ಬಾಗಲಕೋಟೆ: ಸಾಮಾಜಿಕ ಕಟ್ಟಳೆಗೆ ಒಳಪಟ್ಟು ನಾಲ್ಕು ಗೋಡೆಗಳಲ್ಲಿಯೇ ಜೀವನ ಕಳೆಯುತ್ತಿರುವ ಸ್ತಿçÃಕುಲಕ್ಕೆ ಚನ್ನಮ್ಮ ರತ್ನಳಾಗಿ ಪ್ರಜ್ವಲಿಸಿದ್ದಾಳೆ ಎಂದು ಶಾಸಕ ಎಚ್.ವೈ.ಮೇಟಿ ಬಣ್ಣಿಸಿದ್ದಾರೆ.
ನವನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಜರುಗಿದ ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇವಲ ಅಡುಗೆ ಮನೆ ಕೆಲಸಕ್ಕೆ ಸೀಮಿತವಾಗಿದ್ದ ಅಂದಿನ ಹೆಣ್ಣು ಮಕ್ಕಳು ಅನೇಕ ಶೋಷಣೆಗಳಿಗೆ ಒಳಗಾಗಿ ಸಮಾಜದ ದೃಷ್ಠಿಯಲ್ಲಿ ಅಬಲೆಯಾಗಿದ್ದಳು. ಆ ಸಮಯದಲ್ಲಿ ಕಾಕತಿ ಧೂಳಪ್ಪ ದೇಸಾಯರ ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿದ ಚೆನ್ನಮ್ಮಳು ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಕನ್ನಡದ ಮೊದಲ ಮಹಿಳೆಯಾಗಿದ್ದಾಳೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಜಮಖಂಡಿಯ ಡಾ.ಶಾರದಾ ಮಳ್ಳೂರ ಮಾತನಾಡಿ, ಒಂದು ಕುಟುಂಬಕ್ಕೆ ಒಬ್ಬ ಗಂಡು ಮಗ ನಿರ್ವಹಿಸಬೇಕಾಗಿರುವದಕಿಂತ ಹೆಚ್ಚಿನ ಸಾಹಸ ಮಾಡಿದ ವೀರ ಮಹಿಳೆ ಚನ್ನಮ್ಮ ಎಂದು ಬಣ್ಣಿಸಿದರು. ಚನ್ನಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದರೂ, ಲಿಂಗ ಪೂಜೆ, ಯೋಗ, ಕುದುರೆ ಸವಾರಿ, ಯುದ್ದಕಲೆಗಳಲ್ಲಿ ಪರಿಣಿತಳಾಗಿದ್ದಳು. ಅಂಥ ವೀರವನಿತೆಯ ಆದರ್ಶ ಕಥೆಗಳನ್ನು ಪಾಲಕರು ತಮ್ಮ ಮಕ್ಕಳಿಗೆ ಹೇಳುವುದಲ್ಲದೇ ಕಿತ್ತೂರಲ್ಲಿರುವ ಸ್ಮಾರಕಗಳ ಬಗ್ಗೆ ಕಲ್ಪನೆ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ಮಾತನಾಡಿ, ಭಾರತ ದೇಶದಲ್ಲಿ ಆಚಾರ ವಿಚಾರ ಯೋಗ ಧರ್ಮ ಹೇರಳವಾಗಿ ಇದ್ದರೂ ಇಂದಿನ ಯುವಜನತೆ ಅವನ್ನು ಅನುಸರಿಸುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ. ಇಂದಿನ ದುಸ್ಥಿತಿ ಏನೆಂದರೆ ಪಾಶ್ಚಾತರು ಭಾರತದ ಎಲ್ಲ ಕಾರ್ಯಗಳನ್ನು ಗೌರವಿಸುತ್ತಿದ್ದಾರೆ ಆದರೆ ಇಲ್ಲಿಯ ಯುವ ಜನತೆ ಪಾಶ್ಚಾತರನ್ನು ಅನುಸರಿಸುತ್ತಿದ್ದಾರೆ ಎಂದರು.
ಸಮಾಜದ ಮುಖಂಡ ಹಾಗೂ ಕರ್ನಾಟಕ ರಕ್ಷಣಾ ಹೋರಾಟದ ಅಧ್ಯಕ್ಷ ಬಸವರಾಜ ದರ್ಮಾಂತಿ ಮಾತನಾಡಿ ಮಹಾಮಣಿಯರು ಮತ್ತು ಮಾತೆಯರ ಸಾಹಸ ರಾಷ್ಟçಮಟ್ಟದಲ್ಲಿ ತಲುಪಿ ರಾಷ್ಟಿçÃಯ ವ್ಯಕ್ತಿಗಳಾಗಬೇಕಾಗಿದೆ. ಆದರೆ ಇಂದು ಮಹಾ ನಾಯಕರ ಜಯಂತ್ಯೋತ್ಸವಗಳು ಒಂದು ಜಾತಿ ಧರ್ಮಕ್ಕೆ ಸೀಮಿತಗೊಳ್ಳುತ್ತಿರುವುದು ವಿಷಾದನೀಯ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಎಚ್.ವೈ.ಮೇಟಿ ಅವರು ಚೆನ್ನಮ್ಮ ಸಭಾಭವನಕ್ಕೆ ಅನುದಾನ ನೀಡುವುದಾಗಿ ಘೋಷಿಸಿದರು.
ಸಮಾಜದ ಮುಖಂಡರಾದ ಎಸ್.ಎಂ.ಸಿoಧೂರ, ಸಂಗಮೇಶ ದೊಡ್ಡಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸ್ವಾಗತಿಸಿದರು. ಶಂಕರಲಿAಗ ದೇಸಾಯಿ ನಿರೂಪಿಸಿದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ರವಿ ಪಟ್ಟಣದ, ಸಗರಸಭೆ ಸದಸ್ಯ ಚನ್ನವೀರ ಅಂಗಡಿ, ನಿಂಗಪ್ಪ ದೊಡಮನಿ ಸೇರಿದಂತೆ ಇತರರು ಇದ್ದರು.
ಬಾಕ್ಸ್
ಏಕಪಾತ್ರಾಭಿನಯ ಮಾಡಿದ ಎಡಿಸಿ : ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಚನ್ನಮ್ಮ ಹಾಗೂ ಬ್ರೀಟಿಷರ ಪರ ಬಂದ ಗೌಡ ಹಾಗೂ ಸಂಗೋಳ್ಳಿ ರಾಯಣ್ಣನ ನಡುವೆ ನಡೆದ ಸಂಭಾಷಣೆಯ ಏಕ ಪಾತ್ರಾಭಿನಯವನ್ನು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ಅಮೋಘವಾಗಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದರು.