೧.೨೭ ಲಕ್ಷ ರೈತರಿಗೆ ೨೫.೨೯ ಕೋಟಿ ರೂ.ಗಳ ಬರ ಪರಿಹಾರ
ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬರದ ಛಾಯೆಯಿಂದ ರೈತರ ಬೆಳೆ ಹಾನಿಗೊಳಗಾಗಿದ್ದು, ಹಾನಿಗೊಳಗಾದ ೧.೨೭ ಲಕ್ಷ ರೈತರಿಗೆ ೧ ರಿಂದ ೪ ಹಂತದಲ್ಲಿ ಒಟ್ಟು ೨೫.೨೯ ಕೋಟಿ ರೂ.ಗಳ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಬರದಿಂದ ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು ೧೯೩೮೦೫ ಹೆಕ್ಟರ್ ಕ್ಷೇತ್ರದ ಬೆಳೆ ಹಾನಿಯಿಂದ ೧೯೯೭೭೬ ಲಕ್ಷ ರೂ.ಗಳÀ ನಷ್ಟ ಉಂಟಾಗಿದೆ ಎಂದು ಅಂದಾಜಿಸಿ, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ನಿಯಮಾವಳಿಗಳನ್ವಯ ೨೬೪೬೯ ಲಕ್ಷ ರೂ.ಗಳ ಇನ್‌ಪುಟ್ ಸಬ್ಸಿಡಿ, ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಬೆಳೆ ಹಾನಿಯಾದ ರೈತರ ಮಾಹಿತಿಯನ್ನು ಪ್ರೂಟ್ಸ ತಂತ್ರಾAಶ ಹಾಗೂ ಬೆಳೆ ಸಮೀಕ್ಷೆ ವರದಿ ಆಧಾರದ ಮೇಲೆ ಪರಿಹಾರ ಪಾವತಿಸಲು ಕ್ರಮ ವಹಿಸಲಾಗಿರುತ್ತದೆ. ಪ್ರಸ್ತುತ ಸರ್ಕಾರದಿಂದ ೧ ರಿಂದ ೪ನೇ ಹಂತದವರೆಗೆ ಜಿಲ್ಲೆಯ ಒಟ್ಟು ೧೬೩೧೮೪ ರೈತರಿಗೆ ತಲಾ ೨ ಸಾವಿರ ರೂ.ಗಳÀಂತೆ ಒಟ್ಟು ರೂ ೩೨.೩೫ ಕೋಟಿ ಪರಿಹಾರ ಹಣ ಪಾವತಿಸಲು ಅನುಮೋದನೆ ನೀಡಲಾಗಿದ್ದು, ಈ ಪೈಕಿ ಪ್ರಸ್ತುತ ೧ ರಿಂದ ೪ ನೇ ಹಂತದವರೆಗೆ ಜಿಲ್ಲೆಯ ಒಟ್ಟು ೧೨೭೫೩೨ ರೈತರಿಗೆ ತಲಾ ೨ ಸಾವಿರ ರೂ.ಗಳಂತೆ ಒಟ್ಟು ೨೫.೨೯ ಕೋಟಿ ರೂ.ಗಳ ಪರಿಹಾರ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬಾಕಿ ಉಳಿದ ರೈತರಿಗೂ ಕೂಡ ಈಗಾಗಲೇ ಡಿಬಿಟಿ ಮೂಲಕ ಪರಿಹಾರ ಜಮೆ ಮಾಡಲು ಅನುಮೋದನೆ ನೀಡಲಾಗಿದ್ದು, ಸದರಿ ಪ್ರಕ್ರಿಯೇ ಪ್ರಗತಿಲ್ಲಿರುತ್ತದೆ. ಜಿಲ್ಲೆಯಲ್ಲಿ ಅಕೌಂಟ್ ರೀಚ್ಡ್ ಮಾಕ್ಸಿಮಮ್ ಕ್ರೆಡಿಟ್ ಲಿಮಿಟ್, ಅಕೌಂಟ್ ಬ್ಲಾಕ್ಡ್, ಇನ್‌ವಾಲಿಡ್ ಅಕೌಂಟ್, ಆಧಾರ ನಾಟ್ ಮ್ಯಾಪ್ಡ್, ಅಕೌಂಟ್ ಕ್ಲೋಸ್ಡ್, ಅಕೌಂಟ್ ಹೋಲ್ಡರ್ ಎಕ್ಸಪೈರ್, ಇನ್ ಆಕ್ಟೀವ್ ಆಧಾರ, ಎನ್‌ಪಿಸಿಐ ಸೀಡಿಂಗ್ ಇಸು, ಎನಿ ಅದರ್ ರಿಜನ್ ಹೀಗೆ ವಿವಿಧ ಕಾರಣಗಳಿಂದ ಒಟ್ಟ ೫೩೦ ರೈತರಿಗೆ ಬರ ಪರಿಹಾರ ಜಮೆಯಾಗಿರುವದಿಲ್ಲ ಎಂದು ತಿಳಿಸಿದ್ದಾರೆ.
