ಮುಧೋಳಕ್ಕೂ ಹಬ್ಬಿದ ಚೈತ್ರಾ ಕುಂದಾಪುರ ಜಾಲ..?
ಬಾಗಲಕೋಟೆ:ರಾಜ್ಯದಲ್ಲಿ ಸದ್ದು ಮಾಡುತ್ತಿರುವ ವಂಚನೆ ಪ್ರಕರಣದ ರೂವಾರಿ ಚೈತ್ರಾ ಕುಂದಾಪುರಗೆ ಸೇರಿದ್ದ ಕಾರು ಜಿಲ್ಲೆಯ ಮುಧೋಳ ನಗರದಲ್ಲಿ ಪತ್ತೆಯಾಗಿದೆ. ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚೈತ್ರಾಳ ಸ್ನೇಹಿತ ಕಿರಣ್ ಎಂಬಾತನ ಬಳಿಯಲ್ಲಿ ಕಾರು ಸಿಕ್ಕಿದ್ದು, ಈತ ಮುಧೋಳದಲ್ಲಿ ಸ್ವಂತ ಡ್ರೆöÊವಿಂಗ್ ಸ್ಕೂಲ್ ನಡೆಸುತ್ತಿದ್ದಾನೆ. ಇಬ್ಬರ ನಡುವೆ ಮೊದಲಿನಿಂದಲೂ ಪರಿಚಯವಿದ್ದು, ಮಹಾರಾಷ್ಟçದ ಸೋಲಾಪುರದಿಂದ ಕಾರು ತಂದು ಇಟ್ಟುಕೊಳ್ಳುವಂತೆ ಕಿರಣ್‌ಗೆ ಚೈತ್ರಾ ತಿಳಿಸಿದ್ದಳು ಎಂದು ಕಿರಣ್ ಪೊಲೀಸರ ಮುಂದೆ ಹೇಳಿದ್ದಾನೆ. ಹೆಚ್ಚಿನ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆಹಾಕುತ್ತಿದ್ದಾರೆ.