ಬಾಗಲಕೋಟೆಯಲ್ಲಿ ನೇಣಿಗೆ ಶರಣಾದ ವೃದ್ಧ
ನಾಡನುಡಿ ನ್ಯೂಸ್
ಬಾಗಲಕೋಟೆ ಫೆ.೨೮:
ಹಳಪೇಟೆಯ ಹಳೆ ಬಸವೇಶ್ವರ ಬ್ಯಾಂಕ್ ಹತ್ತಿರದ ನಿವಾಸಿ ವಿಶ್ವನಾಥ ಹಿರೇಮಠ(೬೦) ಎಂಬುವವರು ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಕೌಟುಂಬಿಕ ಕಲಹದಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಹೇಳಲಾಗಿದೆ.
ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದವರಿದಿದೆ.