ಕಂಟೈನ್‍ಮೆಂಟ್ ಝೋನ್‍ಗೆ ಡಿಸಿ, ಸಿಇಓ ಭೇಟಿ ಪರಿಶೀಲನೆ
ಮಾರವಾಡಿಗಲ್ಲಿಯಲ್ಲಿ ಕಂಟೈನ್‍ಮೆಂಟ್ ಝೋನ್ ಘೋಷಣೆ
ನಾಡನುಡಿ ನ್ಯೂಸ್
ಬಾಗಲಕೋಟೆ :
ನಗರದ ಮಾರವಾಡಿ ಗಲ್ಲಿಯಲ್ಲಿ ಒಂದೇ ಕುಟುಂಬದ 13 ಜನರಿಗೆ ಕೊರೊನಾ ಸೋಂಕು ದೃಡಪಟ್ಟ ಹಿನ್ನಲೆಯಲ್ಲಿ ಸೋಂಕು ದೃಢಪಟ್ಟವರ ಮನೆಯ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್‍ಮೆಂಟ್ ಝೋನ್ ನಿರ್ಮಿಸಲಾಗಿದ್ದು, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮತ್ತು ಜಿ.ಪಂ ಸಿಇಓ ಟಿ.ಭೂಬಾಲನ್ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋವಿಡ್ 2ನೇ ಅಲೇ ಭೀತಿ ಉಂಟಾಗಿದ್ದು, ಒಂದೇ ಕುಟುಂಬದ 13 ಜನರಿಗೆ ಸೋಂಕು ತಗಲಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸೋಂಕಿತ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗಿದ್ದು, ಸೊಂಕು ತಗಲಿದ ಮನೆಯ 3 ಜನ ಸದಸ್ಯರು ಹಾಗೂ ಡ್ರೈವರ್ ಸೇರಿ ಸಾಂಗಲಿಗೆ ಹೋಗಿ ಮಾರ್ಚ 14 ರಂದು ಬಾಗಲಕೋಟೆಗೆ ಬಂದಿದ್ದಾರೆ. ಅವರ ಸಂಪರ್ಕದಿಂದ ಮನೆಯವರಿಗೆಲ್ಲ ಸೊಂಕು ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸೊಂಕು ದೃಢಪಟ್ಟ ಮನೆಯ ಸುತ್ತಲಿನ ಕಂಟೈನ್‍ಮೆಂಟ್ ಝೋನ ವ್ಯಾಪ್ತಿಯಲ್ಲಿ 12 ಮನೆಗಳಿದ್ದು, ನಿಗಾ ವಹಿಸಲಾಗುತ್ತಿದೆ. ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಸೋಂಕು ದೃಢಪಟ್ಟ 13 ಜನರು ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ರೀತಿಯ ತೊಂದರೆ ಇರುವದಿಲ್ಲ. ಸೊಂಕು ದೃಡಪಟ್ಟವರ ಪೈಕಿ ಓರ್ವ ವೃದ್ದ ಮಹಿಳೆ ಜಿಲ್ಲಾ ಆಸ್ಪತ್ರೆ, ಮತ್ತೊರ್ವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಉಳಿದವರು ಹೋಮ್ ಐಸೋಲೇಷನ್‍ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದರು. ಭೇಟಿ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮುನಿಷಾಮಪ್ಪ ಇದ್ದರು.