ಕಾಂಗ್ರೆಸ್‌ನಿoದ ಕೇವಲ ಜನರ ಮರುಳು, ರೈತರ ಸಾಲಮನ್ನಾ ಮಾಡಿದ್ದು ಎಚ್‌ಡಿಕೆ: ಡಾ.ದೇವರಾಜ ಪಾಟೀಲ
ಬಾಗಲಕೋಟ : ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನೀಡಿದ ಸರ್ಕಾರವನ್ನು ರಾಜ್ಯದ ಜನರು ನೋಡಿದ್ದಾರೆ. ರೈತರ, ಯುವಕರ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕುಮಾರಸ್ವಾಮಿ ನೇತೃತ್ವ ಜೆಡಿಎಸ್ ಸರ್ಕಾರವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಮತದಾರರು ನಿರ್ಧರಿಸಿದ್ದಾರೆ. ಬಾಗಲಕೋಟ ಕ್ಷೇತ್ರದಲ್ಲೂ ಈ ಬಾರಿ ಪ್ರಜ್ಞಾವಂತ ಮತದಾರರು, ಬದಲಾವಣೆ ಬಯಸಿದ್ದಾರೆ ಎಂದು ಜೆಡಿಎಸ್‌ನ ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿ ಡಾ.ದೇವರಾಜ ಪಾಟೀಲ ಹೇಳಿದರು.
ನಗರದ ವಿವಿಧೆಡೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಅವರು, ಎರಡೂ ರಾಷ್ಟಿçÃಯ ಪಕ್ಷಗಳು, ಕರ್ನಾಟಕದ ಹಿತ ಕಾಯುವಲ್ಲಿ ವಿಫಲವಾಗಿವೆ. ಹೀಗಾಗಿ ರಾಜ್ಯದ ಜನರು ಜೆಡಿಎಸ್ ಬೆಂಬಲಿಸಲು ನಿರ್ಧರಿಸಿದ್ದು, ಬಾಗಲಕೋಟೆ ಕ್ಷೇತ್ರದಲ್ಲೂ ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.
ಸ್ವತAತ್ರ ಸಿಕ್ಕು ೭೫ ವರ್ಷ ಕಳೆದರೂ ದೇಶದ ಬಡತನ ಕಡಿಮೆಯಾಗಿಲ್ಲ. ಪ್ರತಿ ವರ್ಷ ದೇಶದ ಸಾಲ ಹೆಚ್ಚುತ್ತಲೇ ಇದೆ. ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್, ರಸಗೊಬ್ಬರ ಬೆಲೆಗಳು ಗಗನಕ್ಕೇರಿವೆ. ಸಾಮಾನ್ಯ ಜನರ ಬದುಕು ದುಸ್ಥರವಾಗಿದೆ. ಬೆಲೆ ಏರಿಕೆ ಮಾಡಿ ಜನರ ಹಣ ಲೂಟಿ ಮಾಡಲಾಗುತ್ತಿದೆ. ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ಜನರಿಗೆ ಆಶ್ವಾಸನೆ ನೀಡಿ ಜನರಿಗೆ ಮರಳು ಮಾಡಿದ್ದರು. ಆದರೆ, ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಎಂದರು.
ಈ ಬಾರಿ ರೈತರ ಪರವಾಗಿರುವ ಜೆಡಿಎಸ್ ಪಕ್ಷ ಈ ಬಾರಿ ೧೨೫ ಸ್ಥಾನಗಳನ್ನು ಗೆಲುವ ಮೂಲಕ ಸರ್ಕಾರ ರಚಿಸಲಿದೆ. ನಾನು ಕ್ಷೇತ್ರದ ಮೂಲೆ ಮೂಲೆಗೂ ಸಂಚರಿಸಿ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೆನೆ. ಜನ ಇದ್ದರೆ ನಾವುಗಳು ಎನ್ನುವುದು ಮರೆತಿಲ್ಲ. ನಾನು ಬಡಕುಟುಂಬದ ಮನೆತನದಿಂದಲೇ ಬಂದವನು. ನನಗು ಬಡತನದ ನೋವು ಗೊತ್ತಿದೆ. ಕ್ಷೇತ್ರದ ಜನ ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದೇ ನನ್ನ ಗುರಿ ಎಂದರು.
ಪಕ್ಷದ ಪ್ರಮುಖರಾದ ರೇಣುಕಾ ಭಜಂತ್ರಿ, ಯಾಸೀನ ನದಾಫ, ಸಲೀಂ ಮೋಮಿನ, ಅಜೀಜ್ ಬಾಳಿಕಾಯಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.