ಯಾಯವನ್ನು ಕಠಿಣವಾಗಿಯೇ ಖಂಡಿಸಬೇಕಿದೆ ಎಂದು ಕರೆ ನೀಡಿದರು. 
ಕ್ಷತ್ರೀಯ ಒಕ್ಕೂಟದ ಡಾ.ಶೇಖರ್ ಮಾನೆ ಮಾತನಾಡಿ, ಹಿಂದೂ ಸಮಾಜವನ್ನು ಕುಗ್ಗಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇಂಥ ವಿಷಯಗಳು ಬಂದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಖಂಡಿಸಬೇಕು. ಹಿಂದೂ ಸಮಾಜಕ್ಕೆ ಧಕ್ಕೆಯಾದಾಗ ಪ್ರಬಲವಾಗಿ ಧ್ವನಿಯಾಗುವುದನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು. 
ಆರ್ಯವೈಶ್ಯ ಸಮಾಜದ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, ಜನಿವಾರದ ಮಹತ್ವ ಅರಿಯದ. ಧಾರ್ಮಿಕ ಭಾವನೆಗಳ ಅರಿವೇ ಇಲ್ಲದ ಅವಿವೇಕಿಗಳು ಮಾತ್ರವನ್ನು ಜನಿವಾರವನ್ನು ತಗಿಸುವ ಧೈರ್ಯ ಮಾಡುತ್ತಾರೆ. ಇಂಥ ವಿಷಯಗಳು ಬಂದಾಗ ಒಟ್ಟಾಗಿ  ಸರ್ಕಾರದ ಮುಂದೆ ಶಕ್ತಿ ತೋರಿಸುವ ಕೆಲಸವನ್ನು ಮಾಡಬೇಕು. ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದಿರುವ ಘಟನೆಯನ್ನು ಹಿಂದೂ ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಇಂಥ ಅಪಾಯಗಳು ಮುಂದೆAದೂ ಕಾಣಬಾರದೆಂದರೆ ನಾವೆಲ್ಲ ಒಗ್ಗಟಿನಿಂದ ಇರಬೇಕೆಂದು ಕರೆ ನೀಡಿದರು. 
ಹಿರಿಯ ವಕೀಲ ಎಸ್.ಎಲ್.ಕೋರಾ ಅವರು ಮಾತನಾಡಿ, ಜನಿವಾರ ಧರಿಸುವ ಸಮುದಾಯಗಳನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಹಿಂದೂತ್ವ  ಉಳಿಸುವ ಕೆಲಸವನ್ನು ನಮ್ಮ ಸಮುದಾಯಗಳು ನಿರಂತರವಾಗಿ ಮಾಡುತ್ತಲೇ ಬಂದಿರುವುದರಿAದ ನಮ್ಮನ್ನು ಗುರಿಯಾಗಿಸಲಾಗುತ್ತಿದೆ. ಬೀದರ್‌ನ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಸೀಟ್ ನೀಡಬೇಕೆಂದು ಒತ್ತಾಯಿಸಿದರು. ಎಲ್ಲ ಸಮುದಾಯದವರು ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು. 
ಮುಖಂಡರಾದ ಎಸ್.ಬಿ.ಸತ್ಯನಾರಾಯಣ, ಮರಾಠಾ ಸಮಾಜದ ಎಂ.ಆರ್.ಶಿAಧೆ, ಮಹೇಶ್ವರಿ ಸಮಾಜದ ರಾಮ ಮುಂದಡಾ, ಭಾವಸಾರ ಕ್ಷತ್ರೀಯ ಸಮಾಜದ ಕೃಷ್ಣಾಜಿ ಅಂಬೋರೆ, ನರಸಿಂಹ ಆಲೂರ, ಹಿರಿಯ ಲೆಕ್ಕ ಪರಿಶೋಧಕ ಶಿವರಾಂ ಹೆಗಡೆ, ಚಂದ್ರಶೇಖರ ಹೆಗಡೆ, ಪರಮೇಶ ಮದ್ದೂರ, ಗಣಪತಿ(ರಾಜು) ವಾಘ, ಸಂತೋಷ ಗದ್ದನಕೇರಿ, ಗಿರೀಶ ಆಶ್ರಿತ, ವಿಜಯಕುಮಾರ, ವಿನಾಯಕ ತಾಳಿಕೋಟಿ, ರಾಘವೇಂದ್ರ ಕುಲಕರ್ಣಿ, ಸಂಜಯ ದೇಶಪಾಂಡೆ, ಮೋಹನ ದೇಶಪಾಂಡೆ, ಎಸ್.ಕೆ.ಕುಲಕರ್ಣಿ ಇತರರು ಇದ್ದರು.