ಬಾದಾಮಿ ಬನಶಂಕರಿ ಜಾತ್ರೆ: ಪ್ರದರ್ಶನಗೊಳ್ಳುತ್ತಿರುವ ನಾಟಕಗಳ ಪಟ್ಟಿ ಇಲ್ಲಿದೆ ನೋಡಿ
ಬಾಗಲಕೋಟೆ: ಬಾದಾಮಿ ಬನಶಂಕರಿ ದೇವಿ ಜಾತ್ರೆ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ಕೆ ಎಷ್ಟು ಖ್ಯಾತಿಗಳಿಸಿದೆಯೋ ಮನರಂಜನೆಗೂ ಅಷ್ಟೇ ಹೆಸರುವಾಸಿಯಾಗಿದೆ. ಒಂದು ತಿಂಗಳ ಕಾಲ ಜಾತ್ರೆ ಸಂದರ್ಭದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳು ಇಡೀ ರಾಜ್ಯದ ಗಮನಸೆಳೆಯುತ್ತವೆ. ಈ ಬಾರಿಯೂ ವಿಭಿನ್ನ ಹೆಸರಿನ ನಾಟಕಗಳು ಜನರನ್ನು ಸೆಳೆಯಲು ಸಜ್ಜಾಗಿವೆ.
ವರ್ಷಾರಂಭದಲ್ಲಿ ಬರುವ ಈ ಬನಶಂಕರಿ ಜಾತ್ರೆಯಲ್ಲಿ ಈ ಬಾರಿ ೧೦ ನಾಟಕಗಳು ನಿತ್ಯ ೩ ರಿಂದ ೪ ಪ್ರದರ್ಶನವನ್ನು ಹಗಲು-ರಾತ್ರಿ ನೀಡಲಿವೆ. ಇದಕ್ಕೆ ಪೂರಕವಾಗಿ ರಂಗ ಪ್ರೇಮಿಗಳು ಕೂಡ ಬೆಳ್ಳಂಬೆಳಗ್ಗೆ ನಾಟಕಗಳನ್ನು ವೀಕ್ಷಿಸಿ ರಂಗಭೂಮಿ ಕಲಾವಿದರಿಗೆ ಹರಿಸಿ ಆಶಿರ್ವದಿಸುತ್ತಾರೆ.
ರಾಜ್ಯದಲ್ಲಿ ಇಲ್ಲಿ ಪ್ರದರ್ಶನ ನೀಡುವಷ್ಟು ನಾಟಕಗಳು ಮತ್ತು ಪ್ರದರ್ಶನ ನೀಡುವಷ್ಟು ದಿನಗಳು ಬರ‍್ಯಾವ ಜಾತ್ರೆಯಲ್ಲಿಯೂ ನೀಡಲಿಕ್ಕಿಲ್ಲ ಎಂಬ ಮಾತಿಗೆ ಪೂರಕವಾಗಿ ನಾಟಕ ಕಂಪನಿಗಳ ಪ್ರದರ್ಶನ ನೀಡುತ್ತವೆ. ಇದರಲ್ಲಿನ ಕಲಾವಿದರು ಕಲಾ ರಸಿಕರ ಮೆಚ್ಚುಗೆ ಗಳಿಸಲು ಇನ್ನಿಲದ ತಯಾರಿಯನ್ನು ಮಾಡಿಕೊಂಡು ಬಂದಿರುತ್ತಾರೆ. ಎನ್ನುವದಕ್ಕೆ ಈ ಬಾರಿ ಹಾಕಲಾಗಿರುವ ನಾಟಕಗಳ ಸಂಖ್ಯೆಯೇ ಸಾಕ್ಷಿಕರಿಸುತ್ತದೆ.
