ಕೋಟಿ ಬೆಲೆ ಬಾಳು ಜಮೀನು ಕೊಡ್ತೀನಿ ರಾಮ ಮಂದಿರ ಕಟ್ತೀರಾ: ಸಿದ್ದುಗೆ ಸವಾಲಾಕಿದ ಪುರಸಭೆ ಸದಸ್ಯ
ನಾಡನುಡಿ ನ್ಯೂಸ್
ಬಾಗಲಕೋಟೆ:
ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ನಯಾಪೈಸೆ ಕೊಡದೆ ದಿನಕ್ಕೊಂದು ಹೇಳಿಕೆ ಕೊಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಟೀಕೆಗಳು ವ್ಯಕ್ತವಾಗಿತ್ತಿರುವ ಬೆನ್ನಲ್ಲೆ ಬಾದಾಮಿ ಪುರಸಭೆ ಸದಸ್ಯರೊಬ್ಬರು ಎಸೆದಿರುವ ಸವಾಲು ಗಮನಸೆಳೆಯುವಂತಿದೆ.
ಅಯೋಧ್ಯೆ ರಾಮಮಂದಿರ ವಿಚಾರವಾಗಿದ್ದ ಗೊಂದಲ, ವಿವಾದಗಳಿಗೆ ಸರ್ವೊಚ್ಛ ನ್ಯಾಯಾಲವೇ ಕ್ಲೀನ್ ಚಿಟ್ ನೀಡಿದರೂ ಸಿದ್ದರಾಮಯ್ಯ ಅವರು ಮಾತ್ರ ಅದು ವಿವಾದಾತ್ಮಕ ಸ್ಥಳವೇ ಅಲ್ಲಿಗೆ ನಾನು ನಯಾ ಪೈಸೆ ನೀಡುವುದಿಲ್ಲ ಎಂದಿದ್ದರು.
ಇದರಿಂದ ಆಕ್ರೋಶ ಗೊಂಡಿರುವ ಬಾದಾಮಿ ಪುರಸಭೆ ಬಿಜೆಪಿ ಸದಸ್ಯ ಬಸವರಾಜ ಗೊರಕಪ್ಪನವರ ಅವರು ತಮ್ಮ ಬೆಲೆಬಾಳುವ ಒಂದು ಎಕರೆ ಭೂಮಿಯನ್ನು ನೀಡುತ್ತೇನೆ ಮಂದಿರ ಕಟ್ಟಿ ತೋರಿಸಿ ಎಂದು ಸವಾಲೆಸೆದಿದ್ದಾರೆ. ಅವರು ಮಾಡಿರುವ ಟ್ವಿಟ್ ಎಲ್ಲೆಡೆ ವೈರಲ್ ಆಗಿದೆ.