*ಭಜರಂಗದಳ ನಿಷೇಧ: ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ಕಣಕ್ಕಿಳಿದ ಸಂಘಟನೆ ಕರೇ ನೀಡಿದ್ದೇನು..? ಇಲ್ಲಿದೆ ಓದಿ*

*ಭಜರಂಗದಳ ನಿಷೇಧ: ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ಕಣಕ್ಕಿಳಿದ ಸಂಘಟನೆ ಕರೇ ನೀಡಿದ್ದೇನು..? ಇಲ್ಲಿದೆ ಓದಿ*

ಬಾಗಲಕೋಟೆ:
ಭಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವುದು ಹಿಂದೂ ಪರ ಸಂಘಟನೆಗಳನ್ನು ತೀವ್ರ ಕೆರಳಿಸಿದೆ.

ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ  ಅವರು ಸಹ ಕರ್ನಾಟಕ ರ‌್ಯಾಲಿಗಳಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ಇದೀಗ ಭಜರಂಗಳ ದಳ ಕೂಡ ಹೊಸದೊಂದು ಅಭಿಯಾನದ ಮೂಲಕ ‌ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಡಲು ಮುಂದಾಗಿದೆ.

ಹನುಮನನಾಡು ಕರ್ನಾಟಕದಲ್ಲೇ ಭಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಹೇಳಿರುವುದಕ್ಕೆ ನಾಯಕರುಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವಾಗಲೇ ರಾಜ್ಯದ‌ ಮನೆ,ಮನೆಗೆ ಈ ವಿಚಾರ ತಿಳಿಸಲಹ ವಿಶ್ವ ಹಿಂದು ಪರಿಷದ್, ಭಜರಂಗದಳ ಮುಂದಾಗಿವೆ.

ಇಂದು ಮೇ ೪ರ ಗುರುವಾರ ಸಂಜೆ ರಾಜ್ಯದ ಎಲ್ಲ ದೇಗುಲಗಳಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡುವುದರ ಮೂಲಕ ಕಾಂಗ್ರೆಸ್ಸಿಗೆ ತಕ್ಕಪಾಠ ಕಲಿಸಲು ಸೂಚನೆ ಕೊಟ್ಟಿದೆ. ರಾಜ್ಯದ ಎಲ್ಲ ದೇಗುಲಗಳಲ್ಲಿ ಕಾರ್ಯಕ್ರಮ ನಡೆಸುವಂತೆ ಅದು ಕರೆ ನೀಡಿದೆ.