ವಿದ್ಯಾಗಿರಿಯಲ್ಲಿ ಕಳ್ಳತನ- ಹಲವು ಮಳಿಗೆಗಳಿಗೆ ಕನ್ನ
ವಿದ್ಯಾಗಿರಿಯಲ್ಲಿ ಐದಾರು ಮಳಿಗೆಗಳು ಕಳ್ಳತನವಾಗಿದ್ದು,ಎಷ್ಟು ಪ್ರಮಾಣದಲ್ಲಿ ಕಳ್ಳತನವಾಗಿದೆ ಎಂಬ ಅಂದಾಜು ಇನ್ನಷ್ಟೇ ಸಿಗಬೇಕಿದೆ.
ಬಾಗಲಕೋಟೆ ಡಿ.೨೪:
ವಿದ್ಯಾಗಿರಿ ಕಾಲೇಜು ರಸ್ತೆಯ ಹಲವು ಮಳಿಗೆಗಳಿಗೆ ಕಳ್ಳರು ಕನ್ನ ಹಾಕಿರುವ ವರದಿ ಆಗಿದೆ.
ಬುಧವಾರಷ್ಟೇ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ಮಧ್ಯೆಯೂ ಈ ಕಳ್ಳತನ ನಡೆದಿದೆ.
ಕಾಲೇಜು ಸರ್ಕಲ್ ನಿಂದ ಎಂಬಿಎ ಕಾಲೇಜು ಸಂಪರ್ಕಿಸುವ ಮಾರ್ಗದಲ್ಲಿನ ಐದಾರು ಮಳಿಗೆಗಳು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ಮಧ್ಯರಾತ್ರಿ ಗದ್ದನಕೇರಿ ಕ್ರಾಸ್ ನಲ್ಲೂ ಹಲವು ಮಳಿಗೆಗಳು ಕಳ್ಳತನವಾಗಿರುವ ವರದಿ ಆಗಿತ್ತು.
ಚಳಿಗಾಲದ ಸಂದರ್ಭದಲ್ಲಿ ಜನ ಜಾಗೃತರಾಗಿರುವುದಿಲ್ಲ. ಇದನ್ನೇ ಬಂಡವಾಳವಾಗಿಸಿಕೊಳ್ಳುವ ಕಳ್ಳರು ಕನ್ನ ಹಾಕುವ ಕೃತ್ಯಕ್ಕೆ ಮುಂದಾಗುತ್ತಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.