T-shirtಗಾಗಿ ಬಾಗಲಕೋಟೆಯಲ್ಲಿ ರಂಪಾ-ರಾಮಾಯಣ: ಸಿಕ್ಕಿದ್ದು ೩ ಬಂಡಲ್ ಬಟ್ಟೆ: ದೋಚಿದ್ದು ಲಕ್ಷಾಂತರ ರೂ. ಪಾನೀಯ...?
ಬಾಗಲಕೋಟೆ:
ನಂ.೪ ಶಿಖರ್ ಧವನ್...!
ಇಂಥದೊಂದು ಸಂಖ್ಯೆ, ಹೆಸರು ಮುದ್ರಿಸಿದ್ದ ಟಿ-ಶರ್ಟ್ ಹೊತ್ತ ಕಾರವೊಂದನ್ನು ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಚರಂತಿಮಠ ಬೆಂಬಲಿಗರು ಜಂಟಿಯಾಗಿ ಹಿಡಿದು ಬಾಗಲಕೋಟೆಯಲ್ಲಿ ಸೋಮವಾರ ರಾತ್ರಿ ರಂಪಾ-ರಾಮಾಯಾಣ ಜರುಗಿದ ಪ್ರಸಂಗ ಬಾಗಲಕೋಟೆಯಲ್ಲಿ ನಡೆಯಿತು.
ಸಗಟು ಮಾರಾಟಗಾರರಾದ ಪ್ರಭುಕಾಂತ ನಾರಾ ಅವರಿಗೆ ಸಂಬಂಧಿಸಿದ ವಾಹನವನ್ನು ಮಲ್ಲಿಕಾರ್ಜುನ ಚರಂತಿಮಠ ಅವರ ಬೆಂಬಲಿಗರು ಸೋಮವಾರ ರಾತ್ರಿ ೯ಕ್ಕೆ ಬೆನ್ನಟ್ಟಿ ಬಂದಿದ್ದಾರೆ. ಚಾಲಕ ಎಂದಿನಿಂತೆ ತನ್ನ ವಾಹನವನ್ನು ನಾರಾ ಅವರ ಗೋದಾಮಿನ ಆವರಣದಲ್ಲಿ ಇರಿಸಿ ಹೋಗಿದ್ದಾನೆ.ಆಗ ಚುನಾವಣಾ ಅಧಿಕಾರಿಗಳಿಗೆ ಬರುವಂತೆ ದೂರು ಸಲ್ಲಿಸಲಾಗಿದೆ. ಯಾವುದೋ ದುಡ್ಡಿನ ಮೂಟೆಯೇ ಸಿಕ್ಕಿದೆ ಎಂಬ ಸುದ್ದಿ ಹರಡಿ ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಜಮಾವಣೆಗೊಂಡಿದ್ದಾರೆ. ಚುನಾವಣಾ ಅಧಿಕಾರಿಗಳು ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸದಿದ್ದಾಗ ಸೃಷ್ಟಿಯಾಗಿದ್ದು ಹೈಡ್ರಾಮಾ.
ಅಧಿಕಾರಿಗಳ ವಿಳಂಬ, ವಾಹನ ಚಲಾಯಿಸುತ್ತಿದ್ದ ಚಾಲಕ ಊಟಕ್ಕೆ ತೆರಳದಿದ್ದರಿಂದ ವಾಹನದ ಕೀಲಿ ಕೈ ಸಿಗೋದು ತಡವಾಗಿದ್ದರಿಂದ ಘೋಷಣೆಗಳು, ಆಕ್ರೋಶ ಜೋರಾಗಿದೆ. ನಾರಾ ಅವರ ಗೋದಾಮಿನ ಆವರಣ ಪ್ರವೇಶಿಸಿದ ಕಾರ್ಯಕರ್ತರು "ಇನ್ನ ಬಾಳ ದಿನ ಇಲ್ಲ...ನಮ್ದ ಐತಿ ನೋಡ" ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ.
