ಗಣೇಶೋತ್ಸವಕ್ಕೆ ನಿರ್ಬಂಧ ಬೇಡ ಮಂಡಳಿಗಳ ಆಗ್ರಹ
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ವಿಧಿಸಿರುವ ನಿರ್ಬಂಧವನ್ನು ಗಣೇಶೋತ್ಸವ ಮಂಡಳಿಗಳು ವಿರೋಧಿಸಿವೆ
ನಾಡನುಡಿ ನ್ಯೂಸ್
ಬಾಗಲಕೋಟೆ:
ಗಣೇಶೋತ್ಸವ ಸಂದರ್ಭದಲ್ಲಿ ನಗರದಲ್ಲಿ ಸಾರ್ವಜನಿಕ ಮಂಡಳಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು, ಸರ್ಕಾರ ಕೋವಿಡ್ ನಿಯಮಗಳನ್ನು ಅನುಸರಿಸಿಯೇ ಗಣೇಶ ಪ್ರತಿಷ್ಠಾಪನೆಗೆ ಸಿದ್ಧವಿರುವುದಾಗಿ ಮಂಡಳಿಗಳು ತಿಳಿಸಿವೆ.
ನವನಗರದ ಅಂಬೇಡ್ಕರ ಭವನದಲ್ಲಿ ಸಿಪಿಐಗಳಾದ ಐ.ಆರ್.ಪಟ್ಟಣಶೆಟ್ಟಿ ಹಾಗೂ ವಿಜಯ ಮುರಗೊಂಡ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿವಿಧ ಮಂಡಳಿಗಳ ಮುಖಂಡರು ಮಾತನಾಡಿ, ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಕೋವಿಡ್ ನಿಯಮಗಳಿಗೆ ಎಲ್ಲೂ ಚ್ಯುಕ್ತಿಬಾರದಂತೆ ಉತ್ಸವವನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷವೂ ಉತ್ಸವಕ್ಕೆ ಅನುನತಿ ನೀಡಿರಲಿಲ್ಲ. ಮೊದಲೇ ಮುಳುಗಡೆಯಿಂದಾಗಿ ನಗರದಲ್ಲಿ ಹಬ್ಬಗಳು ಕಳೆ ಕಳೆದುಕೊಳ್ಳುತ್ತಿದ್ದು, ಈ ನಡುವೆ ಸರ್ಕಾರ ಇಂಥ ನಿರ್ಧಾರಗಳಿಗೆ ಮುಂದಾಗುವುದು ಸರಿಯಲ್ಲ ಎಂದರು.
ಕೋವಿಡ್ ನಿಯಮದಂತೆ ಅನ್ನ ಸಂತರ್ಪಣೆ ಮಾಡುವುದಿಲ್ಲ. ಇನ್ನುಳದಂತೆ ಮಂಡಳಿಗಳು ಜನಜಂಗಳಿ ಆಗದಂತೆ ನೋಡಿಕೊಳ್ಳಲಿವೆ. ಗಣೇಶೋತ್ಸವ ಮೆರವಣಿಗೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವುದಾಗಿ ತಿಳಿಸಿದರು. ಗಣೇಶೋತ್ಸವ ಮಂಡಳಿಗಳ ಪರವಾಗಿ ಮುಖಂಡರು ಮನವಿ ಸಲ್ಲಿಸಿದರು
ಮನವಿ ಸ್ವೀಕರಿಸಿದ ಸಿಪಿಐ ಐ.ಆರ್.ಪಟ್ಟಣಶೆಟ್ಟಿ ಅವರು ಸಭೆಯ ನಡಾವಳಿಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಕೋವಿಡ್ ಒಂದೇ ಕಾರಣಕ್ಕಾಗಿ ಈ ರೀತಿ ನಿರ್ಬಂಧಗಳು ಅನಿವಾರ್ಯವಾಗಿವೆ. ಇನ್ನುಳಿದಂತೆ ಸಾಂಪ್ರದಾಯಿಕ ಆಚರಣೆಗೆ ಯಾವುದೇ ಅಡ್ಡಿ ಇರುವುದಿಲ್ಲ.ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದರು.