ಬಾಗಲಕೋಟೆ: ವಿಘ್ನ ನಿವಾರಕ ಗಣೇಶನ ಹಬ್ಬಕ್ಕೆ ಕೋಟೆನಗರಿ ಸಿಂಗಾರಗೊoಡಿದೆ. ಗಣೇಶನನ್ನು ಮೋದಕ ಪ್ರಿಯ ಎಂದೂ ಕರೆಯುವುದು ಉಂಟು. ಅಂಥ ಗಣೇಶನ ಭಕ್ತರಿಗಾಗಿ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಶ್ರೀರೇಣುಕಾ ಸ್ವೀಟ್ಸ್ನಲ್ಲಿ ತರಹೇವಾರಿ ಮೋದಕಗಳು ಮಾರಾಟಕ್ಕೆ ಸಿದ್ಧಗೊಂಡಿವೆ.
ಹುಬ್ಬಳ್ಳಿ ಮೂಲದ ಶ್ರೀರೇಣುಕಾ ಸ್ವೀಟ್ಸ್ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ಬ್ರಾö್ಯಂಡ್. ಇಲ್ಲಿ ಸಿಗುವ ಧಾರವಾಡ ಪೇಢಾ, ಪಾಪಡಿ ಚಟ್ನಿ ಎಂಥವರ ನಾಲಿಗೆ ರುಚಿಯನ್ನೂ ತಣಿಸದೆ ಇರಲಾರವು. ಶ್ರೀರೇಣುಕಾ ಸ್ವೀಟ್ಸ್ನ ಮಳಿಗೆ ಬಾಗಲಕೋಟೆಯ ವಿದ್ಯಾಗಿರಿಯಲ್ಲೂ ಲಭ್ಯವಿದ್ದು, ವಿವಿಧ ಬಗೆಯ ಮೋದಕಗಳು ಮಾರಾಟಕ್ಕೆ ಲಭ್ಯವಿವೆ.
ಮಲೈ ಮೋದಕ, ಕೇಸರ ಮೋದಕ, ಮಾವಾ ಮೋದಕ, ಡ್ರೆöÊಫ್ರುಟ್ ಮೋದಕ, ಆಟ್ಟಾ ಮೋದಕಗಳು ಗಣೇಶ ಭಕ್ತರಿಗಾಗಿ ಸಿದ್ಧಗೊಂಡಿವೆ. ಇದಲ್ಲದೇ ಈ ಎಲ್ಲ ಬಗೆಯ ಮೋದಕಗಳನ್ನು ಒಳಗೊಂಡಿರುವ ೧೧ ಹಾಗೂ ೨೧ ಪೀಸ್‌ನ ಮೋದಕ ಬಾಕ್ಸ್ಗಳು ಸಹ ಮಾರಾಟಕ್ಕೆ ಲಭ್ಯವಿವೆ. ನೀವು ಅದ್ಧೂರಿ ಗಣೇಶ ಆಚರಣೆ ತಯಾರಿಯಲ್ಲಿದ್ದರೆ ಈ ಮೋದಕ ಹಾಗೂ ಸಿಹಿ ಪದಾರ್ಥಗಳು ನಿಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಲಿವೆ.
ಮೋದಕಗಳು ಮಾತ್ರವಲ್ಲದೇ ಈ ಹಬ್ಬಕ್ಕೆ ಜನ ವಿಶೇಷವಾಗಿ ಮೋತಿಚೂರ್ ಲಡ್ಡುಗಳನ್ನೂ ಖರೀದಿಸುತ್ತಾರೆ. ಅತ್ಯಂತ ರುಚಿಕಟ್ಟಾದ ಮೋತಿಚೂರ್ ಲಡ್ಡು, ಧಾರವಾಡ ಪೇಢಾ, ಖವಾ ಪೇಢಾ, ಕೇಸರ್ ಪೇಢಾ, ಟಿಕಳಿ ಪೇಢಾ, ಕಲಾಕಂದ್, ಡ್ರೆöÊಫ್ರೂಟ್ಸ್ ಬರ್ಫಿ, ಕಾಜು ಬರ್ಫಿ, ಕಾಜು ರೋಲ್, ಕಾಜು ಪಿಸ್ತಾ ಕಟೋರಿ, ಕಾಜು ಪಾನ್, ಕಾಜು ಅಂಜೀರ್ ಬರ್ಫಿ, ಕಾಜು ಅನಾರ್, ಸುತ್ತರ ಪೇಣಿ, ಚಕ್ಕುಲಿ, ಬಾಲುಶಾ, ಜಿಲೆಬಿ, ಜಹಾಂಗೀರ್, ರಸಮಲೈ, ಅವಲಕ್ಕಿ, ಕರದ ಅವಲಕ್ಕಿ, ಬೆಣ್ಣೆಮುರುಕಲು ಸೇರಿ ವಿವಿಧ ಬಗೆ ಸಿಹಿ ಹಾಗೂ ಖಾರದ ತಿನಿಸುಗಳು ನಿಮಗೆ ಸಿಗಲಿವೆ.
ಗ್ರಾಹಕ ಸ್ನೇಹಿ ಈ ಮಳಿಗೆಗೆ ನೀವು ಇಂದೇ ಭೇಟಿ ಕೊಟ್ಟು ನಿಮ್ಮ ನೆಚ್ಚಿನ ತಿನಿಸುಗಳನ್ನು ಖರೀದಿಸಬಹುದು. ಮಿಸ್ ಮಾಡಲೇಬೇಡಿ.. ಮಾಹಿತಿಗಾಗಿ ಮಳಿಗೆಯ ಮೊಬೈಲ್ ಸಂಖ್ಯೆ: ೮೪೩೧೫ ೫೦೭೨೨ಗೆ ಸಂಪರ್ಕಿಸಬಹುದು.