ಈ ವೇಳೆಗೆ ಪೊಲೀಸ್ ಬಲವೂ ಹೆಚ್ಚಿದ್ದು ಕಾರು ತೆಗೆದು ನೋಡಿದಾಗ ನಂ.೪ ಶಿಖರ್ ಧವನ್ ಬರೆದಿರುವ ಟಿ-ಶರ್ಟ್ ಪತ್ತೆ ಆಗಿದೆ. ನಾಲ್ಕು ಸಂಖ್ಯೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರದಾಗಿರುವುದರಿಂದ ಅವರಿಗೆ ಸೇರಿದ್ದ ಟಿ-ಶರ್ಟ್ ನಾರಾ ಅವರ ಗೋದಾಮು ತೆಗೆದರು ಇನ್ನೂ ಟಿ-ಶರ್ಟ್ ಗಳು ಪತ್ತೆಯಾಗಲಿವೆ , ಗೋದಾಮು ಸೀಸ್ ಮಾಡಬೇಕೆಂದು ಬಸವರಾಜ ಹೊನ್ನಳ್ಳಿ, ಬಸವರಾಜ ಅಂಬಿಗೇರ, ರಾಜು ಗೌಳಿ ಸೇರಿ ಹಲವರು ಪಟ್ಟು ಹಿಡಿದು ಸಿಪಿಐ ನಾಗರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅತ್ತ ಮುಖಂಡರಾದ ನಾಗರಾಜ ಹದ್ಲಿ, ದುಂಡಪ್ಪ ಏಳಮ್ಮಿ ಅವರು ಕೂಡ ಆಕ್ರೋಶ ಹೊರಹಾಕಿದರು.
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆಯೇ ಮಾರುಕಟ್ಟೆಗೆ ತೆರಳಬೇಕಿದ್ದ ವಾಹನದಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳು ಪಾನಿಯಾ, ಕುಡಿಯುವ ನೀರು ಮತ್ತು ಬಿಸ್ಕಟ್ ಬಂಡಲಗಳನ್ನು ಕೆಲವು ದುಷ್ಕರ್ಮಿಗಳು ದೋಚಿದ್ದಾರೆ ಎಂದು ಪ್ರಭುಕಾಂತ ನಾರಾ ಹಾಗೂ ಅವರ ಸಿಬ್ಬಂದಿ ಆರೋಪಿಸಿದರು.
ಇತ್ತ ಗೋದಾಮಿನಲ್ಲಿ ಇನ್ನೂ ಹೆಚ್ಚಿನ ಟಿಶರ್ಟ್ ಸಂಗ್ರಹಿಸಲಾಗಿದೆ. ಇಂಥ ಅಕ್ರಮಗಳು ಇವರಿಗೆ ಹೊಸತಲ್ಲ ಎಂದುಜೋರಾಗಿ ಕೈ ಕಾರ್ಯಕರ್ತರು, ಮಲ್ಲಿಕಾರ್ಜುನ ಬೆಂಬಲಿಗರು ಪಟ್ಟು ಹಿಡಿದಾಗ ಪೊಲೀಸರ ಸಮ್ಮುಖದಲ್ಲಿ ಚುನಾವಣಾ ಅಧಿಕಾರಿಗಳು ಗೋದಾಮಿನ ಬಾಗಿಲು ತೆರೆದು ಮಾಧ್ಯಮಗಳ ಕ್ಯಾಮರಾಗಳ ಜತೆಗೆ ಪರಿಶೀಲಿಸಿದಾಗ ಯಾವುದೇ ಅಕ್ರಮ ಅಲ್ಲಿ ಪತ್ತೆ ಆಗಲಿಲ್ಲ.
