ವೃದ್ಧ ಸಾವು, ಮತ್ತೆ ೩೬ ಜನರಲ್ಲಿ ಕಾಣಿಸಿಕೊಂಡ ಸೋಂಕು

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು,  ಮಳೆ ಹಿನ್ನೆಲೆಯಲ್ಲಿ ಕೆಮ್ಮು, ನೆಗಡಿ, ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಇದು ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ೧೭ ವರ್ಷದೊಳಗಿನ ೮ ಮಕ್ಕಳು, ಮೂವರು ವೃದ್ಧರು ಸೇರಿ ಗುರುವಾರ ೩೬ ಜನರಲ್ಲಿ ಸೋಂಕು ದೃಢಪಟ್ಟಿದೆ. 

ವೃದ್ಧ ಸಾವು, ಮತ್ತೆ ೩೬ ಜನರಲ್ಲಿ ಕಾಣಿಸಿಕೊಂಡ ಸೋಂಕು
ವೃದ್ಧ ಸಾವು, ಮತ್ತೆ ೩೬ ಜನರಲ್ಲಿ ಕಾಣಿಸಿಕೊಂಡ ಸೋಂಕು

ನಾಡನುಡಿ ನ್ಯೂಸ್
ಬಾಗಲಕೋಟೆ ಜು.೯
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು,  ಮಳೆ ಹಿನ್ನೆಲೆಯಲ್ಲಿ ಕೆಮ್ಮು, ನೆಗಡಿ, ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಇದು ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ೧೭ ವರ್ಷದೊಳಗಿನ ೮ ಮಕ್ಕಳು, ಮೂವರು ವೃದ್ಧರು ಸೇರಿ ಗುರುವಾರ ೩೬ ಜನರಲ್ಲಿ ಸೋಂಕು ದೃಢಪಟ್ಟಿದೆ. 
 ಗುಳೇದಗುಡ್ಡದಲ್ಲಿ ಮದುವೆ ರದ್ದಾಗಿ ಕ್ವಾರಂಟೈನ್‌ನಲ್ಲಿದ್ದ ೩೯ ಜನರ ಪೈಕಿ ಹುಬ್ಬಳ್ಳಿ ಮೂಲದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮದುವೆ ವರದ ಸಂಬAಧಿಕರಲ್ಲಿ ಸೋಂಕು ದೃಢಪಟ್ಟಿದ್ದರಿಂದ ಮದುವೆಯನ್ನು ರದ್ದುಪಡಿಸಲಾಗಿತ್ತು. ಈ ಪೈಕ್ಕಿ ಇಬ್ಬರಲ್ಲಿ ಸೋಂಕು ಇರುವುದು ಖಚಿತಪಟ್ಟಿದೆ. ಇನ್ನುಳಿದಂತೆ ಕಲಾದಗಿ ೧೯,  ಮುಧೋಳ ತಾಲೂಕು ಕೆಡಿ ಬುದ್ನಿ ೧, ಮುಧೋಳ ೪, ಜಮಖಂಡಿ ೧, ತೇರದಾಳ ೧, ಬಾಗಲಕೋಟೆ ೭, ಮುಚಖಂಡಿ. 
 ಬಾಗಲಕೋಟೆಯಲ್ಲಿ ಮದುವೆಯಾಗಿದ್ದ ಸೋಂಕಿತ ನವವಿವಾಹಿತ ಪಿ-೮೩೦೦ ಸೋಂಕಿತನಿAದ ಮತ್ತೆ ೧೦ ಜನರಲ್ಲಿ ಸೋಂಕು ದೃಢಪಟ್ಟಿದೆ. ಕಲಾದಗಿಯ ೮ ಜನ ಹಾಗೂ ಬಾಗಲಕೋಟೆಯ ಇಬ್ಬರಲ್ಲಿ ಈತನ ಸಂಪರ್ಕದಿAದಾಗಿಯೇ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. 
