ಇಳಕಲ್ ಸೀರೆಗೆ ಜೀವ ತುಂಬಿದ ರೂಪದರ್ಶಿ

ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಆತ್ಮನಿರ್ಭತೆ ಹಾಗೂ ವೋಕಲ್‌ಫಾರ್ ಲೋಕಲ್ ಪಾಠದಿಂದಾಗಿ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆ ಸೇರಿದಂತೆ ಅನೇಕ ಸ್ಥಳೀಯವಾಗಿ ಉತ್ಪಾದಿಸಲ್ಪಡುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡು ಬಂದಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ಲೋಕಲ್ ಉತ್ಪಾದನೆಯ ವಸ್ತುಗಳಿಗೆ ಆದ್ಯತೆ ಒದಗಿಸುವ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ ಸ್ಥಳೀಯ ವ್ಯಾಪಾರಸ್ಥರು ಕೆಲವು ಕ್ರಿಯೆಟಿವ್ ಐಡಿಯಾಸ್‌ನೊಂದಿಗೆ ಮುಂದೆ ಬಂದಲ್ಲಿ ಅವರ ಉತ್ಪನ್ನಗಳ ಮಾರಾಟಕ್ಕೊಂದು ಉತ್ತಮ ವೇದಿಕೆಯನ್ನು ಒದಗಿಸಬಹುದಾಗಿದೆ. ಇದೀಗ ಇಳಕಲ್‌ನ ರೂಪದರ್ಶಿ ತೃಪ್ತಿ ಡಿ. ಸಾಲಿಮಠ ಇಳಕಲ್ ಸೀರೆಯನ್ನುಟ್ಟು ಇನ್‌ಸ್ಟಾ ಹಾಗೂ ಫೇಸ್ಬುಕ್‌ನಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊAಡಿದ್ದಾರೆ. ಹಲವು ವ್ಯಾಪಾರಸ್ಥರು ತಮ್ಮ ಮಳಿಗೆಯ ಪ್ರಚಾರಕ್ಕೆ ಈ ಫೋಟೋಗಳನ್ನು ಬಳಸಿಕೊಳ್ಳುವ ಸಂಬAಧ ತೃಪ್ತಿ ಜತೆಗೆ ಮಾತುಕತೆಗೂ ಮುಂದಾಗಿದ್ದಾರೆ. ಅವರ ಫೋಟೋಶೂಟ್ ಚಿತ್ರಗಳು ಇಲ್ಲಿವೆ ನೋಡಿ

1. ಸ್ಥಳೀಯ ಸೀರೆ ಮಳಿಗೆಯೊಂದು ತೃಪ್ತಿ ಅವರ ಫೋಟೋ ಬಳಸಿಕೊಂಡು ವೋಕಲ್‌ಫಾರ್‌ಲೋಕಲ್ ಘೋಷಣೆಯೊಂದಿಗೆ ಗಮನಸೆಳೆಯುತ್ತಿರುವುದು

View this post on Instagram

A post shared by Trupti D Salimath (@trupti_salimath) on

Next