ಹಿಂಜಾವೇ ಮುಖಂಡನ ಬಂಧನ: ಮತ್ತೆ ಕಾವು ಪಡೆದ ಕೆರೂರು ಪಟ್ಟಣ..!
ಸಿಪಿಐ ಮೇಲೆ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಹಿಂಜಾವೇ ಮುಖಂಡ ಶರಣಬಸು ಸಜ್ಜನ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆರೂರು ಈಗ ಜಿಲ್ಲೆಯಲ್ಲಿ ಮತ್ತೆ ಚರ್ಚೆಯಲ್ಲಿದೆ
ನಾಡನುಡಿ ನ್ಯೂಸ್
ಬಾಗಲಕೋಟೆ:
ಇತ್ತೀಚೆಗಷ್ಟೇ ಹೊತ್ತಿ ಉರಿದು ರಾಜ್ಯದಲ್ಲಿ ಸದ್ದು ಮಾಡಿದ್ದ ಕೆರೂರು ಪಟ್ಟಣ ಮತ್ತೊಮ್ಮೆ ಸುದ್ದಿಯಲ್ಲಿದೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪೊಲೀಸರು- ಹಿಂಜಾವೇ ಕಾರ್ಯಕರ್ತರ ನಡುವಿನ ಸಂಘರ್ಷವೀಗ ಕಾವು ಪಡೆದುಕೊಂಡಿದೆ.
ಮಂಗಳವಾರ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಿಪಿಐ ಹಾಗೂ ಹಿಂದು ಕಾರ್ಯಕರ್ತರ ಮಧ್ಯೆ ವಾಗ್ವಾದ ಏರ್ಪಟ್ಟು ೧೧ ಜನರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು.
ಇದಾದ ನಂತರ ಸಂಘಟನೆ ಮುಖಂಡ ಶರಣಬಸು ಸಜ್ಜನ ಅವರನ್ನ ವಶಕ್ಕೆ ಪಡೆದಿರುವ ಪೊಲೀಸರು ರಾತ್ರಿಯಿಡಿ ಠಾಣೆಯಲ್ಲಿ ಅವರಿಗೆ ಚಿತ್ರಹಿಂಸೆ ನೀಡಿದೆ ಎಂದು ಸಂಘಟನೆ ಆರೋಪಿಸಿದೆ.
ಅಲ್ಲದೇ ಹಿಂದೂ ಕಾರ್ಯಕರ್ತರನ್ನು ಪದೇ,ಪದೆ ಕೆರೂರಿನಲ್ಲಿ ಗುರಿಯಾಗಿಸಲಾಗುತ್ತಿದೆ ಎಂದು ಮುಖಂಡರು ದೂರಿದ್ದು, ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.