ಶ್ರಾವಣಮಾಸದ ಉತ್ಸವ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮ
ಬಾಗಲಕೋಟೆ:
ಬವಿವ ಸಂಘದ ಸಂಸ್ಥಾಪಕರಾದ ಶ್ರೀಬೀಳೂರು ಗುರುಬಸವ ಶ್ರೀಗಳ ಪುಣ್ಯಸ್ಮರಣೆ, ಶ್ರಾವಣ ಮಾಸದ ಉತ್ಸವ ಹಾಗೂ ಗ್ರಂಥ ಬಿಡುಗಡೆ ಸಮಾರಂಭವು ಆ.೩೧ರ ಶನಿವಾರ ಜರುಗಲಿದೆ.
ಬಿ.ವಿ.ವಿ.ಸಂಘದ ನೂತನ ಸಭಾಭವನದಲ್ಲಿ ೧೦.೩೦ಕ್ಕೆ ಡಾ.ವಿ.ಎಸ್.ಕಟಗಿಹಳ್ಳಿಮಠ ವಿರಚಿತ ಬೀಳೂರು ಶ್ರೀಗುರುಬಸವ ಮಹಾಸ್ವಾಮಿಗಳ ಜೀವನ ವೃತ್ತಾಂತ ಗ್ರಂಥ ಬಿಡುಗಡೆ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಚರಂತಿಮಠದ ಶ್ರೀಪ್ರಭುಸ್ವಾಮಿಗಳು, ಟೀಕಿನಮಠ ಶ್ರೀಮಲ್ಲಿಕಾರ್ಜುನ ದೇವರು ಅವರು ವಹಿಸುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ವಹಿಸುವವರು, ಬನಹಟ್ಟಿಯ ಹಿರಿಯ ಸಾಹಿತಿ ಪ್ರೊ.ಸಿದ್ದರಾಜ ಪೂಜಾರಿ ಅವರು ಉಪನ್ಯಾನ ನೀಡಲಿದ್ದು, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು ಉಪಸ್ಥಿತರಿವರು,ನಂತರದಲ್ಲಿ ಅನ್ನಸಂತರ್ಪಣೆ ಜರುಗುವುದು, ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್.ಬೋಳಿಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.