 ಈ ನಡುವೆ ಬನಹಟ್ಟಿಯ  ೬೫ ವರ್ಷದ ವೃದ್ಧ ಕೋವಿಡ್‌ಗೆ ಬಲಿಯಾಗಿದ್ದು, ಆತಂಕ ಮನೆ ಮಾಡಿದೆ. ಕಳೆದ ಹದಿನೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 


           
         ರಾಜಕೀಯ ಮುಖಂಡ,ಕಿರಾಣಿ ವ್ಯಾಪಾರಸ್ಥ, ನೌಕರನಿಗೂ ಸೋಂಕು
 ಬಾಗಲಕೋಟೆ ಹುಂಡೇಕಾರಗಲ್ಲಿಯ ವಕೀಲರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದ ಹಳೇ ಕಿರಾಣಿ ಬಜಾರ್‌ನ ವರ್ತಕರೊಬ್ಬರಲ್ಲೂ ಸೋಂಕು ಕಾಣಿಸಿಕೊಂಡಿರುವುದು ಆತಂಕವನ್ನು ಹೆಚ್ಚಿಸಿದೆ. ಕಳೆದ ಹತ್ತು ದಿನಗಳಿಂದ ಈ ವರ್ತಕನಿಗೆ ಹುಷಾರಿರಲಿಲ್ಲ. ಕಳೆದ ಶುಕ್ರವಾರವೇ ಆತ ಗಂಟಲು ಮಾದರಿ ಪರೀಕ್ಷೆಗೆ ನೀಡಿದ್ದು, ಗುರುವಾರ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
 ಜಿಲ್ಲಾ ಕೋವಿಡ್ ಆಸ್ಪತ್ರೆಯ ಡಿ-ದರ್ಜೆಯ ನೌಕರನಿಗೂ ಸೋಂಕು ದೃಢಪಟ್ಟಿರುವುದು ಆತಂಕವನ್ನು ಹೆಚ್ಚಿಸಿದೆ. ಇಳಕಲ್‌ನಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡ ರಾಜಕೀಯ ಮುಖಂಡರೊಬ್ಬರಲ್ಲಿ ಸೋಂಕು ಖಚಿತಪಟ್ಟಿರುವುದಾಗಿ ತಿಳಿದು ಬಂದಿದೆ. ಗುಳೇದಗುಡ್ಡದಲ್ಲಿ ರದ್ದಾದ ಮದುವೆಗೆ ಸಂಬAಧಿಸಿದAತೆ ಹುನಗುಂದದಲ್ಲಿ ಇಬ್ಬರು ಸೋಂಕಿತರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೩೪೯ ಕೊವಿಡ್ ಪ್ರಕರಣ ದೃಡಪಟ್ಟಿದ್ದು, ೧೫೦ ಜನ ಗುಣಮುಖರಾಗಿದ್ದಾರೆ. ೧೯೧ ಜನ ಕೊವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. 
ಬಳ್ಳಾರಿಯ ಪಿ-೧೦೭೬೯ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಹುಬ್ಬಳ್ಳಿಯ ೩೧ ವರ್ಷದ ಪುರುಷ ಪಿ-೨೮೯೪೫ (ಬಿಜಿಕೆ-೩೧೪), ೪೨ ವರ್ಷದ ಪುರುಷ ಪಿ-೨೮೯೪೬ (ಬಿಜಿಕೆ-೩೧೫), ಮಹಾರಾಷ್ಟçದ ಪಾಚಾಪೂರದಿಂದ ಆಗಮಿಸಿದ ಮುಧೋಳ ತಾಲೂಕಿನ ಬುದ್ನಿ ಕೆಡಿ ಗ್ರಾಮದ ೭೩ ವರ್ಷದ ವೃದ್ದ, ಪಿ-೨೮೯೪೭ (ಬಿಜಿಕೆ-೩೧೬), ಪಿ-೨೮೩೧೨ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬಾದಗಟ್ಟಿ ಏರಿಯಾದ ನಿವಾಸಿ ೬೬ ವರ್ಷದ ಮಹಿಳೆ ಪಿ-೨೮೯೪೮ (ಬಿಜಿಕೆ-೩೧೭), ೪೩ ವರ್ಷದ ಮಹಿಳೆ ಪಿ-೨೮೯೪೯ (ಬಿಜಿಕೆ-೩೧೮), ಪಿ-೧೫೩೦೪ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ೩೨ ವರ್ಷದ ಪುರುಷ ಪಿ-೨೮೯೫೦ (ಬಿಜಿಕೆ-೩೧೯), ೩೬ ವರ್ಷದ ಮಹಿಳೆ ಪಿ-೨೮೯೫೧ (ಬಿಜಿಕೆ-೩೨೦), ಮಹಾರಾಷ್ಟçದ ಸಾಂಗಲಿಯಿAದ ಆಗಮಿಸಿದ ತೇರದಾಳದ ೨೭ ವರ್ಷದ ಯುವಕನಿಗೆ ಪಿ-೨೮೯೫೨ (ಬಿಜಿಕೆ-೩೨೧) ಸೋಂಕು ದೃಡಪಟ್ಟಿದೆ.
ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆಯ ನವನಗರದ ಸೆಕ್ಟರ ನಂ.೨೮ರ ನಿವಾಸಿ ೫೬ ವರ್ಷದ ಮಹಿಳೆ ಪಿ-೨೮೯೫೩ (ಬಿಜಿಕೆ-೩೨೨), ಹಳೆಯ ಬಾಗಲಕೋಟೆಯ ಶಾಂತಿ ನಗರದ ೪೫ ವರ್ಷದ ಪುರುಷ ಪಿ-೨೮೯೫೪ (ಬಿಜಿಕೆ-೩೨೩), ಕಲಾದಗಿ ಗ್ರಾಮದ ಪಿ-೧೫೩೦೧ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ೨೬ ವರ್ಷದ ಯುವಕ ಪಿ-೨೮೯೫೫ (ಬಿಜಿಕೆ-೨೩೪), ೬೦ ವರ್ಷದ ಪುರುಷ ಪಿ-೨೮೯೫೬ (ಬಿಜಿಕೆ-೩೨೫), ೨೦ ವರ್ಷದ ಯುವತಿ ಪಿ-೨೮೯೫೭ (ಬಿಜಿಕೆ-೩೨೬), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆ ಹುಂಡೆಕಾರ ಗಲ್ಲಿಯ ನಿವಾಸಿ ೩೯ ವರ್ಷದ ಪುರುಷ ಪಿ-೨೮೯೫೮ (ಬಿಜಿಕೆ-೩೨೭), ಉಸಿರಾಟದ ತೊಂದರೆ ಲಕ್ಷಣ ಹೊಂದಿದ್ದ ನವನಗರದ ಸೆಕ್ಟರ ನಂ.೫೨ರ ನಿವಾಸಿ ೭೩ ವರ್ಷದ ವೃದ್ದ ಪಿ-೨೮೯೫೯ (೩೨೮) ಸೋಂಕು ದೃಢÀಪಟ್ಟಿದೆ.
ಬಿಜಿಕೆ-೩೨೮ರ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬಾಗಲಕೋಟೆ ವಿದ್ಯಾಗಿರಿ ೧೭ನೇ ಕ್ರಾಸ್‌ನ ನಿವಾಸಿ ೫೬ ವರ್ಷದ ಪುರುಷ ಪಿ-೨೮೯೬೦ (ಬಿಜಿಕೆ-೩೨೯), ಕಲಾದಗಿಯ ಪಿ-೮೩೦೦ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ೧೨ ವರ್ಷದ ಬಾಲಕ ಪಿ-೨೮೯೬೧ (ಬಿಜಿಕೆ-೩೩೦), ೨೨ ವರ್ಷದ ಯುವಕ ಪಿ-೨೮೯೬೨ (ಬಿಜಿಕೆ-೩೩೧), ೩೦ ವರ್ಷದ ಮಹಿಳೆ ಪಿ-೨೮೯೬೩ (ಬಿಜಿಕೆ-೩೩೨), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದ ೨೮ ವರ್ಷದ ಯುವಕ ಪಿ-೨೮೯೬೪ (ಬಿಜಿಕೆ-೩೩೩), ಪಿ-೮೩೦೦ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿಯ ೨೮ ವರ್ಷದ ಯುವತಿ ಪಿ-೨೮೯೬೫ (ಬಿಜಿಕೆ-೩೩೪), ೮ ವರ್ಷ ಬಾಲಕಿ ಪಿ-೨೮೯೬೬ (ಬಿಜಿಕೆ-೩೩೫), ೪ ವರ್ಷದ ಬಾಲಕ ಪಿ-೨೮೯೬೭ (ಬಿಜಿಕೆ-೩೩೬), ೩ ವರ್ಷದ ಬಾಲಕ ಪಿ-೨೮೯೬೮ (ಬಿಜಿಕೆ-೩೩೭), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಹಳೆ ಬಾಗಲಕೋಟೆಯ ವಿನಾಯಕ ನಗರದ ೩೮ ವರ್ಷದ ಪುರುಷ ಪಿ-೨೮೯೬೯ (ಬಿಜಿಕೆ-೩೩೮) ಸೋಂಕು ದೃಢಪಟ್ಟಿದೆ.