ನಾಟಕದಲ್ಲಿ ಹೊಸತನ, ಸಾಹಿತ್ಯ, ಸಂಗೀತ, ಕಥೆ ಸೇರಿದಂತೆ ಪ್ರತಿಯೊಂದರಲ್ಲಿಯೂ ವಿಶೇಷತೆಯನ್ನು ಇಟ್ಟುಕೊಂಡು ಕಲಾವಿದರು ತಮ್ಮ ಗಟ್ಟಿತನವನ್ನು ಪ್ರದರ್ಶಿಸುತ್ತಾರೆ. ಇದಕ್ಕ ಪೂರಕವಾಗಿ ದೊಡ್ಡ ಬ್ಯಾನರ್, ಲಿತೋ, ಧ್ವನಿವರ್ಧಕರದ ಮೂಲಕ ನಡೆಸುವ ಪ್ರಚಾರದ ಭರಾಟೆ ಬರ‍್ಯಾವ ಜಾತ್ರೆಯಲ್ಲಿ ನೋಡಿರಲಿಕ್ಕಿಲ್ಲ. ಅಷ್ಟೊಂದು ಸಿದ್ದತೆ ಮಾಡಿಕೊಂಡಿರುತ್ತಾರೆ. ನಿರಂತರವಾಘಿ ಒಂದು ತಿಂಗಳುಗಳ ಕಾಲ ಜಾತ್ರೆಯಲ್ಲಿ ಬೀಡುಬಿಟ್ಟು ಬೆಳ್ಳಂಬೆಳಗು ನಾಡಕಗಳನ್ನು ಪ್ರದರ್ಶಿಸುತ್ತಾರೆ.
ನಿತ್ಯ ಕನಿಷ್ಠ ೨ ಆಟಗಳಿಂದ ಒಂದೊAದು ಕಂಪನಿ ನಿತ್ಯ ನಾಲ್ಕು ಪ್ರದರ್ಶನಗಳನ್ನು ನೀಡುತ್ತವೆ. ಇದಕ್ಕೆ ಕಾರಣ ಎಂದರೆ ಇಲ್ಲಿನ ನಾಟಕ ಪ್ರೇಮಿಗಳು ಎಂದರೆ ಅದು ಅತಿಶೋಕ್ತಿಯಲ್ಲ. ಇಂತಹ ಸ್ವಾರಸ್ಯಕರ ಉತ್ಸವದಲ್ಲಿ ಯಾತ್ರಾರ್ಥಿಗಳು, ಭಕ್ತಾಧಿಗಳು ಭಾಗವಹಿಸಿ ಜಾತ್ರೆಯ ಮಜಾ ತೆಗೆದುಕೊಳ್ಳಲು ಉತ್ತರ ಕರ್ನಾಟಕದ ಪ್ರಸಿದ್ಧ ಬಾದಾಮಿ ಬನಶಂಕರಿದೇವಿ ಜಾತ್ರೆಗೆ ಒಮ್ಮೆಯಾದರೂ ಭೇಟಿ ಕೊಟ್ಟು... ಜಾತ್ರೆ ಸಂಭ್ರಮದ ಸೊಬಗು ನೋಡಿ...ಆಸ್ವಾದಿಸಿ...ಆನಂದಿಸಿ...
ಜಾತ್ರೆಯಲ್ಲಿರುವ ನಾಟಕಗಳು...
* ಗುಬ್ಬಿ ಕಂಪನಿ -ಮನ್ಯಾಗ ಗಂಗಿ ಹೊಲ್ದಾಗ ಗೌರಿ
* ದಾವಣಗೇರಿ ಕಂಪನಿ (ಜವಾರಿ ಹುಡುಗ)
* ತಾಳಿಕೋಟಿ ಕಂಪನಿ (ಅದು ಬ್ಯಾರೇನ ಐತಿ)
* ಕುಂಟೋಜಿ ಕಂಪನಿ ( ಯಾರಿಗೂ ಹೇಳ್ಬೇಡ ಯಂಕವ್ವ)
* ಗುಳೇದಗುಡ್ಡ ಕಂಪನಿ ( ಕಟಗರೊಟ್ಟಿ ಕಲ್ಲವ್ವ)
* ಕುಮಾರ ಮಂಡಲಗೇರಿ ಕಂಪನಿ ( ಹಗರಿಲ್ಲ ಹನಮವ್ವ)
* ಚಿತ್ತರಗಿ ಕಂಪನಿ ( ಗಡಿಬಿಡಿ ಗಂಗವ್ವ)
* ವೀರಯ್ಯ ಮಡಲಗೇರಿ ಕಂಪನಿ ( ಹೆಂಡತಿ ಟೂರಿಗೆ ಗಂಡ ಬಾರಿಗೆ)
* ಕಮತಗಿ ಕಂಪನಿ ( ಸೌಡಿಲ್ಲದ ಸಾಹುಕಾರ)
* ಕಲ್ಲೂರ ಕಂಪನಿ ( ಪಾರವ್ವನ ಹಾರಾಟ ಹನಮನ ಚೆಲ್ಲಾಟ)