ದಸರಾ ರಥೋತ್ಸವ: ಕೋಟೆನಗರಿಯಲ್ಲಿ ತಿರುಪತಿ ವೈಭವ ಅನಾವರಣ
ಬಾಗಲಕೋಟೆ:
ವೆಂಕಟಪೇಟೆ ಹಾಗೂ ನವನಗರದಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿ ದಸರಾ ಪ್ರಯುಕ್ತ ಅದ್ಧೂರಿಯಾಗಿ ರಥೋತ್ಸವ ಜರುಗಿತು.
ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ರಥವನ್ನೇರಿದ ಶ್ರೀವೆಂಕಟೇಶನ ನೆನದು ಭಕ್ತಿ ಮೆರೆದರು. " ಗೋವಿಂದ ಗೋವಿಂದ" ನಾಮಸ್ಮರಣೆ ರಥೋತ್ಸವ ಪೂರ್ಣಗೊಳ್ಳುವವರೆಗೂ ಮೊಳಗಿದವು.
ಬಾಗಲಕೋಟೆಯ ವೆಂಕಪೇಟೆ ವೆಂಕಪ್ಪ, ನವನಗರದಲ್ಲಿರುವ ಕಿಲ್ಲಾ ವೆಂಕಪ್ಪನ ದೇಗುಲಗಳಲ್ಲಿ ಭಕ್ತರ ದಂಡು ಹರಿದು ಬಂದಿತು.
ಚಿಕ್ಕತಿರುಪತಿ ಎಂದ್ದೇ ಖ್ಯಾತಿಗಳಿಸಿರುವ ವಿದ್ಯಾಗಿರಿ ಬಾಲಾಜಿ ಮಂದಿರದಲ್ಲಿ ಬೆಳಗ್ಗೆಯಿಂದ ಹೋಮ ಹವನಗಳು ಜರುಗಿದವು.ದೇವಸ್ಥಾನವನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು.
ಸಾಯಿ ಮಂದಿರದಲ್ಲೂ ವಿಶೇಷ ಪೂಜೆ
ವಿಜಯದಶಮಿ ದಿನದಂದು ಶ್ರೀ ಶಿರಡಿಸಾಯಿಬಾಬಾರ ಪುಣ್ಯ ಸ್ಮರಣೆ ಹಿನ್ನೆಲೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಭಾರೀ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು.