ಯಾರಾಗಲಿದ್ದಾರೆ ಬಾಗಲಕೋಟೆಯ ಪ್ರಥಮ ಪ್ರಜೆ..?
* ಇಲ್ಲಿದೆ ನೋಡಿ ಯಾರೆಂಬ ಮಾಹಿತಿ * ಪುರಪಿತೃಗಳಿಂದ ಭರ್ಜರಿ ಲಾಬಿ..!
ನಾಡನುಡಿ ವಿಶೇಷ
ಬಾಗಲಕೋಟೆ:
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾಟಿ ಪ್ರಕಟಗೊಳ್ಳುತ್ತಿದ್ದಂತೆ ಸದಸ್ಯರಿಂದ ತೀವ್ರ ಲಾಬಿ ಆರಂಭಗೊAಡಿದೆ. ಬಾಗಲಕೋಟೆ ನಗರಸಭೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಹಿರಿಯ ಸದಸ್ಯೆ ಜ್ಯೋತಿ ಭಜಂತ್ರಿ ಅವರು ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಬಹುತೇಕ ಎಲ್ಲ ಸದಸ್ಯರೂ ಅದರ ಮೇಲೆ ಕಣ್ಣು ನೆಟ್ಟಿದ್ದಾರೆ.
ನಗರಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಬಹುತೇಕ ಎಲ್ಲ ಸದಸ್ಯರೂ ಆಕಾಂಕ್ಷಿಗಳಾಗಿದ್ದು, ತಮ್ಮದೇ ಮಾರ್ಗಗಳು, ಆಪ್ತರ ಮೂಲಕ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಮೇಲೆ ಒತ್ತಡ ಹಾಕುವ ಕಾರ್ಯಕ್ಕೂ ಮುಂದಾಗಿದ್ದಾರೆ. ಬಿಜೆಪಿ ನಗರ ಅಧ್ಯಕ್ಷರಾಗಿರುವ ಬಸವರಾಜ ಅವರಾದಿ, ಶ್ರೀನಾಥ ಸಜ್ಜನ, ಶಿವಕುಮಾರ ಬಳ್ಳಾರಿ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಯ ಸ್ಥಾನಕ್ಕೆ ಮೀಲಸಾಗಿರುವುದರಿಂದ ಉಪಾಧ್ಯಕ್ಷ ಸ್ಥಾನವನ್ನೂ ಮಹಿಳೆಯರಿಗೆ ಬಿಟ್ಟುಕೊಟ್ಟು ಅವಕಾಶ ಮಾಡಿಕೊಡಬೇಕೆಂಬ ಕೂಗು ಸಹ ಕೇಳಿ ಬಂದಿದ್ದು, ಅದಕ್ಕಾಗಿ ಪಕ್ಷದ ಮಹಿಳಾ ಮೋರ್ಚಾ ಕಾರ್ಯಕರ್ತರು ಮುಖಂಡರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈಗಾಗಲೇ ನಗರಸಭೆಗೆ ಚುನಾವಣೆ ನಡೆದು ಸದಸ್ಯರ ಆಯ್ಕೆ ಆಗಿ ಎರಡು ವರ್ಷ ಕಳೆದಿದ್ದು, ಮೀಸಲಾತಿ ಗೊಂದಲದಿAದಾಗಿ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಪ್ರಕರಣ ಅಲ್ಲಿ ಇತ್ಯರ್ಥಗೊಂಡಿದ್ದರಿAದ ಇದೀಗ ನಗರಸಭೆಗೆ ಆಡಳಿತ ಅಸ್ತಿತ್ವಕ್ಕೆ ಬರುತ್ತಿದೆ.
ವಿಸಿಸಿ ಐಡಿಯಾ ಬೇರೆ.!:ನಗರಸಭೆಗೆ ಆಡಳಿತ ಅಸ್ತಿತ್ವಕ್ಕೆ ಬರುವುದು ವಿಳಂಬವಾಗಿರುವುದರಿAದ ನಗರದಲ್ಲಿ ಅಭಿವೃದ್ಧಿ ವೇಗಕ್ಕೆ ಹಿನ್ನಡೆ ಆಗಿರುವುದು ಸುಳ್ಳಲ್ಲ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವುದರಿಂದ ಜ್ಯೋತಿ ಭಜಂತ್ರಿ ಅವರ ಆಯ್ಕೆ ಆಗಲಿದೆ. ಆದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಅರ್ಹರನ್ನು ಆಯ್ಕೆ ಮಾಡುವುದು ಶಾಸಕ ಡಾ.ವೀರಣ್ಣ ಚರಂತಿಮಠ ಅವರಿಗೂ ಸವಾಲಾಗಿ ಪರಿಣಮಿಸಲಿದೆ.
ನಗರಸಭೆ ಕಾರ್ಯಚಟುವಟಿಕೆಗಳಿಗೆ ವೇಗ ಒದಗಿಸುವ ಅವಶ್ಯಕತೆಯಿದ್ದು, ಜ್ಯೋತಿ ಭಜಂತ್ರಿ ಅವರಿಗೆ ನಗರಸಭೆ ಕಾರ್ಯವಿಧಾನ ಈಗಾಗಲೇ ಕರಗತವಾಗಿರುವುದರಿಂದ ಯಾವುದೇ ರೀತಿಯಲ್ಲಿ ವಿಳಂಬವಾಗುವುದಿಲ್ಲ. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಕ್ರಿಯಾಶೀಲವಾಗಿರುವವರಿಗೆ ಅಧಿಕಾರ ಕೊಟ್ಟರೆ ಹೆಚ್ಚು ಕೆಲಸಗಳಾಗುತ್ತವೆ ಎಂಬುದು ಚರಂತಿಮಠ ಅವರ ಯೋಚನೆ ಆಗಿದೆ. ಇದರೊಂದಿಗೆ ಜಾತಿ ಲೆಕ್ಕಾಚಾರಗಳು ಸಹ ನಡೆಯುವ ಸಾಧ್ಯತೆಯಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಅಚ್ಛರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.