ಟಿ-ಶರ್ಟ್ ಗೊಂದಲದ ಕುರಿತು ಪ್ರತಿಕ್ರಿಯೆ ನೀಡಿದ ಪ್ರಭುಕಾಂತ ನಾರಾ ಅವರು, ಜೂ.೪ರಂದು ಪರಿಚಯಸ್ಥರ ತಾಯಿಯ ನೆನಪಿನಲ್ಲಿ ಕ್ರಿಕೆಟ್ ಟೋರ್ನಾಮೆಂಟ್ ನಡೆಸಲಾಗುತ್ತಿದೆ.ಅದಕ್ಕಾಗಿ ತಂದಿದ್ದ ಟಿಶರ್ಟ್ ಗಳಿವು ಇದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಅವರು ವಾಹನ ಬೆನ್ಙಟ್ಟಿ ಬಂದಿದ್ದೇವೆ ಎನ್ನುತಾರೆ ಆಗಲೇ ವಾಹನ ಹಿಡಿದು ಕೇಳಿದ್ದರೆ ಚಾಲಕ ಎಲ್ಲವನ್ನೂ ಹೇಳುತ್ತಿದ್ದ ಆದರೆ ಇವರು ಚಾಲಕನ ಗಮನಕ್ಕೂ ಬಾರದಂತೆ ಬೆನ್ನಟ್ಟಿ ಬಂದಿದ್ದಾರೆ ಆತ ಸಹಜವಾಗಿ ವಾಹನ ನಿಲ್ಲಿಸಿ ಮನೆಗೆ ಊಟಕ್ಕೆ ತೆರಳಿದ್ದಾನೆ.ಇಲ್ಲಿ ನೋಡಿದರೆ ಇವರು ರಾಮಾಯಣ ಸೃಷ್ಟಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ನಾರಾ ಮನೆತನಕ್ಕೆ ಅದರದೇ ಆದ ವೈಶಿಷ್ಟ್ಯತೆಯಿಂದ ಪ್ರತಿಭಟನೆ ಮಾಡಲು ಬಂದವರು ಸೋಲಿನ ಭೀತಿಯಿಂದ ಹತಾಶರಾಗಿದ್ದಾರೆ.ಬಂದವರೆಲ್ಲ ಲಪುಟರೇ. ಸಭ್ಯಸ್ಥರಾಗಿದ್ದರೆ ವಾಹನದಲ್ಲಿನ ಜ್ಯೂಸ್ ಗಳನ್ನು ದೋಚುತ್ತಿರಲಿಲ್ಲ. ಅಗತ್ಯ ದಾಖಲೆ ಒದಗಿಸಿ ಇದಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದು ಆಕ್ರೋಶ ಹೊರಹಾಕಿದರು.
ಬಸವರಾಜ ಕಳಸ, ಗಣೇಶ ಚವಾಣ, ನಾರಾಯಣ ದೇಸಾಯಿ, ಪುನಿತ್ ಅರಳಿ ಸೇರಿದಂತೆ ೨೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಯುವಕರು ಜಮಾವಣೆಗೊಂಡಿದ್ದರು.
ಮೇಲಾಧಿಕಾರಿಗಳು ಕಾಣದ ಕೈಗಳ ಜತೆಗೆ ಶಾಮೀಲಾಗಿ ಕೆಲಸ ಮಾಡುತ್ತಿವೆ. ವಾಹನ ಹಿಡಿದು ಎರಡು ಗಂಟೆಯಾದರೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದಿರಲಿಲ್ಲ. ನ್ಯಾಯ ಸಮ್ಮತ ಚುನಾವಣೆ ನಡೆಯಬೇಕೆಂಬುದು ನಮ್ಮ ಆಗ್ರಹ
ನಾಗರಾಜ ಹದ್ಲಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ
ವಾಹನದಲ್ಲಿ ನಂ.೪ ಶಿಖರ್ ಧವನ್ ಎಂದು ಬರೆದಿರುವ ಮೂರು ಮೂಟೆ ಟಿಶರ್ಟ್ಗಳು ಸಿಕ್ಕಿವೆ. ಯಾರಿಗೆ ಸೇರಿದ್ದು ಏನೆಂಬುದರ ತನಿಖೆ ಇನ್ನಷ್ಟೇ ನಡೆಯಬೇಕು. ಆದರೆ ಭುವನ್ ನಾರಾ ಅವರಿಗೆ ಸಂಬAಧಿಸಿದ ಗೋದಾಮು ಪರಿಶೀಲಿಸಲಾಗಿ ಗೋದಾಮಿನಲ್ಲಿ ಯಾವುದೇ ಅಕ್ರಮ ಕಂಡು ಬಂದಿರುವುದಿಲ್ಲ.
ಸುನೀಲ್ ಸಣ್ಣಕ್ಕಿ, ಪರಿಶೀಲನೆ ಕೈಗೊಂಡ ಅಧಿಕಾರಿ