ಮದರಖಂಡಿ ಕೊಲೆ ಪ್ರಕರಣ: ೯ ಆರೋಪಿಗಳು ಪೊಲೀಸ್ ವಶದಲ್ಲಿ..!
ಜಮಖಂಡಿ ತಾಲೂಕಿನ ಮದರಖಂಡಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಜನರನ್ನು ಪೊಲೀಸ್ ತಂಡಗಳು ತೀವ್ರ ವಿಚಾರಣೆಗೆ ಒಳಪಡಿಸಿವೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ಜಮೀನು ವಿಚಾರವಾಗಿ ಜಮಖಂಡಿ ತಾಲೂಕಿನ ಮದರಖಂಡಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಮದರಖಂಡಿ ಗ್ರಾಮದ ಮುದರಡ್ಡಿ ಕುಟುಂಬದ ಹನುಮಂತ(38), ಮಲ್ಲಪ್ಪ(44), ಈಶ್ವರ(40), ಬಸವರಾಜ(36) ಅವರನ್ನು ಶನಿವಾರ ಸಂಜೆ ಹತ್ಯೆ ಮಾಡಲಾಗಿತ್ತು.
ಜಮೀನು ವಿಚಾರವಾಗಿ ಮುದರಡ್ಡಿ ಹಾಗೂ ಪುಟಾಣಿ ಕುಟುಂಬದ ಮಧ್ಯೆ ವೈಷಮ್ಯ ಬೆಳೆದಿತ್ತು. ಘಟನೆ ನಂತರ ಪುಟಾಣಿ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದರು. ಅವರ ಪತ್ತೆಗೆ ಜಾಲ ಬೀಸಿದ ಪೊಲೀಸರು ೮-೧೦ ಗಂಟೆ ಅವಧಿಯಲ್ಲಿ ಎಲ್ಲ ೯ ಜನರನ್ನು ಪತ್ತೆ ಮಾಡಿ ವಿಚಾರಣೆ ಆರಂಭಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ೯ ಜನರ ಪಾತ್ರ ಇರುವುದು ಕಂಡು ಬಂದಿದ್ದು, ಬೇರೆ, ಬೇರೆ ತಂಡದಿಂದ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್ಪಿ ಲೋಕೇಶ ಜಗಲಾಸರ್ ಮಾಹಿತಿ ನೀಡಿದ್ದಾರೆ.