೧ ರಿಂದ ೪ ನೇ ಹಂತದಲ್ಲಿ ೫೩೦ ರೈತರಿಗೆ ವಿವಿಧ ಕಾರಣಗಳಿಂದ ಹಣ ಜಮೆಯಾಗದೇ ಇರುವುದರಿಂದ, ಸದರಿ ರೈತರ ಮಾಹಿತಿಯನ್ನು ತಹಶೀಲ್ದಾರರು ಪರಿಶೀಲಿಸಿ, ಆಯಾ ರೈತರಿಗೆ ಹೊಸ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಹಾಗೂ ಈಗಾಗಲೇ ಇರುವ ಬ್ಯಾಂಕ್ ಖಾತೆಯನ್ನು ಸರಿಪಡಿಸುಕೊಳ್ಳುವಂತೆ ಸಲಹೆ ನೀಡಲು ಕ್ರಮವಹಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಾವಾರು ಬರ ಪರಿಹಾರ ಜಮೆ ವಿವರ
ಜಮಖಂಡಿ ತಾಲೂಕಿನ ೨೩೮೨೪ ರೈತರಿಗೆ ಒಟ್ಟು ೪.೭೫ ಕೋಟಿ ರೂ.ಗಳ ಪರಿಹಾರಧನ ಜಮೆ ಆಗಿಗುತ್ತದೆ. ಬೀಳಗಿ ತಾಲೂಕಿನ ೫೧೮೪ ರೈತರಿಗೆ ಒಟ್ಟು ೧.೦೩ ಕೋಟಿ ರೂ, ಮುಧೋಳ ತಾಲೂಕಿನ ೨೪೯೯೩ ರೈತರಿಗೆ ೪.೯೯ ಕೋಟಿ ರೂ, ಬಾದಾಮಿ ತಾಲೂಕಿನ ೧೭೦೪೭ ರೈತರಿಗೆ ಒಟ್ಟು ೩.೩೧ ಕೋಟಿ ರೂ, ಬಾಗಲಕೋಟೆ ತಾಲೂಕಿನ ೧೪೧೧೭ ರೈತರಿಗೆ ೨.೮೦ ಕೋಟಿ ರೂ, ಹುನಗುಂದ ತಾಲೂಕಿನ ೧೧೪೮೪ ರೈತರಿಗೆ ಒಟ್ಟು ೨.೨೭ ಕೋಟಿ ರೂ, ಗುಳೇದಗುಡ್ಡ ತಾಲೂಕಿನ ೫೦೪೪ ರೈತರಿಗೆ ಒಟ್ಟು ೯೭.೬೨ ಲಕ್ಷ ರೂ, ಇಲಕಲ್ಲ ತಾಲೂಕಿನ ೧೦೨೮೮ ರೈತರಿಗೆ ಒಟ್ಟು ೨.೦೩ ಕೋಟಿ ರೂ, ಹಾಗೂ ರಬಕವಿ ಬನಹಟ್ಟಿ ತಾಲೂಕಿನ ೧೫೫೫೧ ರೈತರಿಗೆ ಒಟ್ಟು ೩.೧೦ ಕೋಟಿ ರೂ.ಗಳು ಸೇರಿ ಒಟ್ಟು ೨೫.೨೯ ಕೋಟಿ ರೂ.ಗಳ ಪರಿಹಾರಧನ ಜಮೆ ಆಗಿರುತ್ತದೆ.