ಕುಡಿಯುವ ನೀರಿನ ಕಾಮಗಾರಿ ಪರಿಶೀಲಿಸಿದ ಸಿಇಓ ಕುರೇರ

ಕುಡಿಯುವ ನೀರಿನ ಕಾಮಗಾರಿ ಪರಿಶೀಲಿಸಿದ ಸಿಇಓ ಕುರೇರ
ಬಾಗಲಕೋಟೆ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಗಳ ಪೈಪಲೈನ್‌ಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬುಧವಾರ ಬಾದಾಮಿಯ ಕಟಗೇರಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸ್ಟಾಕ್ ಯಾರ್ಡನಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಸಂಬAಧಿಸಿದ ಪೈಪಲೈನ್‌ಗಳನ್ನು ಪರಿಶೀಲನೆ ಮಾಡಿದರು. ತೋಗುಣಸಿ ಕ್ರಾಸ್ ಹತ್ತಿರ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ ೨೯ ಗ್ರಾಮಗಳಿಗೆ ಪ್ಯಾಕೇಜ-೪ರಡಿ ಕುಡಿಯುವ ನೀರಿನ ಕಾಮಗಾರಿ ಪರಿಶೀಲಿಸಿ, ನಂತರ ಮುರಡಿ ಹಾಗೂ ಪರ್ವತಿ ಗ್ರಾಮಕ್ಕೆ ಸಂಬAಧಿಸಿದ ಜೆ.ಜೆ.ಎಂ ಕಾಮಗಾರಿಗಳನ್ನು ಪರಿವೀಕ್ಷಣೆ ಮಾಡಿದರು.
ಕೋಟೆಕಲ್ಲ, ಲಾಯದಗುಂದಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಜ್ಯಾಕವೆಲ್, ನೀರು ಶೇಖರಣಾ ಕೆರೆ ಮತ್ತು ನೀರು ಶುದ್ದೀಕರಣ ಘಟಕಗಳನ್ನು ವೀಕ್ಷಣೆ ಮಾಡಿ ಸರಿಯಾದ ಪ್ರಮಾಣದಲ್ಲಿ ಅಲಮ್ ಮತ್ತು ಕ್ಲೋರಿನೇಶನ್ ಮಾಡಿ ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಲು ಸೂಚನೆಯನ್ನು ನೀಡಿದರು. 

ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಮ ಪಂಚಾಯರ ವ್ಯಾಪ್ತಿಯ ತಿಮ್ಮಸಾಗರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ, ಕಟಗೇರಿ ಗ್ರಾಪಂ ವ್ಯಾಪ್ತಿಯ ಆರ್.ಡಬ್ಲೂಎಸ್ ಕಾಮಗಾರಿಗಳು, ಪರ್ವತಿ ಗ್ರಾಪಂ ಖಾನಾಪೂರ ಎಸ್‌ಸಿ ಗ್ರಾಮದ ಪ.ಪಂ ಕಾಲೋನಿಯ  ಪ್ರಾಥಮಿಕ ಶಾಲೆ ಕಟ್ಟಡ, ಲಾಯದಗುಂದಿ ಗ್ರಾಪಂಯಲ್ಲಿ ಕಲ್ಯಾಣಿ ಕಾಮಗಾರಿ, ಎನ್‌ಎಂಎಲ್‌ಆರ್ ಶೆಡ್ಡ, ಪಂಪ ಹೌಸ್, ಜಿ.ಎಲ್,ಎಸ್,ಆರ್ ಟ್ಯಾಂಕ ರಿಪೇರಿ ಮಾಡುವ ಕಾಮಗಾರಿ, ನೀರಿನ ಶುದ್ದೀಕರಣ ಮಾಡುವ ಕುರಿತು, ನಾಗಾರಾಳ ಎಸ್ ಪಿ ಗ್ರಾಪಂ ಅಂಗನವಾಡಿ ಕಟ್ಟಡ  ಕಾಮಗಾರಿ ಹಾಗೂ ೫ ಪ್ರೀಯಾರಿಟಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಗುಳೇದಗುಡ್ಡ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಹಾಗೂ ಹೊಸ ಆರೋಗ್ಯ ಕೇಂದ್ರ ನಿರ್ಮಾಣದ ಕಾಮಗಾರಿಯನ್ನು ಪರಿಶೀಲಿಸಿದರು. ಭೇಟಿ ಸಂದರ್ಭದಲ್ಲಿ ಆರ್.ಡಬ್ಲೂಎಸ್ ಕಾರ್ಯನಿರ್ವಾಹಕ ಅಭಿಯಂತರ ಆಕಾಶ, ಗುಳೇದಗುಡ್ಡ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಡಿಗೇರ, ಬಾದಾಮಿ ಪಿ.ಆರ್‌ಇಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ತೋಪಲಕಟ್ಟಿ, ಗ್ರಾಪಂ ಪಿಡಿಒ ರಾಮಚಂದ್ರ ಮೇಟಿ ಸೇರಿದಂತೆ ಇತರರು ಇದ್ದರು.