ಕೊನೆಗೆ ಬಲೆಗೆ ಬಿದ್ದ ಮುರನಾಳ ಕೆರೆ ಮೊಸಳೆ..!

ಕೊನೆಗೆ ಬಲೆಗೆ ಬಿದ್ದ ಮುರನಾಳ ಕೆರೆ ಮೊಸಳೆ..!

ಬಾಗಲಕೋಟೆ: ಸಮೀಪದ ಮುರನಾಳ‌ ಪುನರ್ವಸತಿ ಕೇಂದ್ರದ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಜನವಸತಿ‌ ಪ್ರದೇಶದ ಮಧ್ಯದಲ್ಲೇ ಕೆರೆ‌‌ ಇದ್ದಿದ್ದರಿಂದ ಆತಂಕ ಹೆಚ್ಚಾಗಿತ್ತು. ಶುಕ್ರವಾರ ದಿನವಿಡೀ ಮೊಸಳೆ ಇರುವಿಕೆಯನ್ನು ಖಚಿತಪಡಿಸಿಕೊಂಡಿದ್ದ ಅರಣ್ಯ ಇಲಾಖೆ ಶನಿವಾರ ಮೊಸಳೆ ಹಿಡಿಯಲು ವ್ಯವಸ್ಥಿತ ತಂತ್ರ ರೂಪಿಸಿತ್ತು.

ಕೆರೆ ಅಕ್ಕಪಕ್ಕದಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು‌ ತೆರವು ಮಾಡಿದ ಇಲಾಖೆ ಬಲಿ ಹಾಲಿ ಕಾಯುತ್ತ ಕುಳಿತಿತ್ತು. ಅದರದಲ್ಲಿ ಮೊಸಳೆ‌ ಸಿಲುಕಿರುವುದು ಖಚಿತವಾಗುತ್ತಿದ್ದಂತೆ ಅದನ್ನು ದಡಕ್ಕೆ ಎಳೆದು ತರಲಾಯಿತು. ನಂತರ ಅದನ್ನು ಹಗ್ಗದಿಂದ ಬಿಗಿದು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು.

ಡಿಎಫ್ಒ ಸುರೇಶ ಭಜಂತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಹವೇಲಿಯ ನುರಿತ ಮೀನಗಾರರ ತಂಡ ಯಶಸ್ವಿಯಾಗಿ ಮೊಸಳೆಯನ್ನು ಸೆರೆ‌ ಹಿಡಿಯಿತು.