ಇಳಕಲ್ಲ ಗುರುಮಹಾಂತ ಶ್ರೀಗಳಿಗೆ ಮಾತೃ ವಿಯೋಗ

ಇಳಕಲ್ಲ ಗುರುಮಹಾಂತ ಶ್ರೀಗಳಿಗೆ ಮಾತೃ ವಿಯೋಗ

ಬಾಗಲಕೋಟೆ:ಇಳಕಲ್ಲಿನ ಚಿತ್ತರಗಿ ಸಂಸ್ಥಾನ ಪೂಜ್ಯರಾದ ಶ್ರೀ ಗುರುಮಹಾಂತ ಶ್ರೀಗಳ ಪೂರ್ವಾಶ್ರಮದ ತಾಯಿಯವರಾದ ಶಾಂತವ್ವತಾಯಿ ವೀರಪ್ಪ ಹೆಗಡಾಳ(೮೮) ನಿಧನ ಹೊಂದಿದರು.

ನರಗುಂದ ಪಟ್ಟಣದ ಚಿನಿವಾಲ ಕಟ್ಟಿಯ ನಾಗಠಾಣ ಓಣಿಯ ಹಿರಿಯರಾದ ಶಾಂತವ್ವ ಅವರ ಅಂತ್ಯಕ್ರಿಯೆಯು ಬುಧವಾರ ಅ.೨೫ರ ಮಧ್ಯಾಹ್ನ ೨ ಗಂಟೆಗೆ ನರಗುಂದ ಪಟ್ಟಣದಲ್ಲಿ‌ ಜರುಗಲಿದೆ. ಶಾಂತವ್ವ ಅವರ ನಿಧನಕ್ಕೆ ಇಲಕಲ್ಲ ನಗರದ ಸಮಸ್ತ ಜನತೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.