ಇನ್ನರ್‌ವ್ಹೀಲ್ ಪದಾಧಿಕಾರಿಗಳ ಪದಗ್ರಹಣ
ಇನ್ನರ್‌ವ್ಹೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣದ ಚಿತ್ರ.
ನಾಡನುಡಿ ನ್ಯೂಸ್
ಬಾಗಲಕೋಟೆ ಜು.೧೦:
ಸಮುದಾಯದ ವಿಶೇಷವಾಗಿ ಅನಾಥ ಮಕ್ಕಳು, ಶಾಲಾ ಮೂಲಭೂತಸೌಕರ್ಯದ ಅನುಷ್ಠಾನಕ್ಕೆ ಆದ್ಯತೆ ನೀಡುವ ಸಂಕಲ್ಪದೊAದಿಗೆ ೨೦೨೦-೨೧ನೇ ಸಾಲಿಗೆ ಇನ್ನರ್‌ವ್ಹೀಲ್ ಪದಾಧಿಕಾರಿಗಳು ಪದಗ್ರಹಣ ಮಾಡಿದರು.
ನಗರದ ರೋಟರಿ ಸಭಾಭವನದಲ್ಲಿ ಸಾಮಾಜಿಕ ಅಂತರದೊAದಿಗೆ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷರಾಗಿ ಕೆ.ಎಸ್.ವರ್ಷಾ, ಕಾರ್ಯದರ್ಶಿಯಾಗಿ ವೀಣಾ ಮೋಟಗಿ, ಐಪಿಪಿ ಮೋಹಿನಿ ಗಾಂವಕರ್, ಕೋಶಾಧ್ಯಕ್ಷರಾಗಿ ಗೀತಾ ಗಿರಿಜಾ, ಐಎಸ್‌ಒ ಆಗಿ ವೃಷಾಲಿ ಅರಬ್ಬಿ, ಸಂಪಾದಕಿಯಾಗಿ ಅರ್ಚನಾ ಬಳೂಲಮಠ, ಜಂಟಿ ಕಾರ್ಯದರ್ಶಿಯಾಗಿ ಸುನಿತಾ ವಾಸನದ, ಸಿಎಲ್‌ಸಿಸಿ ಶೋಭಾ ಕಾಮರೆಡ್ಡಿ, ಸಿಸಿಸಿಸಿ ಆಗಿ ಶಿಲ್ಪಾ ಪಟೇಲ್, ಸಲಹಾ ಸಮಿತಿಗೆ ರೇವತಿ ಹುಯಿಲ್‌ಗೋಳ, ಸಂಧ್ಯಾ ಮಾಸೂರಕರ, ಗೀತಾ ಹುಯಿಲ್‌ಗೋಳ, ಕಾರ್ಯಕಾರಿ ಸಮಿತಿಗೆ ಆಶಾ ದಾಸ್, ಉಮಾ ಮಾನೆ, ಸುನಿತಾ ಮುಳುಗುಂದ, ಚಂದ್ರಕಲಾ ಪಾಟೀಲ, ಶೋಭಾ ಕಟಗೇರಿ, ಅನಿತಾ ದೇಸಾಯಿ, ಪರಿಮಳಾ ಮನಗೂಳಿ, ಅರ್ಚನಾ ರೇವಡಿಗಾರ, ಲಕ್ಷಿö್ಮÃ ಪಾಟೀಲ, ಸುಜಾತಾ ಶಿಂಧೆ ಪದಗ್ರಹಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಕಿರಣ್‌ದಾಸ್, ಪಿಡಿಸಿ ರೇವತಿ ಹುಯಿಲ್‌ಗೋಳ ಅವರು ಪ್ರತಿಜ್ಞಾ ವಿಧಿ ಬೋಧಿಸಿ ಇನ್ನರ್‌ವ್ಹೀಲ್ ಧ್ಯೇಯೊದ್ದೇಶಗಳ ಕುರಿತು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಚಾರ್ಟೆಡ್ ಅಕೌಂಟೆAಟ್ ಸೀಮಾ ಮಣ್ಣೂರ ಅವರನ್ನು ಸನ್ಮಾನಿಸಲಾಯಿತು. ಮೋಹಿನಿ ಗಾಂವಕರ್ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಲತಾ ಹೆರೆಂಜಲ್ ವರದಿ ವಾಚನ ಮಾಡಿದರು. ಶಿಲ್ಪಾ ಪಟೇಲ್ ನಿರೂಪಿಸಿದರು. ಕಾರ್ಯದರ್ಶಿ ವೀಣಾ ಮೋಟಗಿ ವಂದಿಸಿದರು.