ಪಿ-೮೩೦೦ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ೩೨ ವರ್ಷದ ಪುರುಷ ಪಿ-೨೮೯೭೦ (ಬಿಜಿಕೆ-೩೩೯), ೬ ವರ್ಷದ ಬಾಲಕಿ ಪಿ-೨೮೯೭೧ (ಬಿಜಿಕೆ-೩೪೦), ಮಹಾರಾಷ್ಟçದಿಂದ ಆಗಮಿಸಿದ ಹಳೆ ಬಾಗಲಕೋಟೆಯ ೫ ವರ್ಷದ ಬಾಲಕ ಪಿ-೨೮೯೭೨ (ಬಿಜಿಕೆ-೩೪೧), ಪಿ-೮೩೦೦ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿಯ ೧೭ ವರ್ಷದ ಬಾಲಕಿ ಪಿ-೨೮೯೭೩ (ಬಿಜಿಕೆ-೩೪೨), ೩ ವರ್ಷದ ಬಾಲಕಿ ಪಿ-೨೮೯೭೪ (ಬಿಜಿಕೆ-೩೪೩), ೪೨ ವರ್ಷದ ಮಹಿಳೆ ಪಿ-೨೮೯೭೫ (ಬಿಜಿಕೆ-೩೪೪), ೨೧ ವರ್ಷದ ಯುವತಿ ಪಿ-೨೮೯೭೬ (ಬಿಜಿಕೆ-೩೪೫), ೫೨ ವರ್ಷದ ಪುರುಷ ಪಿ-೨೮೯೭೭ (ಬಿಜಿಕೆ-೩೪೬), ೪೩ ವರ್ಷದ ಮಹಿಳೆ ಪಿ-೨೮೯೭೮ (ಬಿಜಿಕೆ-೩೪೭), ೨೫ ವರ್ಷದ ಯುವತಿ ಪಿ-೨೮೯೭೯ (ಬಿಜಿಕೆ-೩೪೮), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆಯ ಬಾರಪೆಟ್ ಗಲ್ಲಿಯ ನಿವಾಸಿ ೪೦ ವರ್ಷದ ಪುರುಷ ಪಿ-೨೮೯೮೦ (ಬಿಜಿಕೆ-೩೪೯) ಕೋವಿಡ್ ಸೋಂಕು ದೃಢÀಪಟ್ಟಿದೆ. 


            ೧೫೨೨ ವರದಿಗಳ ನಿರೀಕ್ಷೆ
ಜಿಲ್ಲೆಯಿಂದ ಕಳುಹಿಸಲಾಗಿದ್ದ ಒಟ್ಟು ೧೧೩೮ ಸ್ಯಾಂಪಲ್‌ಗಳ ಪೈಕಿ ೪೦೪ ಸ್ಯಾಂಪಲ್‌ಗಳ ವರದಿ ನೆಗಟಿವ್ ಬಂದಿವೆ. ಜಿಲ್ಲೆಯಿಂದ ಹೊಸದಾಗಿ ಮತ್ತೆ ೩೮೪ ಸ್ಯಾಂಪಕ್‌ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಬಾಕಿ ಹಾಗೂ ಹೊಸದಾಗಿ ಕಳುಹಿಸಿದ ಸ್ಯಾಂಪಲ್ ಸೇರಿ ಒಟ್ಟು ೧೫೨೨ ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಸೋಂಕು ದೃಡಪಟ್ಟವರನ್ನು ನಿಗದಿತ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತ್ಯೇಕವಾಗಿ ೧೯೯೭ ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು ೧೬೦೧೬ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ ೧೪೦೪೬ ನೆಗಟಿವ್ ಪ್ರಕರಣ, ೩೪೯ ಪಾಜಿಟಿವ್ ಪ್ರಕರಣ ಹಾಗೂ ೮ ಜನ ಮೃತ ಪ್ರಕರಣ ವರದಿಯಾಗಿರುತ್ತದೆ. ಕೋವಿಡ್-೧೯ ದಿಂದ ಒಟ್ಟು ೧೫೦ ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು ೧೯೧ ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು ೨೯ ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. ಕಂಟೈನ್ಮೆAಟ್ ಝೋನ್ ೩೦ ಇದ್ದು, ಇನ್‌ಸ್ಟಿಟ್ಯೂಶನ್ ಕ್ವಾಂರAಟೈನ್‌ನಲ್ಲಿದ್ದ ೪೫೫೩ ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.