ನೀವು ಈ ಖಾದ್ಯಗಳಿಗೆ ಮನಸೋಲದೆ ಇರಲು ಸಾಧ್ಯವೇ ಇಲ್ಲ..!

ನಾಡನುಡಿ ದೀಪಾವಳಿ ಪಾಕ್ ಶಾಲೆಯ ಮೂರನೇ ದಿನದ ಆಹಾರ ಖಾದ್ಯಗಳ ವಿವರ ಇಲ್ಲಿದೆ. ಓದುಗರಿಂದ ನಾಡನುಡಿಯ ಈ ಅಂಕಣಕ್ಕೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕೆಲವರು ತಮ್ಮ ವಿಶಿಷ್ಟ ಖಾದ್ಯಗಳ ರೆಸಿಪಿಗಳನ್ನೂ ನಮಗೆ ಕಳುಹಿಸಿಕೊಟ್ಟಿದ್ದಾರೆ.

ನೀವು ಈ ಖಾದ್ಯಗಳಿಗೆ ಮನಸೋಲದೆ ಇರಲು ಸಾಧ್ಯವೇ ಇಲ್ಲ..!

ಹೆಸರಿಟ್ಟಿನ ಉಂಡೆ
ಸಾಮಗ್ರಿ:
ಹೆಸರುಬೇಳೆ: ಒಂದು ಕಪ್‌
ಸಕ್ಕರೆ : ಅರ್ಧ ಕಪ್‌
ತುಪ್ಪ : ಕಾಲು ಕಪ್‌
ಸ್ವಲ್ಪ ಗೋಡಂಬಿ ಚೂರುಗಳು

ಮಾಡುವ ವಿಧಾನ
ಗೋಡಂಬಿಯನ್ನು ಚೂರು ಮಾಡಿ ಹುರಿದಿಟ್ಟುಕೊಳ್ಳಬೇಕು. ಹೆಸರು ಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿದು, ಮಿಕ್ಸಿಯಲ್ಲಿ ಪುಡಿಮಾಡಿಟ್ಟುಕೊಳ್ಳಬೇಕು. ಅನಂತರ ಸಕ್ಕರೆಯನ್ನು ಪುಡಿಮಾಡಿ . ಹೆಸರು ಬೇಳೆ,ಸಕ್ಕರೆಗೆ ತುಪ್ಪ ,ಗೋಡಂಬಿಯನ್ನು ಸೇರಿಸಿ ಉಂಡೆಮಾಡಿದರೆ ಹೆಸರಿಟ್ಟಿನ ಉಂಡೆ ರೆಡಿ.


ಅರಶಿನ ಎಲೆಯ ಕಡುಬು
ಸಾಮಗ್ರಿ:
ಅರಶಿನ ಎಲೆ :ಹತ್ತು
ಅಕ್ಕಿ : ಅರ್ಧ ಕೆಜಿ
ಬೆಲ್ಲ : ಒಂದು ಕಪ್‌
ಕೊಬ್ಬರಿ ತುರಿ: ಒಂದು ಕಪ್‌

ಅಕ್ಕಿ ಯನ್ನು ಸ್ಪಲ್ಪ ದಪ್ಪಕ್ಕೆ ಅರೆದುಕೊಳ್ಳಬೇಕು. ಹಿಟ್ಟನ್ನು ಅರಶಿನ ಎಲೆ ಮೇಲೆ ಹರಡಿ ಇದಕ್ಕೆ ಬೆಲ್ಲ ಮತ್ತು ಕೊಬ್ಬರಿ ತುರಿ ಮಿಶ್ರಣವನ್ನು ಹಾಕಿ ಹಬೆಯಲ್ಲಿ ಬೇಯಿಸಬೇಕು. ಅಲ್ಲಿಗೆ ಮಲೆನಾಡಿನ ವಿಶೇಷವಾದ ಅರಶಿನ ಎಲೆಯ ಕಡುಬು ಸವಿಯಲು ಸಿದ್ಧ.

ಬೇಸನ ಉಂಡೆ 

ಸಾಮಗ್ರಿ : 1 ಕಪ್ ಕಡಲೆ ಹಿಟ್ಟು, 2 ಕಪ್ ಸಕ್ಕರೆ ಪುಡಿ, ½ ಕಪ್ ತುಪ್ಪ, ½ ಚಮಚ ಏಲಕ್ಕಿ ಪುಡಿ, 5-6 ಒಣದ್ರಾಕ್ಷೆ, 6-7 ಗೋಡಂಬಿ.
ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಕಡಲೆ ಹಿಟ್ಟು ಹಾಕಿ ಪರಿಮಳ ಬರುವ ವರೆಗೆ ಹುರಿದು ಕೆಳಗಿಳಿಸಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ. ತುಪ್ಪದಲ್ಲಿ ಹುರಿದ ಗೋಡಂಬಿ ಚೂರು, ದ್ರಾಕ್ಷಿ ಚೂರು, ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ನಿಂಬೆ ಗಾತ್ರದ ಉಂಡೆ ಮಾಡಿ ಲಾಡು ಕಟ್ಟಿ. ಈ ಲಾಡು ಪರಿಮಳ ದಿಂದ ಕೂಡಿ ಸ್ವಾದಿಷ್ಟವಾಗಿರುತ್ತದೆ.

ಗೆಣಸಿನ‌ ಪಾಯಸ
ಸಾಮಗ್ರಿ:
ಸಣ್ಣಗೆ ಹೆಚ್ಚಿದ ಗೆಣಸಿನ ಹೋಳುಗಳು ಒಂದು ಕಪ್,  ಬೆಲ್ಲ ಅರ್ಧ ಕಪ್, ತೆಂಗಿನ ಹಾಲು ಒಂದು ಕಪ್, ಏಲಕ್ಕಿ ಪುಡಿ ಅರ್ಧ ಚಮಚ, ಒಣ ದ್ರಾಕ್ಷಿ, ಗೊಡಂಬಿ ಚುರುಗಳು ಸ್ವಲ್ಪ, ತುಪ್ಪ 2 ಚಮಚ.
ಮಾಡುವ ವಿಧಾನ
ಗೆಣಸಿನ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ ( 2 ವಿಷಲ್) ಬಾಣಲೆಯಲ್ಲಿ ತೆಂಗಿನ ಹಾಲು ಬೆಂದ ಗೆಣಸಿನ ಹೋಳು, ಬೆಲ್ಲ,ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ ಬೇಕಿದ್ದಲ್ಲಿ ಮತ್ತಷ್ಟು ಹಾಲು ಹಾಕಿ ಕಲಕಿ ತುಪ್ಪದಲ್ಲಿ ಹುರಿದ ಗೊಡಂಬಿ ದ್ರಾಕ್ಷಿ ಯನ್ನು ಸೇರಿಸಿದರೆ ಆರೋಗ್ಯಕರವಾದ ಗೆಣಸಿನ ಪಾಯಸ ಸಿದ್ಧ.