ಮುಷ್ಕರದ ಮಧ್ಯೆ ಕರ್ತವ್ಯ: ಕಲ್ಲು ತೂರಾಟಕ್ಕೆ ಚಾಲಕ ಬಲಿ
ಹತ್ತನೇ ದಿನಕ್ಕೆ ಕಾಲಿರಿಸಿರುವ ಸಾರಿಗೆ ನೌಕರರ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು ಕರ್ತವ್ಯಕ್ಕೆ ಹಾಜರಾಗಿ ಜಮಖಂಡಿಗೆ ಪ್ರಯಾಣಿಕರನ್ನು ಕರೆತರುತ್ತಿದ್ದ ಬಸ್ ಚಾಲಕನ ಮೇಲೆ ಕಲ್ಲು ಬಿದ್ದು ಆತ ಸಾವಿಗೀಡಾಗಿರುವ ಘಟನೆ ನಡೆದಿದೆ
ವಿಜಯಪುರದಿಂದ ಬರುತ್ತಿದ್ದ ಜಮಖಂಡಿ ಡಿಪೋ ಉದ್ಯೋಗಿ ನಬೀ ರಸೂಲ್ ಅವಟಿ (೫೮) ಚಾಲಕ ಜಮಖಂಡಿಯಿAದ ಘತ್ತರಗಿಗೆ ಹೋಗಿ ವಿಜಯಪೂರ ಮಾರ್ಗವಾಗಿ ಜಮಖಂಡಿಗೆ ವಾಪಸ್ಸು ಬರುತ್ತಿದ್ದಾಗ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬರುತ್ತಿದ್ದಂತೆ ದುಷ್ಕರ್ಮಿಗಳು ಬಸ್ ಮೇಲೆ ತೂರಿದ ಕಲ್ಲು ಚಾಲಕನ ಮೇಲೆ ಬಿದ್ದಿದೆ ತಲೆ ಹಾಗೂ ಎದೆಗೆ ಪೆಟ್ಟಾಗಿದ್ದು ಕೂಡಲೇ ಬಸ್ ನಿಲ್ಲಿಸಿ ಕೆಳಗಿಳಿದು ನೆಲಕ್ಕೆ ಒರಗುತ್ತಿದ್ದಂತೆ ಪ್ರಜ್ಞಾಹೀನಗೊಂಡಿದ್ದಾನೆAದು ಹೇಳಲಾಗಿದೆ.
ಬಸ್‌ನಲ್ಲಿದ್ದ ಪ್ರಯಾಣಿಕರು ಆಂಬುಲೆನ್ಸ ಮೂಲಕ ಜಮಖಂಡಿ ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನು ೧೪ತಿಂಗಳು ಮಾತ್ರ ಸೇವಾ ಅವಧಿ ಇದ್ದು ೫೫ ವರ್ಷ ಮೇಲ್ಪಟ್ಟವರು ಕರ್ತವ್ಯಕ್ಕೆ ಹಾಜರಾಗುವದು ಕಡ್ಡಾಯ ಎಂದು ಸರಕಾರದ ಬಿಗಿ ಸೂಚನೆ ಹಿನ್ನಲೆಯಲ್ಲಿ ಪ್ರಮಾಣಪತ್ರ ಸಲ್ಲಿಸಿ ಕೆಲಸಕ್ಕೆ ಹಾಜರಾಗಿದ್ದ ನಬೀ ರಸೂಲ್ ಅವರು ಕಲ್ಲಿನ ಏಟಿಗೆ ಬಲಿಯಾಗಿದ್ದು ೧೦ ದಿನಗಳ ಮುಷ್ಕರದ ಅವಧಿಯಲ್ಲಿ ಇದು ಮೊದಲ ದುರಂತ ಎಂದು ಹೇಳಲಾಗಿದೆ.
ಘಟನೆ ವರದಿಯಾಗುತ್ತಿದ್ದಂತೆ ಮುಷ್ಕರ ನಿರತರು, ಕರ್ತವ್ಯಕ್ಕೆ ಹಾಜರಾದವರಲ್ಲಿ ಆತಂಕ ಮನೆ ಮಾಡಿದ್ದು ಸರಕಾರದ ಉದಾಸೀನ ಧೋರಣೆ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲೋಕೇಶ ಜಗಳಾಸರ್ ಅವರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ ಜಿಲ್ಲಾಧಿಕಾರಿ ಕ್ಯಾ ರಾಜೇಂದ್ರ, ವಾಕರಸ ವ್ಯವಸ್ಥಾಪಕ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.
ಮೃತನ ಹೆಂಡತಿಯ ಆಕ್ರೋಶ
೯ ದಿನಗಳಿಂದ ನನ್ನ ಪತಿ ಕೆಲಸಕ್ಕೆ ಗೈರಾಗಿದ್ದರು ಅವಟಿಗಲ್ಲಿಯಲ್ಲಿರುವ ನಮ್ಮ ಮನೆಗೆ ಸಾರಿಗೆ ಅಧಿಕಾರಿಗಳು ಪದೇ ಪದೇ ಬಂದು ಕೆಲಸಕ್ಕೆ ಹಾಜರಾಗಲು ಒತ್ತಡ ಹೇರಿದ್ದಾರೆ ಈಗ ಕೆಲಸಕ್ಕೆ ಹಾಜರಾಗಿ ಪ್ರಾಣ ಕಳೆದುಕೊಂಡಿದ್ದಾರೆ ಇದಕ್ಕೆ ಯಾರು ಹೊಣೆ ಎಂದು ಮೃತ ಚಾಲಕನ ಪತ್ನಿ ಶಹೀರಾ ಬಾನು ಖಾರವಾಗಿ ಪ್ರಶ್ನಿಸಿದ್ದಾರೆ. ನಾಲ್ವರು ಪುತ್ರರು ಇರುವ ಕುಟಕಂಬಕ್ಕೆ ಅವರೇ ಆಸರೆಯಾಗಿದ್ದರು ಈಗ ನಾವು ಬೀದಿಗೆ ಬಿದ್ದಿದ್ದೇವೆ ಎಂದು ಅವರು ಗೋಳು ತೋಡಿಕೊಂಡಿದ್ದಾರೆ.