ಹುಬ್ಬಳ್ಳಿ ಹಿಂದೂ ಕಾರ್ಯಕರ್ತನ ಬಂಧನ ಮಾಜಿ ಸಚಿವ ಮುರುಗೇಶ್ ನಿರಾಣಿ ಖಂಡನೆ
ಬಾಗಲಕೋಟೆ: ಹುಬ್ಬಳ್ಳಿಯ ಹಿಂದು ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನ ಕಾಂಗ್ರೆಸ್ ಪಕ್ಷದ ಹಿಂದು ವಿರೋಧಿ ನೀತಿಗೆ ಸಾಕ್ಷಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಕಿಡಿಕಾರಿದರು.
ಇಡೀ ದೇಶ ,ದೇಶದ ಕೋಟಿ ಕೋಟಿ ಹಿಂದು ಕಾರ್ಯರ್ತರು ರಾಮಮಂದಿರ ಉದ್ಘಾಟನೆಯ ಸಂಭ್ರಮದಲ್ಲಿದ್ದಾರೆ.ಆದರೆ ಇಂತಹ ಸುಸಂದರ್ಭದಲ್ಲಿ ಕಾಂಗ್ರೆಸ್ ೩೦ ವರ್ಷ ಹಳೆಯ ಕೇಸನ್ನು ಕೆದಕಿ ಶ್ರೀಕಾಂತ ಪೂಜಾರಿಯನ್ನು ಬಂಧಿಸಿದೆ.ಇದು ಕೂಡ ಮುಸ್ಲಿಂ ತುಷ್ಟೀಕರಣದ ಒಂದು ಭಾಗವಾಗಿದೆ.ಶ್ರೀಕಾಂತ ಪೂಜಾರಿ ತಮ್ಮ ಪಾಡಿಗೆ ತಾವು ಅಟೊ ಚಲಾಯಿಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.ಆದರೆ ಅಂತವರನ್ನು ರಾತ್ರೋರಾತ್ರಿ ಬಂಧಿಸಿ ಧ್ವೇಷರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ.ಇಂತಹ ಲಜ್ಜೆಗೇಡಿತನ ಹಿಂದು ವಿರೋಧಿ ಸರಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ.ಕೂಡಲೆ ಶ್ರೀಕಾಂತ ಪೂಜಾರಿಯನ್ನು ಬಿಡುಗಡೆ ಮಾಡಬೇಕು.ಈ ಬಗ್ಗೆ ಬಿಜೆಪಿ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.