ಕೌಟುಂಬಿಕ ಕೆಲಹಕ್ಕೆ ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ 

ಕೌಟುಂಬಿಕ ಕೆಲಹಕ್ಕೆ ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ 

ನಾಡನುಡಿ ನ್ಯೂಸ್
ಬಾಗಲಕೋಟೆ:
ಸಮೀಪದ ಶಿರೂರ ಗ್ರಾಮದಲ್ಲಿ ಕೌಟಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಸಂಗಪ್ಪ ಈರಪ್ಪ ಕೋಟಿ(೩೭)ಕೊಲೆಯಾದ ದುರ್ದೈವಿ.  ಅದೇ ಗ್ರಾಮದವರಾದ  ರಮೇಶ ಅಂಗಡಿ, ಸುನೀಲ ವಾಲಿ ಎಂಬುವವರು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಶಿರೂರು ರಸ್ತೆಯಲ್ಲಿರುವ ಹೊಲಕ್ಕೆ ಈರಪ್ಪ ಹೊರಟಾಗ ಅಡ್ಡಗಟ್ಟಿರುವ ಇಬ್ಬರು ಆರೋಪಿಗಳು ಈರಪ್ಪನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಪಿ ಲೋಕೇಶ ಜಗಲಾಸರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ಜಾಹೀರಾತು)