ಕಾರ್-ಟಂಟಂ ನಡುವೆ ಅಪಘಾತ- ಮೂವರ ಸಾವು

ಕಾರ್-ಟಂಟಂ ನಡುವೆ ಅಪಘಾತ- ಮೂವರ ಸಾವು

ಬಾಗಲಕೋಟೆ:ಕಲಾದಗಿ‌ ಪೊಲೀಸ್ ಠಾಣಾ ವ್ಯಾಪ್ತಿ ರಾಮಾರೂಢ ಮಠದ ಬಳಿ  ಟಂಟಂ ಮತ್ತು ಕಾರಿನ ನಡುವೆ ಸಂಭವಿಸಿರುವ ಅಪಘಾತದಲ್ಲಿ ಮಗು ಸೇರಿ ಇಬ್ಬರು ಮೃತಪಟ್ಟು ೮ ಜನ ಗಾಯಗೊಂಡಿರುವ ಘಟನೆ ಜರುಗಿದೆ.

ಗದ್ದನಕೇರಿಯಿಂದ ಟಂಟಂನಲಿ ೧೦ಜನ ತುಳಸಿಗೇರಿಗೆ ತೆರಳುತ್ತಿದ್ದರು  ಈ ವೇಳೆ ಕಾರು ಮತ್ತು‌ ಟಂಟಂ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸಾಗಿಸಲಾಗಿದೆ ಕಲಾದಗಿ ಠಾಣೆ ಪೊಲೀಸರು‌ ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ಪುಟ್ಟ ಕಂದಮ್ಮ ಗೌರಿ  ಹಾಗೂ ಓರ್ವ ಪುರುಷ ಸ್ಥಳದಲ್ಲಿ ಸಾವನ್ನಪ್ಪಿದರೆ,‌ಇನ್ನೋರ್ವ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾನೆ ಎಂದು ತಿಳಿದು ಬಂದಿದೆ.